ನ್ಯಾಷನಲ್ ಕ್ರಶ್ ಜೋತೆ ದೇವರಕೊಂಡ ಡೇಟಿಂಗ್ ವದಂತಿಯ ಬಗ್ಗೆ ವಿಜಯ್ ಹೇಳಿದ್ದೇನು?

ತೆಲಂಗಾಣ :

   ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸೊಶಿಯಲ್ ಮೀಡಿಯಾದಲ್ಲಿ ಆಗಾಗಾ ಚರ್ಚೆಯಾಗ್ತಾನೆ ಇರುತ್ತೆ. ಜೋತೆಗೆ ಅವರು ಒಂದೇ ರೀತಿಯ ಬಟ್ಟೆ ಧರಿಸಿರೊದು, ಒಂದಷ್ಟು ವಸ್ತುಗಳು ಇಬ್ಬರ ಜೋತೆಯಲ್ಲು ಇರುವುದು ಅಥವಾ ಒಂದೇ ಜಾಗದಲ್ಲಿ ಇರುವ ಇಬ್ಬರ ಫೋಟೋಗಳನ್ನು ಜನರು ಕಂಪೇರ್ ಮಾಡಿ ವಿಡಿಯೋಗಳನ್ನಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುತ್ತಾರೆ. ಆದರೆ ಇದರ ಬಗೆಗೆ ರಶ್ಮಿಕಾ ಆಗ್ಲಿ, ವಿಜಯ್ ಆಗ್ಲಿ ಎಲ್ಲು ಏನು ಹೇಳಿರಲಿಲ್ಲ. ಸಧ್ಯ ವಿಜಯ್ ಡೇಟಿಂಗ್ ವದಂತಿಯ ಬಗ್ಗೆ ಒಂದು ಇವೆಂಟ್ನಲ್ಲಿ ಹೇಳಿಕೊಂಡಿದ್ದಾರೆ.

   ತಮ್ಮ ಮೇಲಿನ ಡೇಟಿಂಗ್ ವದಂತಿಗಳಿಗೆ ನಟ ವಿಜಯ್ ದೇವರಕೊಂಡ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವಿಜಯ್ ‘ನನಗೆ 35 ವರ್ಷ, ನಾನು ಇನ್ನೂ ಒಂಟಿಯಾಗಿದ್ದೇನೆ ಎಂದು ನೀವು ಭಾವಿಸುತ್ತೀರಾ?’ ಎಂದು ಸಂಬಂಧ ಬಗ್ಗೆ ಸ್ಪಷ್ಟನೆ ನೀಡಿದರು. ‘ತನಗೆ ಬಹಳ ದಿನಗಳಿಂದ ಪರಿಚಯವಿರುವ ಕೋಸ್ಟಾರ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ’ ಎಂದು ಅವರು ಬಹಿರಂಗಪಡಿಸಿದರು. ಕಳೆದ ಎರಡ್ಮೂರು ವರ್ಷಗಳಿಂದ ವಿಜಯ್, ರಶ್ಮಿಕಾ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ.

Recent Articles

spot_img

Related Stories

Share via
Copy link