ಭಾರತ : ಬಯೋಟೆಕ್ ಸ್ಟಾರ್ಟಪ್ಸ್ ಸಂಖ್ಯೆ ಈಗ 9,000ಕ್ಕೆ ಏರಿಕೆ

ನವದೆಹಲಿ

    ಭಾರತದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಿಕತೆ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಈ ಕ್ಷೇತ್ರದಲ್ಲಿ ಸ್ಟಾರ್ಟಪ್​ಗಳು ಹುಲುಸಾಗಿ ಬೆಳೆಯುತ್ತಿವೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ನೀಡಿದ ಮಾಹಿತಿ ಪ್ರಕಾರ ಹತ್ತು ವರ್ಷಗಳ ಹಿಂದೆ (2014) ಬಯೋಟೆಕ್ ಸ್ಟಾರ್ಟಪ್​ಗಳ ಸಂಖ್ಯೆ ಕೇವಲ 50 ಇತ್ತು. ಇವತ್ತು ಅವುಗಳ ಸಂಖ್ಯೆ 9,000 ಸಮೀಪಕ್ಕೆ ಹೋಗಿದೆ. 2014ರಲ್ಲಿ ಭಾರತದ ಜೈವಿಕ ಆರ್ಥಿಕತೆಯ ಗಾತ್ರ 10 ಬಿಲಿಯನ್ ಡಾಲರ್​ನಷ್ಟಿತ್ತು. 2024ರಲ್ಲಿ ಅದು 130 ಬಿಲಿಯನ್ ಡಾಲರ್​ಗೂ ಹೆಚ್ಚಿನ ಗಾತ್ರಕ್ಕೆ ಬೆಳೆದಿದೆ. 2030ರೊಳಗೆ ಅದು 300 ಬಿಲಿಯನ್ ಡಾಲರ್ ಗಾತ್ರದ್ದಾಗಬಹುದು ಎಂದು ನಿರೀಕ್ಷಿಸಲಾಗಿದೆ.

   ಭವಿಷ್ಯದ ಸಮಸ್ಯೆಗಳಿಗೆ ಭಾರತ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವಂತಹ ಭಾವನೆಗಳಿದ್ದವು. ಈಗ ಆ ಮಟ್ಟದಿಂದ ಭಾರತ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಗುರಿಗಳನ್ನು ನಿಗದಿ ಮಾಡಿಕೊಂಡು ಹೆಜ್ಜೆ ಹಾಕುತ್ತಿದೆ ಎಂದು ಹೇಳಿದ ಅವರು 2070ರೊಳಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಸ್ಥಿತಿಯನ್ನು ಸಾಧಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ.
    ಕಳೆದ ಕೆಲ ವರ್ಷಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಸಚಿವರು ಪ್ರಸ್ತಾಪಿಸಿದ್ದಾರೆ. ‘ಗ್ರೀನ್ ಹೈಡ್ರೋಜನ್ ಮಿಷನ್ ಹೊಂದಿದ್ದೇವೆ. ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಡಲು ಯೋಜನೆ ಹಾಕಿದ್ದೆವೆ. ಜೈವಿಕ ವೈವಿಧ್ಯತೆಯ ವಿಷಯಕ್ಕೆ ಬಂದರೆ ನಾವು ಸಾಗರದಾಳದ ಮಿಷನ್ ಅನ್ನು ಆರಂಭಿಸಿದ್ದೇವೆ. ಇಂಥದ್ದೊಂದು ಯೋಜನೆಯನ್ನು ಆರಂಭಿಸಿದ ವಿಶ್ವದ ಮೊದಲಿಗರಲ್ಲಿ ನಾವು ಇದ್ದೇವೆ,’ ಎಂದು ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link