ಯಮಕನಮರಡಿ:
ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ಫೆ. 3ರಿಂದ್ 9 ವರೆಗೆ 1008 ಭಗವಾನ ಪಾರ್ಶ್ವನಾಥ ತೀರ್ಥಂಕರ ಜಿನಜಿಂಬದ ಭವ್ಯ ದಿವ್ಯ ಮನೋಹರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯುಗ ಜರಗುವುದು.
ಎಂದು 1008 ಪಾರ್ಶ್ವನಾಥ ದಿಗಂಬರ ಜೈನ್ ಮಂದಿರ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿ ಡಿ ಪಾಟೀಲ್ ಹೇಳಿದರು.
ಉ. ಖಾನಾಪುರದ ಶ್ರೀ ಜೈನ್ ಬಸದಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಸಿದೆ ಮಾತನಾಡಿದವರು ಅವರು ಧರ್ಮಕೇಸರಿ ಆಚಾರ್ಯ ಶ್ರೀ 108 ಜೀನಸೇನೆ ಮನಿ ಮಹಾರಾಜರು ಹಾಗೂ ನಾಂದಣಿ ಸಂಸ್ಥಾನಮಠ ಜೀನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸುವರು.
3ರಂದು ಧ್ವಜಾರೋನ ಗರ್ಭ ಕಲ್ಯಾಣ ಪೂರ್ವಾರ್ಧ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಜಾಪ್ಯ,ಸಂಗೀತ, ಆರತಿ ಜರುಗುವುದು” ಎಂದರು.4ರಂದು ಬೆಳಿಗ್ಗೆಯಿಂದ ಗರ್ಭಕಲ್ಯಾಣ ಉತ್ತರಾರ್ಧ ನವಗ್ರಹ ಶಾಂತಿ ವಿಧಾನ ನಡೆಯುವುದು.5ರಂದು ಭಗವಂತ ಜನ್ಮ ಕಲ್ಯಾಣಕ, 6ರಂದು ರಾಜಾಭಿಷೇಕ ದೀಕ್ಷಾ ಕಲ್ಯಾಣೀಕ, ಭೋಗದಿಂದ ತಪದ ಕಡೆಗೆ, 7ರಂದು ಕೇವಲಜ್ಞಾನ ಕಲ್ಯಾಣ ಭಗವಂತರ ಆಹಾರ ವಿಧಿ,ಮೌಂಜಿ ಬಂಧನ ಸಂಸ್ಕಾರ ನಡೆಯುವುದು.
8 ರಂದು ಭವ್ಯ ರಥೋತ್ಸವ, 9ರಂದು ನಿರ್ಮಾಣ ಕಲ್ಯಾಣ( ಶಾಶ್ವತ ಮೋಕ್ಷ ಮಾರ್ಗ ) ಶ್ರೀಕಲಿಕುಂಡ ಆರಾಧನ ವಿಧಾನ ಹಾಗೂ ಹೆಲಿಕ್ಯಾಪ್ಟರ್ ಮೂಲಕ ಜಿನಮಂದಿರದ ಮೇಲೆ ಪುಷ್ಪಾರ್ಚನೆ ಜರುಗುವುದು. ಎಂದು ತಿಳಿಸಿದರು.
ಸತತ ಏಳು ದಿನವೂ ಇಂದ್ರ- ಇಂದ್ರಾಣಿಯರನ್ನು ಆನೆ ಮೇಲೆ ಮೆರವಣಿಗೆ ಮುಖಾಂತರ ಪೂಜಾ ಮಂಟಪಕ್ಕೆ ಕರೆತರಲಾಗುವುದು.
ಉ.ಖಾನಾಪುರದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಂಸದೆ ಪ್ರಿಯಾಂಕ ಜಾರಕಿಹೊಳಿ, ಮಾಜಿ ಸಚಿವ ವೀರಕುಮಾರ್ ಪಾಟೀಲ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ, ಉತ್ತಮ್ ಪಾಟೀಲ್ ಆಗಮಿಸುವರು, ಪ್ರತಿದಿನ ಮಧ್ಯಾಹ್ನ ಭೋಜನ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು.ಉಪಾಧ್ಯಕ್ಷ ಹಣಮತಗೌಡ ಪಾಟೀಲ, ಆದಪ್ಪಾ ಪಾಟೀಲ, ದಾದುಗೌಡ ಪಾಟೀಲ, ಶಾಂತುಗೌಡ ಪಾಟೀಲ, ರಾಜು ಅವಟೆ, ಜಿ ಕೆ ಪಾಟೀಲ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು