ಸುಮಲತಾ- ದರ್ಶನ್‌ ನಡುವಿನ ಬಿರುಕು :ವಿವಾದಕ್ಕೆ ತೆರೆ ಎಳೆದ ಸುಮಲತಾ

ಬೆಂಗಳೂರು :

    ನಟ ದರ್ಶನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ. ದರ್ಶನ್ ಅವರ ಈ ನಡೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಕಾಕತಾಳೀಯ ಎಂಬಂತೆ ಸುಮಲತಾ ಅವರು ಇನ್​ಸ್ಟಾಗ್ರಾಮ್ ಸ್ಟೇಟಸ್​ಗಳಲ್ಲಿ ಮಾರ್ಮಿಕವಾಗಿ ಪೋಸ್ಟ್​ಗಳನ್ನು ಮಾಡುತ್ತಾ ಬಂದರು. ಈ ಎರಡೂ ಬೆಳವಣಿಗೆ ಮಧ್ಯೆ ಲಿಂಕ್ ಮಾಡಲಾಯಿತು. ದರ್ಶನ್   ಹಾಗೂ ಸುಮಲತಾ ಸಂಬಂಧ ಹಾಳಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಈಗ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ಕೊನೆ ಉಸಿರು ಇರೋವರೆಗೂ ದರ್ಶನ್ ನನ್ನ ಮಗ’ ಎಂದಿದ್ದಾರೆ. 

   ದರ್ಶನ್ ಅವರು ಸುಮಲತಾ ಅವರನ್ನು ಮಾತ್ರವಲ್ಲ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ. ಇದನ್ನು ಗಮನಿಸಬೇಕು ಎಂದು ಸುಮಲತಾ ಒತ್ತಿ ಹೇಳಿದ್ದಾರೆ. ‘ಸಾಮಾಜಿಕ ಜಾಲತಾಣದಲ್ಲಿ ಅನ್​ಫಾಲೋ ಮಾಡಿದರೆ ಸಂಬಂಧ ಹಾಳಾಗುತ್ತದೆಯೇ? ಈ ವಿಚಾರವನ್ನು ಕೇಳಿ ನಗಬೇಕಾ, ಬೇಸರಗೊಳ್ಳಬೇಕಾ ಗೊತ್ತಾಗುತ್ತಿಲ್ಲ’ ಎಂದು ಟಿವಿ9ಗೆ ಸುಮಲತಾ ಎಕ್ಸ್​ಕ್ಲೂಸಿವ್​ ಹೇಳಿಕೆ ನೀಡಿದ್ದಾರೆ.

   ‘ನನ್ನ ಕೊನೆಯ ಉಸಿರು ಇರುವವರೆಗೂ ದರ್ಶನ್​ ನನ್ನ ಮಗನೇ. ದರ್ಶನ್​ನ ಗುರಿಯಾಗಿಸಿಕೊಂಡು ನಾನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿಲ್ಲ. ದರ್ಶನ್​ ಇನ್​ಸ್ಟಾಗ್ರಾಂನಲ್ಲಿ ಯಾರನ್ನೂ ಸಹ ಫಾಲೋ ಮಾಡುತ್ತಿಲ್ಲ. ವಿನೀಶ್​ನನ್ನು ಕೂಡ ಅನ್​​ಫಾಲೋ ಮಾಡಿದ್ದಾರೆ’ ಎಂದಿದ್ದಾರೆ ಸುಮಲತಾ.

   ‘ಎಲ್ಲರೂ ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದೇವೆ ಅನ್ನಿಸುತ್ತದೆ. ಆದರೆ, ನಾನು ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಮಹತ್ವ ಕೊಡುವುದಿಲ್ಲ. ಸೋಶಿಯಲ್ ಮೀಡಿಯಾ ಯೂಸ್​ಫುಲ್ ಟೂಲ್. ಅದೇ ರೀತಿ ಇದು ಡೇಂಜರಸ್ ವೆಪನ್ ಕೂಡ ಹೌದು’ ಎಂದು ಸುಮಲತಾ ಹೇಳಿದ್ದಾರೆ. 

   ‘ನನ್ನ ಸಾಮಾಜಿಕ ಖಾತೆಯಲ್ಲಿ ದರ್ಶನ್​ನ ಫಾಲೋ ಮಾಡ್ತಿದ್ದೇನೆ. ನಾನು ಯಾರನ್ನೋ ಗುರಿಯಾಗಿಸಿ ಪೋಸ್ಟ್ ಮಾಡಿರಲಿಲ್ಲ. ನಾನು ಹಾಕಿದ್ದ ಪೋಸ್ಟ್​ಗೂ ದರ್ಶನ್​ಗೂ ಸಂಬಂಧವಿಲ್ಲ. ಇದೊಂದು ಸಿಲ್ಲಿ ವಿಚಾರ ಎಂದು ನನಗೆ ಅನಿಸುತ್ತದೆ. ನಮ್ಮ ಪ್ರೀತಿ ವಿಶ್ವಾಸದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನನ್ನ ಜೀವನದಲ್ಲಿ ಋಣಾತ್ಮಕ ಚಿಂತನೆಗಳಿಗೆ ಜಾಗವಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದವರಿಗೂ ಒಳ್ಳೆಯದಾಗಲಿ ಎಂದು ಬಯಸುವವನು ನಾನು. ನಮ್ಮ ಮನೆಯಲ್ಲಿ ದರ್ಶನ್ ಇಲ್ಲದೆ ಯಾವ ಕಾರ್ಯಕ್ರಮ ನಡೆಯಲ್ಲ’ ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link