ದೆಹಲಿ : ರೈತರ ಪ್ರತಿಭಟನೆ : ಭಾರೀ ಟ್ರಾಫಿಕ್‌ ಜಾಮ್‌… ಜನ ಹೈರಾಣ

ನವದೆಹಲಿ:

    ಹೊಸ ಕೃಷಿ ಕಾನೂನುಗಳ ಅಡಿಯಲ್ಲಿ ತಮ್ಮ ಐದು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉತ್ತರ ಪ್ರದೇಶದ ರೈತರು   ಸೋಮವಾರ ನೊಯ್ಡಾದಿಂದ ಸಂಸತ್‌ ಭವನಕ್ಕೆ “ದೆಹಲಿ ಚಲೋ ”   ಯಾತ್ರೆ ಕೈಗೊಂಡಿದ್ದಾರೆ. ಭಾರತೀಯ ಕಿಸಾನ್ ಪರಿಷತ್ (BKP) ಮತ್ತು ಇತರ ರೈತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾಕಾರರು , ಕೃಷಿ ಸುಧಾರಣೆಗಳ ಅಡಿಯಲ್ಲಿ ಪರಿಹಾರ ಮತ್ತು ಪ್ರಯೋಜನಗಳಿಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದು ಕನಿಷ್ಠ ಬೆಂಬಲ ಬೆಲೆ (MSP) ಮೇಲೆ ಕಾನೂನು ಜಾರಿಗೊಳಿಸಲು ಒತ್ತಾಯಿಸುವುದು ಈ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಮೆರವಣಿಗೆ ಶುರುವಾಗಿದ್ದು, ನೋಯ್ಡಾ-ದೆಹಲಿ ಗಡಿಯಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದೆ. 

  ಈಗಾಗಲೇ ಪೊಲೀಸರು ಬಿಗಿ ಭದ್ರತೆಯನ್ನು ಒದಗಿದ್ದು, ಎಲ್ಲಾ ಕಡೆ ಬ್ಯಾರಿಕೇಡ್‌ಗಳನ್ನು ಅಳಡಿಸಲಾಗಿದೆ. ವಾಹನಗಳ ತಪಾಸಣೆ ಮಾಡಲಾಗುತ್ತಿದ್ದು, ವಾಹನಗಳಿಗೆ ಪ್ರತ್ಯೇಕ ಸೂಚನೆಯನ್ನು ಹೊಡಿಸಲಾಗಿದೆ. 

  ಎನ್‌ಸಿಆರ್‌ನ ಹಲವಾರು ಭಾಗಗಳಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ. ದೆಹಲಿಗೆ ಬರುವ ಕೆಲವು ಮಾರ್ಗಗಳನ್ನು ಮುಚ್ಚಲಾಗಿದ್ದು, ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ. ಈ ಕುರಿತು ಮೊದಲೇ ಪ್ರಕಟಣೆಯಲ್ಲಿ ತಿಳಿಸಿದ್ದ ಪೊಲೀಸರು ಪರ್ಯಾಯ ಮಾರ್ಗದ ಸೂಚನೆಯನ್ನು ಪ್ರಕಟಿಸಿದ್ದರು. ಗೌತಮ್ ಬುದ್ಧ ನಗರದಿಂದ ದೆಹಲಿಗೆ ಬಂದು ಹೋಗಲು ಜನರು ಮೆಟ್ರೋ ಬಳಸಬೇಕು ಎಂದು ನೊಯ್ಡಾ ಪೊಲೀಸರು ಮನವಿ ಮಾಡಿದ್ದಾರೆ.

Recent Articles

spot_img

Related Stories

Share via
Copy link