ಗುಬ್ಬಿ:
ಗುಬ್ಬಿ ಪಟ್ಟಣದ ಮೂಲಕ ಹಾದು ಹೋಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ 206 ರನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಸಂಖ್ಯೆ ಬದಲಾಯಿಸಿ ಎನ್ ಎಚ್ 73 ಎಂದು ಹೆಸರಿಸಿ ಕಳೆದ ಆರೇಳು ವರ್ಷಗಳಿಂದ ಅಭಿವೃದ್ಧಿಗೊಳಿಸುತ್ತಿರುವುದು ಸರಿಯಷ್ಟೇ ಆದರೆ ಈ ಹೆದ್ದಾರಿ ಯಾವುದೇ ತಾಲೂಕು ಕೇಂದ್ರಗಳನ್ನು ಸಂಪರ್ಕಿಸುವುದಿಲ್ಲ ಬದಲಾಗಿ ಎಲ್ಲಾ ಕಡೆ ಬೈಪಾಸ್ ರಸ್ತೆಗಳ ನಿರ್ಮಾಣವಾಗಿದ್ದು ಇವು ಸಂಪೂರ್ಣಗೊಂಡಿಲ್ಲ ಆದರೂ ಈಗಾಗಲೇ ಸುಂಕ ವಸೂಲಿ ಪ್ರಾರಂಭಿಸಿರುವುದು ಗಮನಾರ್ಹ ಇದನ್ನು ಕೇಳುವವರು ಇಲ್ಲ ಹೇಳುವವರು ಇಲ್ಲ ಇದು ಯಾಕೋ ದಂದೆಯ ರೂಪದಲ್ಲಿ ಹೆಗ್ಗಿಲ್ಲದೆ ನೆಡೆಯುತ್ತಿದೆ,
ಕಳೆದವಾರದಿಂದ ಗುಬ್ಬಿ ತಾಲೂಕಿನ ಗಡಿ ಬಾಗವಾದ ಹತ್ಯಾಳು ನರಸಿಂಹಸ್ವಾಮಿ ದೇವಾಲಯದ ಬಳಿ ಇರುವ ಸುಂಕ ವಸೂಲಾತಿ ಕೇಂದ್ರದಲ್ಲಿ ಅಧಿಕೃತವಾಗಿ ಸುಂಕವಸೂಲಿ ಪ್ರಾರಂಭ ಮಾಡಿದ್ದು ರಸ್ತೆ ಕಾಮಗಾರಿ ಮುಗಿಯದೇ ಹಣ ವಸೂಲಿಗಿಳಿದಿದ್ದಾರೆ ಎಂದು ಜನ ಶಪಿಸುತ್ತಿದ್ದಾರೆ,
ತುಮಕೂರುಗ್ರಾಮಾಂತರ ಕ್ಷೇತ್ರ ಮಲ್ಲಸಂದ್ರದಿಂದ ಪ್ರಾರಂಭವಾಗುವ ಹೆದ್ದಾರಿ ದಾರಿಯುದ್ದಕ್ಕೂ ಹಂಪ್ಸ್ ಗಳಿಂದ ಕೂಡಿದ್ದು
ರಸ್ತೆನಿರ್ಮಾಣ ಮಾಡಿ ಕೆಲವೇ ವರ್ಷಗಳಲ್ಲಿ ಅಲ್ಲಲ್ಲಿ ರಸ್ತೆ ಕುಸಿದಿದೆ ಈ ಬಗ್ಗೆ ಗುತ್ತಿಗೆದಾರರು ಗಮನಹರಿಸಬೇಕಿದೆ ಉದಾಹರಣೆಗೆ ಎಂ ಹೆಚ್ ಪಟ್ಟಣ ಕೆರೆ ಗದ್ದೆ ಬಯಲಲ್ಲಿ ರಸ್ತೆ ಅಲ್ಲಲ್ಲಿ ಕುಸಿದಿದೆ ಇದರಿಂದ ಆಘಾತವಾಗುವ ಸಂಭವಗಳಿವೆ ಹಾಗೂ ಇಲ್ಲಿರುವ ಹೈ ಟೆನ್ಷನ್ ಲೈನ್ ನ ಕಂಬಗಳನ್ನು ಇನ್ನು ಸ್ಥಳಾಂತರಿಸದೇ ಇರುವ ಕಾರಣ ಇಲ್ಲಿ ಎರಡು ಕಡೆ ಅವೈಜ್ಞಾನಿಕ ಹಂಪ್ಸ್ ಹಾಕಲಾಗಿದ್ದು ವೇಗವಾಗಿ ಬರುವ ಕಾರುಗಳು ಗೊತ್ತಿಲ್ಲದ್ದೆ ಕೆಲವು ಸಲ ಹಾರಿ ಸಣ್ಣ ಪುಟ್ಟ ಆಘಾತವಾದರು ಯಾರ ಗಮನಕ್ಕೂ ಬರುತ್ತಿಲ್ಲ,
ಗುಬ್ಬಿ ಪಟ್ಟಣಕ್ಕೆ ಪ್ರವೇಶಿಸುವ ರಸ್ತೆ ಸಂಪರ್ಕ ಏಕ ಮುಖವಾಗಿದ್ದರು ಇಲ್ಲಿ ಎಚ್ಚರಿಸುವ ಯಾವುದೇ ನಾಮ ಫಲಕಗಳು ಇಲ್ಲದೆ ದ್ವಿಚಕ್ರವಾಹನ ಸವಾರರು ಆಘಾತಕ್ಕಿಡಾದರು ಪ್ರಕರಣ ಗಳು ಬೆಳಕಿಗೆ ಬರುತ್ತಿಲ್ಲಎಂ ಹೆಚ್ ಪಟ್ಟಣ ಗೇಟ್ ಬಳಿ ಗುಬ್ಬಿಯ ಬೈ ಪಾಸ್ ರಸ್ತೆ ಪ್ರಾರಂಭವಾಗುವುದು ಆದರೆ ಇಲ್ಲಿ ರಸ್ತೆಯ ಸಂಪರ್ಕ ಮುಚ್ಚಲಾಗಿದೆ ಆದರೂ ಕೆಲವು ಸ್ಥಳೀಯರು ಇಲ್ಲಿ ಜಾಗ ಮಾಡಿಕೊಂಡು ನುಗ್ಗುತ್ತಾರೆ ಇದರ ಬಗ್ಗೆ ಕೇಳುವವರೇ ಇಲ್ಲ
