ಐಪಿಒ ಮೂಲಕ 392 ಕೋಟಿ ರು ಸಂಗ್ರಹಿಸಲು ಪ್ರಣವ್‌ ಕನ್ಸಟ್ರಕ್ಷನ್‌ ಸಜ್ಜು

ಮುಂಬೈ 

   ರಿಯಲ್‌ ಎಸ್ಟೇಟ್‌ ಸಂಸ್ಥೆ ಪ್ರಣವ್‌ ಕನ್ಸ್ಟಟ್ರಕ್ಷನ್‌ ಲಿಮಿಟೆಡ್‌ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ (ಐಪಿಒ)ಗೆ ಲಗ್ಗೆ ಇಡಲು ಸಜ್ಜಾಗಿದೆ. ಸೆಕ್ಯೂರಿಟಿ ಎಕ್ಸ್‌ಚೇಂಜ್‌ ಬೋರ್ಡ್ ಆಫ್‌ ಇಂಡಿಯಾ (ಸೆಬಿ)ಗೆ 392 ಕೋಟಿ ರು ಮೊತ್ತದ ಐಪಿಒಗಾಗಿ ಡಿಆರ್‌ಹೆಚ್‌ಪಿ ಸಲ್ಲಿಕೆ ಮಾಡಿದೆ.

   10 ರೂ ಷೇರಿನ ಮುಖಬೆಲೆಯಾಗಿದ್ದು ಬಿಡುಗಡೆಯಾಗುತ್ತಿರುವ 392 ಕೋಟಿ ರು ಮೊತ್ತದಲ್ಲಿ ಹಾಲಿ ಪ್ರಮೋಟರ್‌ ಹಾಗೂ ಹೂಡಿಕೆದಾರರಾದ ಬಯೊಉರ್ಜಾ ಇಂಡಿಯಾ ಇನ್‌ಫ್ರಾ ಪ್ರ್ಯವೇಟ್‌ ಲಿಮಿಟೆಡ್‌ ನ 23,07,472 ರೂ ಮೊತ್ತದ ಇಕ್ವಿಟಿ ಷೇರು ಹಾಗೂ ರವಿ ರಾಮಲಿಂಗಮ್‌ ಅವರ 5,49,397 ಕೋಟಿ ರು ಮೊತ್ತದ ಇಕ್ವಿಟಿ ಆಫರ್‌ ಫಾರ್ ಸೇಲ್‌ ಮೂಲಕ ಮಾರಾಟಗೊಳ್ಳಲಿದೆ.

   ಐಪಿಒ ಪೂರ್ವದಲ್ಲಿ 78.40 ಕೋಟಿ ಮೌಲ್ಯದ ಷೇರುಗಳನ್ನು ಖಾಸಗಿ ನಿಯೋಜನೆ ಮೂಲಕ ಮಾರಾಟ ಮಾಡುವ ಉದ್ದೇಶ ಹೊಂದಿದೆ. ಬಿಡುಗಡೆಯಾಗುತ್ತಿರುವ ಹೊಸ ಷೇರುಗಳಲ್ಲಿ ಶೇ.75ರಷ್ಟು ಅರ್ಹ ಸಾಂಸ್ಥಿಕ ಖರೀದಿದಾರರಿಗೆ, ಶೇ. 15ರಷ್ಟು ನಾನ್‌ ಇನ್‌ಸ್ಟಿಕ್ಯೂಶನಲ್‌ ಹೂಡಿಕೆದಾರರರಿಗೆ (ಎನ್‌ಐಐ) ಹಾಗೂ ಶೇ. 10ರಷ್ಟು ರಿಟೇಲ್‌ ಹೂಡಿಕೆದಾರರಿಗೆ ಮೀಸಲಿಡಲಾಗಿದೆ.

   ಐಪಿಒ ಮೂಲಕ ಸಂಗ್ರಹಿಸಲಾದ ಹಣದಲ್ಲಿ ಸಂಸ್ಥೆ 223.75 ಕೋಟಿ ರೂ ಹಣವನ್ನು ಸರ್ಕಾರಿ ಹಾಗೂ ಸಾಂವಿಧಾನಿಕ ಅನುಮತಿ ಪಡೆಯಲು, ಹೆಚ್ಚುವರಿ ಎಫ್‌ಎಸ್‌ಐ ಖರೀದಿ, ಪುನರ್‌ನಿರ್ಮಾಣ ಹಾಗೂ ನಿರ್ಮಾಣಹಂತದಲ್ಲಿನ ಕೆಲವು ಯೋಜನೆಗಳಿಗೆ ಸಂಬಂಧಿಸಿ ಪರ್ಯಾಯ ವಸತಿ ಹಾಗೂ ಪರಿಹಾರ ನೀಡಲು , 74 ಕೋಟಿ ರೂ ಹಣವನ್ನು ಸಾಲ ಬಾಕಿ ಪಾವತಿಸಲು ಹಾಗೂ ಭವಿಷ್ಯದ ಯೋಜನೆಗಳಿಗೆ ಬಳಸಲಾಗುತ್ತಿದೆ.

