ಬೆಳಗಾವಿ : ಆಟೋ ಚಾಲಕನ ಹಲ್ಲೆಯಿಂದ ಗೋವಾ ಮಾಜಿ‌ ಶಾಸಕ ಸಾವು

ಬೆಳಗಾವಿ: 

    ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಸ್ಥಳದಲ್ಲೇ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್  ಮೃತಪಟ್ಟ ಘಟನೆ ಶನಿವಾರ ಶ್ರೀನಿವಾಸ್ ಲಾಡ್ಜ್‌ನಲ್ಲಿ ನಡೆದಿದೆ. ಬೆಳಗಾವಿ ನಗರದ ಶ್ರೀನಿವಾಸ ಲಾಡ್ಜ್ ಎದುರು ಆಟೋಗೆ ಲಾವೋ ಕಾರು ಡಿಕ್ಕಿಯಾದ ಹಿನ್ನೆಲೆಯಲ್ಲಿ ಚಾಲಕ, ಗೋವಾದ ಮಾಜಿ ಶಾಸಕ ಲಾವೋ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ಸ್ಥಳದಲ್ಲಿಯೇ ಕುಸಿದ ಬಿದ್ದು ಲಾವೋ (Ex-Goa MLA dies) ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

    ಖಡೇಬಜಾರ್ ಬಳಿ ಆಟೋಗೆ ಮಾಜಿ ಶಾಸಕರ ಕಾರು ಟಚ್ ಆದ ಬಳಿಕ ಶ್ರೀನಿವಾಸ ಲಾಡ್ಜ್ ಕಡೆಗೆ ಲಾವೋ ಮಾಮಲೇದಾರ್ ಬಂದಿದ್ದರು. ಆಗ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಚಾಲಕ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಸ್ಥಳದಲ್ಲೇ ಮೃತಪಟ್ಟ ಲಾವೋ ಮಾಮಲೇದಾರ್ ಮೃತ ದೇಹ ಬೆಳಗಾವಿ ಬೀಮ್ಸ್‌ಗೆ ರವಾನೆ ಮಾಡಲಾಗಿದೆ. ತಕ್ಷಣವೇ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

    ಈ ಬಗ್ಗೆ ಶ್ರೀನಿವಾಸ ಲಾಡ್ಜ್ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ನಮ್ಮ ಹೋಟೆಲ್‌ಗೆ ಆಗಾಗ ಬರುತ್ತಿದ್ದರು. ಅವರು ನಮ್ಮ ರೆಗ್ಯುಲರ್ ಕಸ್ಟಮರ್‌ ಆಗಿದ್ದು, ಖಡೇಬಜಾರ್ ಬಳಿ ಆಟೋಗೆ ಅವರ ಟಚ್‌ ಆಗಿತ್ತು ಎನ್ನಲಾಗಿದೆ. ಹೀಗಾಗಿ ಆಟೋ ಚಾಲಕ ಹೋಟೆಲ್‌ ಬಳಿ ಬಂದು ಮಾಜಿ ಶಾಸಕನ ಮೇಲೆ ಹಲ್ಲೆ ನಡೆಸಿದ್ದಾನೆ. ನಾವು ಆತನನ್ನು ತಡೆಯಲು ಯತ್ನಿಸಿದೆವು, ಆದರೆ ತೀವ್ರ ಹಲ್ಲೆಯಿಂದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link