ಬೆಂಗಳೂರು:
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೈಯದ್ ಅಜೀಂಪೀರ್ ಖಾದ್ರಿ ಅವರೊಂದಿಗೆ ಬುಧವಾರ ಬೆಂಗಳೂರಿನಿಂದ ಅವರ ಹುಟ್ಟೂರಾದ ಶಿಗ್ಗಾಂವ್‌ಗೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವ ಸಾಧ್ಯತೆಯಿದೆ.
ಕಾಂಗ್ರೆಸ್ ಪಕ್ಷವು ಯಾಸಿರ್ ಅಹಮದ್ ಖಾನ್ ಅವರಿಗೆ ಉಪಚುನಾವಣೆ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡ ಖಾದ್ರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಖಾದ್ರಿ ಬೆಂಬಲಿಗರನ್ನು ಜಮೀರ್ ಸಮಾಧಾನ ಪಡಿಸಲು ಯತ್ನಿಸಿದರು. ಈ ವೇಳೆ ಶಿಗ್ಗಾಂವ್‌ನಲ್ಲಿ ಖಾದ್ರಿ ಅವರ ಕಾರನ್ನು ಧ್ವಂಸಗೊಳಿಸಲಾಗಿದೆ.
ಶನಿವಾರದಂದು ಜಮೀರ್ ರಾಯಭಾರಿಯಾಗಿ ಕಾರ್ಯನಿರ್ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಸಭೆ ಏರ್ಪಡಿಸಿದ್ದು, ಖಾದ್ರಿ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಕಾಂಗ್ರೆಸ್ ಗೆಲ್ಲಬೇಕು. ಹೀಗಾಗಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರ ನಾಮಪತ್ರ ವಾಪಸ್ ತೆಗೆಸುವಂತೆ ಪಕ್ಷದೆ ನಾಯಕರಿಗೆ ಮನವಿ ಮಾಡಿದ್ದೇನೆ. ಮುಂದಿನದ್ದನ್ನು ಅಲ್ಲಾಹುವಿಗೆ ಬಿಟ್ಟಿದ್ದೇನೆ’ ಎಂದರು.
ನಾಮಪತ್ರ ಹಿಂಪಡೆಯಬೇಡಿ ಎಂದು ನನ್ನ ಬೆಂಬಲಿಗರು ಹೇಳುತ್ತಿದ್ದಾರೆ. ನಾಮಪತ್ರ ವಾಪಸ್ ಪಡೆದುಕೊಂಡರೆ ಆತ್ಮಹತ್ಯೆ ಮಾಡುವ ಬೆದರಿಕೆಯನ್ನು ಕಾರ್ಯಕರ್ತರು ಹಾಕುತ್ತಿದ್ದಾರೆ’ ಎಂದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರ ಕೆಲಸ ಮಾಡಿದ್ದೇನೆ ಎಂಬ ತಮ್ಮ ವಿರೋಧಿಗಳ ಆರೋಪವನ್ನು ಖಾದ್ರಿ ತಳ್ಳಿಹಾಕಿದ್ದಾರೆ. ಶಿಗ್ಗಾಂವಿಯಲ್ಲಿ ಬಿಜೆಪಿಯನ್ನು ಸೋಲಿಸಲು ನಾನು ಕಾಂಗ್ರೆಸ್ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡರು.
ಮೂಲಗಳ ಪ್ರಕಾರ, ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಅವರಿಂದ ತೆರವಾದ ಎಂಎಲ್‌ಸಿ ಸ್ಥಾನವನ್ನು ಖಾದ್ರಿ ಅವರಿಗೆ ಭರವಸೆ ನೀಡಲಾಯಿತು, ಅವರ ಅವಧಿ ಜುಲೈ 21, 2026 ರವರೆಗೆ ಇರುತ್ತದೆ. ಅಕ್ಟೋಬರ್ 29 ರಂದು ಎರಡು ಎಂಎಲ್‌ಸಿ ಸ್ಥಾನಗಳು ಖಾಲಿಯಾಗುತ್ತಿವೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಖಾದ್ರಿ ಅವರನ್ನು ಶೈಕ್ಷಣಿಕ ಕೋಟಾದಡಿ ಪರಿಷತ್ ಸದಸ್ಯ ಸ್ಥಾನಕ್ಕೆ ಪರಿಗಣಿಸಬಹುದು ಎಂದು ಹೇಳಲಾಗುತ್ತದೆ.