  ಸೆಂಟ್ರಲ್‌ ಕ್ಯಾಪಿಟಲ್‌ ಲಿಮಿಟೆಡ್‌ ಮತ್ತು ಪಿಎನ್‌ಬಿ ಇನ್‌ವೆಸ್ಟ್‌ಮೆಂಟ್‌ ಸರ್ವಿಸ್‌ ಲಿಮಿಟೆಡ್‌ ಬುಕ್‌ ರನ್ನಿಂಗ್‌ ಲೀಡ್‌ ಮ್ಯಾನೇಜರ್‌ಗಳಾಗಿದ್ದು ಕೆಎಫ್‌ಇನ್‌ ಟೆಕ್ನಾಲಜಿಸ್‌ ಲಿಮಿಟೆಡ್‌ ಈ ಆಫರ್‌ನ ರಿಜಿಸ್ಟ್ರಾರ್‌ ಆಗಿದೆ. ಇಕ್ವಿಟಿ ಷೇರುಗಳು ಬಿಎಸ್‌ಇ ಮತ್ತು ಎನ್‌ಎಸ್‌ಇಲಿ ಲಿಸ್ಟ್‌ ಆಗಲು ಪ್ರಸ್ತಾವನೆ ಸಲ್ಲಿಸಲಾಗಿದೆ.

   ಪ್ರಣವ್‌ ಕನ್‌ಸ್ಟ್ರಕ್ಷನ್‌ ಲಿಮಿಟೆಡ್‌ ಬಹುದೊಡ್ಡ ರಿಯಲ್‌ ಎಸ್ಟೇಟ್‌ ಡೆವಲಪರ್‌ ಸಂಸ್ಥೆಯಾಗಿದ್ದು ಮುಂಬೈನ ಪಶ್ಚಿಮ ಉಪನಗರಗಳಲ್ಲಿ ಎಮ್‌ಸಿಜಿಎಮ್‌ ಪುನರ್‌ ನಿರ್ಮಾಣ ಯೋಜನೆಗಳಲ್ಲಿ ಮುಂಚೂಣಿಯಲ್ಲಿದೆ. 27 ಯೋಜನೆಗಳಲ್ಲಿ 1503 ಯುನಿಟ್‌ಗಳನ್ನು ಹೊಂದಿದ್ದು ಸಂಸ್ಥೆ ಆರ್ಥಿಕ , ಮಧ್ಯಮ, ಮೇಲ್ಮಧ್ಯಮ ವರ್ಗದ ವಸತಿ ವಿಭಾಗಗಳ ಪುನರ್‌ನಿರ್ಮಾಣ ಯೋಜನೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಮೂಲಕ ವಿಶ್ವಾಸಾರ್ಹ ಬ್ಯ್ರಾಂಡ್‌ ಆಗಿ ಪ್ರಣವ್‌ ಕನ್‌ಸ್ಟ್ರಕ್ಷನ್‌ ಲಿಮಿಟೆಡ್‌ ಹೊರಹೊಮ್ಮಿದೆ.

  21 ವರ್ಷಗಳ ರಿಯಲ್‌ ಎಸ್ಟೇಟ್‌ ಅನುಭವ ಹೊಂದಿರುವ ಪ್ರಣವ್‌ ಕಿರಣ್‌ ಆಶರ್‌ ಹಾಗೂ ಹಣಕಾಸು ಕ್ಷೇಥ್ರದಲ್ಲಿ 16 ವರ್ಷ ಅನುಭವ ಹೊಂದಿರುವ ರವಿ ರಾಮಲಿಂಗಮ್‌ ನಾಯಕತ್ವದಲ್ಲಿ ಸಂಸ್ಥೆ 2012ರಿಂದ ಪುನರ್‌ನಿರ್ಮಾಣ ಕ್ಷೇತ್ರದಲ್ಲಿ ಛಾಫು ಮೂಡಿಸುತ್ತಿದೆ. ಡಿಸೆಂಬರ್‌ 31, 2024ರವರೆಗೆ ತೆರಿಗೆ ಒಂಭತ್ತು ತಿಂಗಳ ಅವಧಿಯಲ್ಲಿ ತೆರಿಗೆ ಕಡಿತ ಬಳಿಕ ಏಕೀಕೃತ ಆದಾಯ 430.59 ಕೋಟಿ ರೂ ಇದ್ದು ಏಕೀಕೃತ ಲಾಭ 43.04 ಕೋಟಿ ರೂ ಎಂದು ವರದಿಯಾಗಿದೆ.

Recent Articles

spot_img

Related Stories

Share via
Copy link