ಇದರಿಂದ ಸಣ್ಣ ಪುಟ್ಟ ಅಪಘಾತವಾಗುತ್ತಲೇ ಇರುತ್ತದೆ
ಇಲ್ಲಿನ ಸರ್ವಿಸ್ ರಸ್ತೆ ಈಗಾಗಲೇ ಕೆಲವು ಕಡೆ ಕುಸಿದಿದೆ ಇದನ್ನು ಗುತ್ತಿಗೆದಾರ ಗಮನಿಸಿದ್ದಾರೋ ಇಲ್ಲವೋ ಗೊತ್ತಾಗುತ್ತಿಲ್ಲ,
ಹೊಸದಾಗಿ ನಿರ್ಮಾಣ ಮಾಡಿ ಅಧಿಕೃತವಾಗಿ ರಸ್ತೆ ಉದ್ಘಾಟನೆಗೊಳ್ಳದೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಅನಧಿಕೃತವಾಗಿ ಸುಂಕ ವಸೂಲಾತಿ ಮಾಡುತ್ತಿರುವ ಗುತ್ತಿಗೆದಾರ ರನ್ನು ಕೇಳುವವರು ಯಾರು ಎಂಬುದೇ ಪ್ರಶ್ನೆಯಾಗಿದೆ ಈಗಾಗಲೇ ಗುಬ್ಬಿ ಪಟ್ಟಣದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ರಸ್ತೆ ಗುಂಡಿ ಗುದರ ಗಳಿಂದ ಕೂಡಿದ್ದು ಈ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರಿಲ್ಲವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ
ಸಿಂಗೋನಹಳ್ಳಿಯಿಂದ ಪತ್ರೆಮತ್ತಿಘಟ್ಟದವರೆಗೆ ಸುಮಾರು 8 ಕಿಮೀ ರಸ್ತೆ ಕ್ರಮಿಸಲು ಅರ್ಧ ಗಂಟೆ ಸಮಯ ಬೇಕಾಗಬಹುದು ಕಾರಣ ಇಲ್ಲಿರುವ ಗುಂಡಿಗಳದ್ದಾದರೆ ಇನ್ನೊಂದು ರಸ್ತೆಯುದ್ದಕ್ಕೂ ಇರುವ ಅವೈಜ್ಞಾನಿಕ ಹಂಪ್ಸ್ ಗಳು 8 ಕಿಮೀ ರಸ್ತೆಗೆ 20 ಕ್ಕೂ ಹೆಚ್ಚು ಹಂಪ್ಸ್ ಗಳನ್ನು ಹಾಕಲಾಗಿದೆ ಈ ಕಾರ್ಯಕ್ಕೆ ಯಾವ ಪುಣ್ಯಾತ್ಮ ಐಡಿಯಾ ಕೊಟ್ಟನೋ ಎಂದು ಜನ ಶಾಪ ಹಾಕುತ್ತಾ ಇಲ್ಲಿ ಸಂಚರಿಸುತ್ತಾರೆ,
ಕಳೆದೆರಡು ತಿಂಗಳುಗಳ ಹಿಂದೆ ಗುಬ್ಬಿ ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ವೈಟ್ ಟ್ಯಾ ಪಿಂಗ್ ರಸ್ತೆ ಮಾಡಲಾಗುವುದು ಇದಕ್ಕೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಲಾಗಿದೆ ಹಾಗೂ ರಸ್ತೆ ನಿರ್ಮಾಣ ಹಣ ನಿಗದಿಯಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಿದಾಡಿದ್ದು ಸರಿಯಷ್ಟೇ ಆದರೆ ಇದರ ಬಗ್ಗೆ ಅಧಿಕೃತವಾಗಿ ಇನ್ನು ಯಾವುದೇ ಮಾಹಿತಿಯಿಲ್ಲ
ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಕಾರಣ ರಸ್ತೆ ಕಿರಿದಾಗಿದ್ದು ಇದರ ಅಗಲೀಕರಣದ ಅವಶ್ಯಕತೆ ಇದ್ದು ನಂತರ ಅಭಿವೃದ್ಧಿಪಡಿಸಬೇಕಿದೆ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಡಾದಾಗ ರಸ್ತೆ ಅಗಲೀಕರಣದ ಸರ್ಕಾರದ ನಿಯಮದ ಪ್ರಕಾರ ಆಗಿಲ್ಲ ಇಲ್ಲಿ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ತಮ್ಮ ಅಂಗಡಿ ಮಳಿಗೆಗೆಗಳು ಇಲ್ಲದಾಗುತ್ತವೆ ಎಂದು ರಾಜಕೀಯವಾಗಿ ಒತ್ತಡ ತಂದು 80 ಅಡಿ ಗಳಷ್ಟು ಅಗಲವಾಗಬೇಕಿದ್ದ ಜಾಗದಲ್ಲಿ ಕೇವಲ 40 ಅಡಿಗಳಷ್ಟು ರಸ್ತೆ ವಿಸ್ತರಿಸುವಂತೆ ನೋಡಿಕೊಂಡಿದ್ದರಂತೆ ಇದಕ್ಕೆ ಕಾರಣ ಕೆಲವು ರಾಜಕಾರಣಿಗಳ ಸಂಬದಿಕರ ಅಂಗಡಿಗಳನ್ನು ಕೆಡವಬೇಕಾಗುತ್ತದೆ ಎಂದು,ಇದರಿಂದ ಈಗ ಪಟ್ಟಣದಲ್ಲಿ ರಸ್ತೆ ಯಲ್ಲಿ ಸಂಚಾರ ದಟ್ಟಣೆ ಹೇಗಿದೆಯೆಂದರೆ ಒಮ್ಮೊಮ್ಮೆ ಇಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗುತ್ತದೆ,
ನಿತ್ಯ ಈ ರಸ್ತೆಯ ಮೂಲಕ 900 ಕ್ಕೂ ಹೆಚ್ಚು ಕೆ ಎಸ್ ಆರ್ ಟಿ ಸಿ ಬಸ್ ಗಳು ಸಂಚರಿಸುತ್ತವೆ ಇವು ಯಾವುದೇ ಕಾರಣಕ್ಕೂ ಬೈ ಪಾಸ್ ರಸ್ತೆಯ ಮೂಲಕ ಹಾದು ಹೋಗುವುದಿಲ್ಲನಿತ್ಯ 2000 ಸಾವಿರಕ್ಕೂ ಹೆಚ್ಚು ಕಾರುಗಳು ಈ ರಸ್ತೆಯಲ್ಲೇ ಸಂಚರಿಸುತ್ತವೆ
1000 ಕ್ಕೂ ಹೆಚ್ಚು ಟ್ರಕ್ ಗಳು ಸಂಚರಿಸುತ್ತವೆ ಇದು ಪಟ್ಟಣದ ಪ್ರಮುಖ ರಸ್ತೆಯಾಗಿದ್ದು ಇಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲ ಪಾದಚಾರಿ ಮಾರ್ಗವಿಲ್ಲದೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ರಸ್ತೆಗಿಳಿಯುತ್ತಾರೆ ಹಾಗಾಗಿ ಗುಬ್ಬಿ ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಆಗಲೇ ಬೇಕು ಎಂದು ಗುಬ್ಬಿ ಪಟ್ಟಣದ ಹಿರಿಯ ನಾಗರೀಕರು ಒತ್ತಾಯಿಸಿದ್ದಾರೆ, ಏನೇ ಆಗಲಿ ಹೊಸ ಭರವಸೆಯನ್ನು ಹೊತ್ತು ಜನರ ಕನಸಿಗೆ ರೂಪ ಕೊಡಲು ಬೆಂಗಳೂರಿನಿಂದ ಬಂದಿರುವ ನಮ್ಮ ಸಂಸದರು ಹಾಗೂ ಕೇಂದ್ರ ಸಚಿವರು ಆದ ವಿ ಸೋಮಣ್ಣನವರು ಅಭಿವೃದ್ದಿ ಕಾರ್ಯಗಳು ಬರೀ ಪ್ರಚಾರಕ್ಕೆ ಆಗದೆ ಕಾರ್ಯ ರೂಪಕ್ಕೂ ಬಂದಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ನಮ್ಮ ತುಮಕೂರು ಜಿಲ್ಲೆ ಎಲ್ಲಾ ರೀತಿಯ ಅಭಿವೃದ್ಧಿ ಕಾಣಲು ಸಾಧ್ಯ ಎಂಬುದೇ ಜನರ ಆಶಯ
