ಗುಬ್ಬಿ:
ಅಧಿಕಾರದ ಅಮಲಿಲ್ಲದೆ ಕಟ್ಟಕಡೆಯ ವ್ಯಕ್ತಿಯನ್ನು ಪ್ರೀತಿಯಿಂದ ಕಂಡು ಅವರ ಕೆಲಸಗಳಿಗೆ ಸ್ಪಂದಿಸುವ ಹಾಗೂ ಕರ್ತವ್ಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ನಾವೆಂದೂ ಕಂಡರಿಯದ ತಾಲೂಕು ದಂಡಾಡಿಕಾರಿ ಗುಬ್ಬಿಯ ತಹಶೀಲ್ದಾರ್ ರವರ ಬಗ್ಗೆ ವಿಶ್ವ ಮಹಿಳಾ ದಿನದಂದು ಜನರಿಗೆ ತಿಳಿಸಬೇಕೆನಿಸಿತು,
ಸ್ವಾಬಾವಿಕವಾಗಿ ಕೆ ಎ ಎಸ್ ಹಾಗೂ ಐ ಎ ಎಸ್ ಅಧಿಕಾರಿಗಳು ವೈಟ್ ಕಾಲರ್ ಜನ ಅವರ ಹಾಗೂ ಸಾರ್ವಜನಿಕರ ನಡುವೆ ಒಂದು ಅಂತರವೇ ಇರುತ್ತದೆ ಆದರೆ ಇಲ್ಲಿ ಹಾಗಲ್ಲ ಸದಾ ಜನರ ನಡುವೆ ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ದಿಟ್ಟ ಮಹಿಳಾ ಅಧಿಕಾರಿ ಇವರು, ಇವರು ತಿಪಟೂರಿನಿಂದ ಗುಬ್ಬಿಗೆ ವರ್ಗಾವಣೆಯಾಗಿ ಬಂದಮೇಲೆ ಹಲವು ಸವಾಲುಗಳನ್ನು ಎದುರಿಸುವ ಸಂದರ್ಭ ಬಂತು,
ಕೋಟ್ಯಾಂತರ ರೂ ಬೆಲೆ ಬಾಳುವ ಸರ್ಕಾರದ ಜಮೀನನ್ನು ಬಗರ್ ಹುಕುಂ ನೆಪದಲ್ಲಿ ಖಾಸಗಿಯವರಿಗೆ ನೀಡಿದ್ದ ತಮ್ಮ ಜೊತೆಯಲ್ಲೇ ಇದ್ದ ಸಹ ಅಧಿಕಾರಿಗಳನ್ನು ಯಾವುದೇ ಮುಲಾಜು ನೋಡದೆ ಕಾನೂನು ಕ್ರಮ ಕೈಗೊಂಡ ದಿಟ್ಟ ಮಹಿಳೆ ಇವರು,ಹಾಗೂ ಹಲವು ಭೂ ಗಳ್ಳರನ್ನು ಜೈಲಿಗಟ್ಟಿದರು, ಇವರ ಕೆಲವು ದಿಟ್ಟ ನಿರ್ದಾರದಿಂದ ಗುಬ್ಬಿಯ ಸುತ್ತಮುತ್ತ ಇರುವ ಸರ್ಕಾರಿ ಜಮೀನುಗಳು ಇಂದು ಸರ್ಕಾರಿ ಕಚೇರಿಗಳನ್ನು ಕಟ್ಟಲು ನೀಡಲಾಗಿದೆ ಇದರ ಹಿರಿಮೆ ಗರಿಮೆ ಇವರಿಗೆ ಸೇರಬೇಕು,
ಹಲವು ವರ್ಷಗಳಿಂದ ಗುಬ್ಬಿಯ ಹೃದಯಬಾಗದಲ್ಲಿರುವ ಮಾರನಕಟ್ಟೆಯಲ್ಲಿ ವಾಸ್ತವ್ಯ ಹೂಡಿಕೊಂಡಿದ್ದ ಹಂದಿಜೋಗರ ಸುಮಾರು 70 ಕುಟುಂಬಗಳನ್ನು ಚೇಳೂರಿನ ಸಾತೇನಹಳ್ಳಿ ಗೇಟ್ ಬಳಿ ನೀವೇಶನ ನೀಡಿ ಮನೆ ಕಟ್ಟಿಕೊಳ್ಳಲು ಅನುದಾನ ಕೊಡಿಸಿ ಸ್ಥಳಾಂತರಗೊಳಿಸಿದ ಕೀರ್ತಿ ಇವರಿಗೆ ಸಲ್ಲಬೇಕು,ಇವರು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಕೃಷಿ ಕುಟುಂಬದಿಂದ ಬಂದವರು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಮದುವೆಯಾದರು ಓದಿಗೂ ಮದುವೆಗೂ ತೊಂದರೆಮಾಡೋಕೊಳ್ಳದೆ ಎಂಎಸ್ಸಿ ಪದವಿಗಳಿಸಿ ಸ್ಪರ್ದಾತ್ಮಕ ಪರೀಕ್ಷೆಯಲ್ಲಿ 2014 ಬ್ಯಾಚ್ ನಲ್ಲಿ ತೇರ್ಗಡೆಯಾಗಿ ತಿಪಟೂರಿಗೆ ತಹಶೀಲ್ದಾರರಾಗಿ ನೇಮಕಗೊಳ್ಳುತ್ತಾರೆ, ಇವರಿಗೆ 13 ಹುದ್ದೆಗಳು ಸಿಕ್ಕರೂ ತಹಶೀಲ್ದಾರ್ ಹುದ್ದೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ,
ಇವರ ತಂದೆ ಕೆ ಎಸ್ ಆರ್ ಟಿ ಸಿ ಯಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ ಇವರ ಕುಟುಂಬ ಮಕ್ಕಳ ಓದಿಗೆಂದೇ ಹಳ್ಳಿಯಿಂದ ಬಾಗೇಪಲ್ಲಿಗೆ ಸ್ಥಳಾಂತರವಾಗುತ್ತದೆ, ಇವರು ಹೇಳುವ ಪ್ರಕಾರ ಇವರ ತಂದೆಯ ಬೆಂಬಲ ಹಾಗೂ ಪತಿ ವಕೀಲ ವೃತ್ತಿಯಲ್ಲಿದ್ದು ಅವರು ಇವರಿಗೆ ಬೆಂಬಲವಾಗಿ ನಿಂತಿದ್ದು ಇವರೆಲ್ಲರಿಂದ ನಾನು ನನ್ನ ಕಾರ್ಯದಲ್ಲಿ ಉತ್ತಮ ಹಾಗೂ ದಿಟ್ಟ ಹೆಜ್ಜೆಗಳನ್ನು ಇಡಲು ಸಾಧ್ಯವಾಗಿದೆ ಎನ್ನುತ್ತಾರೆ
ಏನೇ ಆಗಲಿ ವಿಶ್ವ ಮಹಿಳಾ ದಿನದ ಈ ಸಂದರ್ಭದಲ್ಲಿ ಇಂತಹ ವ್ಯಕ್ತಿತ್ವವುಳ್ಳ ಹಾಗೂ ಸಾಮಾನ್ಯ ಕುಟುಂಬದಿಂದ ಬಂದು ಸಮಾಜದ ಆಶಾಕಿರಣವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿರುವ ಗುಬ್ಬಿಯ ತಹಶೀಲ್ದಾರ್ ಬಿ ಆರತಿಯವರು ಇನ್ನು ಯಶಸ್ಸು ಕಾಣಲಿ ಎಂದು ಆಶಿಸೋಣ,
