ಕಲಬುರಗಿ:
ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೊಸ್ಟ ವಾಂಟೆಡ್ ಶಂಕಿತ ಉಗ್ರ ಸೇರಿ ಆರು ಜನ ನಟೋರಿಸ್ ಕೈದಿಗಳನ್ನು ರಾಜ್ಯದ ವಿವಿಧ ಕೇಂದ್ರ ಕಾರಾಗೃಗಳಿಗೆ ಸ್ಥಳಾಂತರ ಮಾಡಲಾಗಿದೆ.
ಜೈಲ್ ನ್ನೆ ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳೋಕೆ ಪ್ರಯತ್ನಿಸಿದ್ದ ನಟೋರಿಸ್‌ಗಳ ಸ್ಥಳಾಂತರ. ಶಂಕಿತ ಉಗ್ರ ಜುಲ್ಪಿಕರ್ ಸೇರಿ ಆರು ಜನ ಕೈದಿಗಳನ್ನು ಸ್ಥಳಾಂತರಿಸಲಾಗಿದೆ. 2013 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರ ಜುಲ್ಫಿಕರ್ , ಶಿವಮೊಗ್ಗದ ರೌಡಿ ಶೀಟರ್ ಬಚ್ಚನ್ ಸೇರಿ ಆರು ಜನ ವರ್ಗಾವಣೆಯಾಗಿದ್ದಾರೆ. ಎನ್ ಐ ಎ ಕೋರ್ಟ್ ನ ಅನುಮತಿ ಪಡೆದು ಉಗ್ರ ಜುಲ್ಫಿಕರ್ ಅವರನ್ನು ಶಿಫ್ಟ್ ಮಾಡಲಾಗಿದೆ. ಶಿವಮೊಗ್ಗ ರೌಡಿ ಶೀಟರ್ ಬಚ್ಚನ್ ಗೆ ಶಿವಮೊಗ್ಗ ಕೋರ್ಟ್ ಅನುಮತಿ ಪಡೆದುಕೊಳ್ಳಲಾಗಿದೆ.
ಕಲಬುರಗಿ ಸೆಂಟ್ರಲ್ ಜೈಲ್ ವಾತವರಣವನ್ನೆ ಹಾಳು ಮಾಡಿದ ಇವರುಗಳು, ಕೆಲ ಸಿಬ್ಬಂದಿಗಳ ಜೊತೆ ಶಾಮೀಲಾಗಿ ಹೈಫೈ ಜೀವನ ನಡೆಸುತ್ತಿದ್ದರು. ಜೈಲಿಗೆ ಹೊಸದಾಗಿ ಜೈಲಿಗೆ ಮುಖ್ಯ ಅಧೀಕ್ಷರು ಬರುತ್ತಿದ್ದಂತೆ ಇವರ ಆಟಾಟೋಪಕ್ಕೆ ಬ್ರೇಕ್ ಬಿದ್ದಿತ್ತು. ಇದರಿಂದ ರೊಚ್ಚಿಗೆದ್ದು ಜೈಲ್ ಳೊಗಡೆ ಪ್ರತಿಭಟನೆ ಮಾಡಿದ್ದರು. ಅಲ್ಲದೇ ಖುದ್ದು ಜೈಲು ಅಧೀಕ್ಷಕರಿ ಕಾರು ಸ್ಪೋಟಿಸೋ ಬೇದರಿಕೆ ಹಾಕಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆ ಗೆ ಗ್ರಾಸವಾಗಿತ್ತು.
ಇದನ್ನು ಜೈಲು ಮುಖ್ಯ ಅಧಿಕ್ಷಕಿ ಡಾ.ಅನಿತಾ ಗಂಭೀರವಾಗಿ ಪರಿಗಣಿಸಿ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಬೇರೂರಿದ್ದ ಆರು ಜನ ನಟೋರಿಯಸ್ ಗಳನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಖುದ್ದು ಜೈಲು ಅಧಿಕಾರಿಗಳ ವಿಡಿಯೋಗಳನ್ನ ಬ್ಲ್ಯಾಕ್ ಮಾಡಿ ಹೈಫೈ ಜೀವನ ನಡೆಸುತ್ತಿದ್ದರು ಕೇಂದ್ರ ಕಾರಾಗೃಹ ದ ಅಧೀಕ್ಷಕಿ ಅನಿತಾ ಅವರಿಗೆ ತಲೆನೋವು ಆಗಿತ್ತು.