ಬೆಂಗಳೂರು:
‘ನಾನು ಕ್ಷೇತ್ರ ಬಿಡ್ತೀನಿ ಅಂತ ಯಾವನ್ ಹೇಳಿದ್ದು?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮದವರ ಮೇಲೆ ಸಿಟ್ಟಿನಿಂದ ಸೋಮವಾರ ಹರಿಹಾಯ್ದರು.
ಸವಣೂರಿನ ಉಪವಿಭಾಗಾಧಿಕಾರಿಗಳ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುವಾಗ, ‘ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರ ಬಿಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ’ ಎಂಬ ಪ್ರಶ್ನೆ ಎದುರಾಯಿತು. ‘ಯಾವನ್ ಹೇಳಿದ್ದು..?. ಯಾವುದೇ ಕಾರಣಕ್ಕೂ ಶಿಗ್ಗಾವಿ ಕ್ಷೇತ್ರ ಬಿಡೋದಿಲ್ಲ‘ ಎಂದು ಕೋಪದಿಂದ ಹೇಳಿದರು.
ನಾನು ಯಾವುದೇ ಕಾರಣಕ್ಕೂ ಶಿಗ್ಗಾಂವಿ ಕ್ಷೇತ್ರ ಬಿಟ್ಟು ಬೇರೆಡೆ ಹೋಗುವುದಿಲ್ಲ, ನಾನು ಕ್ಷೇತ್ರ ಬಿಡುತ್ತೇನೆ ಅಂತ ಯಾರ್ ಹೇಳಿದ್ರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುಪ್ರಶ್ನೆ ಹಾಕಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಬೇರೆ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