ಮದುವೆ ಆದ 12ದಿನಕ್ಕೆ ವಿಚ್ಛೇದನ ಕೋರಿ ದ ವಧು..

ಕೊರಟಗೆರೆ :-

   ಶಾಸ್ತ್ರೋಕ್ತವಾಗಿ ಮದುವೆಯಾದ ನವಜೋಡಿಗಳು ಕೇವಲ 4ಕ್ಕೇ ದಿನದಲ್ಲಿ ಮದುವೆಯಲ್ಲಿ ವಿರಸ ಕಂಡು ನವವಧು ಮದುವೆಯಾದ ಎರಡೇ ದಿನದಲ್ಲಿ ನಾಪತ್ತೆಯಾಗಿ ಹತ್ತು ದಿನಗಳ ನಂತರ ಪತ್ತೆಯಾಗಿ 12ನೇ ದಿನಕ್ಕೆ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದ ರೆಕ್ಕೆ ಮೊರೆ ಹೋದ ಘಟನೆಯೊಂದು ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

   ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ದೊಡ್ಡಸಾಗ್ಗೇರೆ ಗ್ರಾಮದ ಅನುಷಾ ಎಂಬ ಹುಡುಗಿಯ ಜೊತೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿ ವೀರಮ್ಮನಹಳ್ಳಿ ಗ್ರಾಮದ ವೆಂಕಟೇಶ್ ಎಂಬುವರ ಜೊತೆ ಇದೇ ತಿಂಗಳ ಡಿಸೆಂಬರ್ 6ರಂದು ಶುಕ್ರವಾರ ಸಾಸಲು ಹೋಬಳಿ ಆರುಡಿ ಗ್ರಾಮದ ಶ್ರೀ ಪಾರ್ವತಿ ಸೋಮೇಶ್ವರ ದೇವಾಲಯದ ಕೆಂಪಮ್ಮ ದೇವಿ ದೇವಸ್ಥಾನದ ಬಳಿ ವಿವಾಹ ಮಹೋತ್ಸವ ನಡೆದಿದ್ದು, ಮದುವೆಯಾದ ಎರಡೇ ದಿನದಲ್ಲಿ ವಧು ಕಣ್ಮರೆಯಾದ ಪ್ರಕರಣ ಕೋಳಾಲ ಪೊಲೀಸ್ ಠಾಣಾ ಮೆಟ್ಟಿಲೇರಿ 10 ದಿನದಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನ ಅಂತ ತಲುಪಿದೆ.

    ಪೋಷಕರು ಎರಡು ಕುಟುಂಬ ಸದಸ್ಯರು ಸೇರಿ ಮದುವೆಮಾಡಿದ ಕೇವಲ ಎರಡೇ ದಿನದಲ್ಲಿ ನವ ವಧು ತನ್ನ ತಾಯಿಯೊಂದಿಗೆ ಗಂಡನ ಮನೆಯಿಂದ ಕಣ್ಮರೆಯಾದವರು 10 ದಿನಗಳ ನಂತರ ವಧು ಕಡೆಯವರು ನೀಡಿದ ದೂರಿನ ಅನ್ವಯ ಪೊಲೀಸರ ಕೈಗೆ ತಾಯಿ ಮಗಳು ಸಿಲುಕಿದ್ದು, ಕಾರಣ ಕೇಳಿದರೆ ಅರೆ ಬರೆ ಉತ್ತರ ನೀಡಿ ವಧು ನನಗೆ ಮದುವೆ ಇಷ್ಟ ಇರ್ಲಿಲ್ಲ ನನ್ನ ತಾಯಿಯ ಬಲವಂತದಿಂದ ಮದುವೆಯಾದೆ ಹಾಗಾಗಿ ಎರಡೇ ದಿನದಲ್ಲಿ ನಾನು ಮನೆ ತೊರೆದೆ ಎನ್ನುವ ಹರಕೆ ಉತ್ತರಕ್ಕೆ ಪೋಷಕರು ದಂಗಾಗಿದ್ದು, ಮದುವೆಯಾದ 10 ದಿನಗಳಲ್ಲಿ ನವಜೋಡಿಗಳು ವಿಚ್ಛೇದನ ಅಂತ ತಲುಪಿರುವುದು ದುರಾದೃಷ್ಟಕರವಾಗಿದೆ.

    ನೂರಾರು ಜನ ಮದುವೆಗೆ ಸಾಕ್ಷಿಯಾದ ಈ ಮದುವೆ ಕೇವಲ ಹತ್ತೇ ದಿನಕ್ಕೆ ವಿಚ್ಛೇದನ ಅಂತಕ್ಕೆ ತಲುಪಿರೋದು ಪೋಷಕರು ಸೇರಿದಂತೆ ನೆಂಟರನಿಷ್ಟರು ಸ್ನೇಹಿತರಿಗೆ ದಿಗ್ಭ್ರಮೆಯಾಗಿದ್ದು, ಮದುವೆಯ ಮುಂಚೆ ಪೋಷಕರುಗಳು ಹೆಣ್ಣು ಹಾಗೂ ಗಂಡು ಇಬ್ಬರ ಪೂರ್ವ ಪರ ವಿಚಾರ ಮಾಡದಿದ್ದರೆ ಇಂತಹ ಎಡವಟ್ಟುಗಳು ನಡೆಯುತ್ತವೆ, ಗಂಡು-ಹೆಣ್ಣು ಇಬ್ಬರ ಅಭಿಪ್ರಾಯಗಳನ್ನ ಪಡೆದು ನಂತರ ಮದುವೆ ಮಾಡಿದ್ದರೆ ಇಂಥ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಪೊಲೀಸ್ ಠಾಣೆಯ ಮುಂದೆ ನ್ಯಾಯ ಪಂಚಾಯಿತಿಗೆ ಕುಳಿತ ಪೋಷಕರು ಹಾಗೂ ಹಿರಿಯರು ಗೂಣಗಾಡುತ್ತಿದ್ದಿದ್ದು ಇತರ ಗಂಡು ಹೆಣ್ಣಿನ ಪೋಷಕರಿಗೆ ಎಚ್ಚರಿಕೆಯ ಗಂಟೆ ಎನ್ನಬಹುದಾಗಿದೆ.

    ಈ ಸಂಬಂಧ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ ಎಸ್ ಐ ರೇಣುಕಾ ಯಾದವ್ ಹಾಗೂ ಯೋಗೇಶ್ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರವಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ.

Recent Articles

spot_img

Related Stories

Share via
Copy link