ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ ನಟಿ ರಾಗಿಣಿ ದ್ವಿವೇಧಿ : ಕಾರಣ ಕೇಳಿದ್ರೆ ಷಾಕ್‌ ಆಗೋದು ಪಕ್ಕಾ….!

ಬೆಂಗಳೂರು: 

   ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ ಅಭಿಮಾನಿಯೋರ್ವ ಅನುಚಿತ ವರ್ತನೆ ತೋರಿ ಕಪಾಳಮೋಕ್ಷ ಮಾಡಿಸಿಕೊಂಡಿರುವ ಘಟನೆ ವರದಿಯಾಗಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ರಾಗಿಣಿ ದ್ವಿವೇದಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ನಟಿ ರಾಗಿಣಿ ಕೂಡ ಎಲ್ಲರೊಂದಿಗೆ ಫೋಟೋಗೆ ಪೋಸ್ ನೀಡುತ್ತಿದ್ದರು.

  ಈ ವೇಳೆ ಅಭಿಮಾನಿಯೋರ್ವ ನಟಿ ರಾಗಿಣಿ ಅವರ ಕೈಹಿಡಿದು ಎಳೆದು ಅನುಚಿತ ವರ್ತನೆ ತೋರಿದ್ದಾನೆ. ಇದರಿಂದ ಆಕ್ರೋಶಗೊಂಡ ನಟಿ ರಾಗಿಣಿ ಆತನ ಕಪಾಳಕ್ಕೆ ಭಾರಿಸಿದ್ದಾರೆ. ಈ ಕುರಿತ ವಿಡಿಯೋ ಇನ್ ಸ್ಟಾಗ್ರಾಂ ನಲ್ಲಿ ವೈರಲ್ ಆಗಿತ್ತಾದರೂ ಬಳಿಕ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಆದರೆ ಕಪಾಳ ಮೋಕ್ಷದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

  ರಾಗಿಣಿ ದ್ವಿವೇದಿ ಅವರು ಇವೆಂಟ್‌ ಗಾಗಿ ಪಿಂಕ್‌ ಬಣ್ಣದ ಫ್ರಾಕ್‌ ತೊಟ್ಟು ಎಂಜಿ ರೋಡ್‌ನಲ್ಲಿರುವ ಪಬ್‌ ಒಂದಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿ ಆಗಮಿಸಿದಾಗ ಅಭಿಮಾನಿಗಳು ಫೋಟೋ ತಗೊಳ್ಳಲು ಮುಗಿಬಿದ್ದಿದ್ದಾರೆ. ರಾಗಿಣಿ ದ್ವಿವೇದಿ ಅವರು ಫ್ಯಾನ್ಸ್‌ಗೆ ಫೋಟೋ ನೋಡಿ, ಮಾತನಾಡಿಸುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ಅವರ ಕೈ ಹಿಡಿದು ಎಳೆದಿದ್ದಾನೆ. ಇದರಿಂದ ಆಕ್ರೋಶಗೊಂಡ ನಟಿ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

Recent Articles

spot_img

Related Stories

Share via
Copy link