ತುಮಕೂರು
ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ಪತೀ ಮಹಾಸ್ವಾಮೀಜಿ ಯವರ ದಿವ್ಯಸಾನಿಧ್ಯದಲ್ಲಿ ಜೋಲುಮಾರನಹಳ್ಳಿಯ ಶ್ರೀ ಕಾಳಿಕಾಕಮಟೇಶ್ವರ ದೇಗುಲದ ಭವ್ಯ ಯಾಗಶಾಲೆಯಲ್ಲಿ ಯಜುರ್ವೇದ ಪ್ರೂಕ್ತ ಶ್ರೀ ರುದ್ರ ಮಂತ್ರ ಪಾರಾಯಣದೊಂದಿಗೆ ವಿದ್ವಾನ್ ಚಂದ್ರೇಶ ಶರ್ಮಾ ಅವರ ಆಧ್ವರ್ಯದಲ್ಲಿ ಸಕಲಭಕ್ತ ಸಮೂಹದೊಂದಿಗೆ ಸಂಪನ್ನವಾಯಿತು.
ವಿಶೇಷವಾಗಿ ತುಮಕೂರು ಗ್ರಾಮಾಂತರ ಶಾಸಕರಾದ ಬಿ ಸುರೇಶ್ ಗೌಡ ಅವರು ಯಾಗದಲ್ಲಿ ಧಾರ್ಮಿಕ ಉಡುಗೆಯೊಂದಿಗೆ ಪಾಲ್ಗೊಂಡ ಜಗದ್ಗುರುಗಳ ಅನುಗ್ರಹ ಮಂತ್ರಾಕ್ಷತೆಗೆ ಪಾತ್ರರಾದರು. ಸಾವಿರಾರು ಭಕ್ತ ಸಮೂಹ ಯಾಗದ ಪೂರ್ಣಹುತಿಯನ್ನು ಕಣ್ತುಂಬಿಕೊಂಡರು.
ನಂತರ ನೆಡೆದ ಧರ್ಮಸಭೆಯಲ್ಲಿ ಆನೆಗುಂದಿ ಶ್ರೀಗಳು ಧರ್ಮಸಭೆಯನ್ನುದ್ದೇಶಿಸಿ ಅನುಗ್ರಹಾಶೀರ್ವಚನ ನೀಡಿ ವಿಶ್ವಬ್ರಾಹ್ಮಣರಿಂದ ಲೋಕಕಲ್ಯಾಣಾರ್ಥವಾಗಿ ಸಂಪನ್ನಗೊಂಡ ಯಾಗದ ಫಲ ಲೋಕಕ್ಕೆ ಕಲ್ಯಾಣವಾಗಲಿ ಹಿಂದೂಧರ್ಮ, ಸಮಸ್ತ ಲೋಕ ಸಂವರ್ಧನೆಯಾಗಲೆಂದು ಆಶೀರ್ವದಿಸಿದರು. ಯಜ್ಞಕರ್ತುಗಳಾದ ಶಿಲ್ಪಿ ನಾಗಭೂಷಣಾಚಾರ್ಯ ಮತ್ತು ಕುಟುಂಬಕ್ಕೆ ಮಂತ್ರಾಕ್ಷತೆಯನ್ನಿತ್ತರು. ಧರ್ಮಸಭೆಯಲ್ಲಿ ತಮ್ಮಡಿಹಳ್ಳಿ ಮಠದ ಶ್ರೀ ಗಳು, ಚಂದ್ರೇಶ ಶರ್ಮಾ ಧಾರ್ಮಿಕ ಉಪನ್ಯಾಸವಿತ್ತರು.ಡಾ ಕೆ. ವಿ. ಕೃಷ್ಣಮೂರ್ತಿ , ಬಾಬುಪತ್ತಾ ರ್, ಡಾ.ಬಿ,ಎಂ.ಉಮೇಶ್ ಕುಮಾರ್, ಟಿ. ಸಿ. ಡಮರುಗೇಶ್, ಟಿ. ಎ. ರವಿ, ಚೇತನ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
