ತವರು ನೆಲದಲ್ಲೇ CSKಗೆ ಸೋಲಿನ ರುಚಿ ತೋರಿಸಿದ RCB

ಚೆನ್ನೈ:

     ರಾಯಲ್ ಚಾಲೆಂಜರ್ಸ್ ಬೆಂಗಳೂರು  ಮತ್ತು ಚೆನ್ನೈ ಸೂಪರ್ ಕಿಂಗ್ಸ್  ನಡುವಿನ IPL ಪಂದ್ಯದಲ್ಲಿ ಧೋನಿ ಪಡೆಯನ್ನು ಆರ್ ಸಿಬಿ 50 ರನ್ ಗಳ ಅಂತರದಿಂದ ಸೋಲಿಸಿ ಗೆಲುವಿನ ಸರಣಿಯನ್ನು ಮುಂದೂವರೆಸಿದೆ.

     ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ (51 ರನ್) ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು. ಆರ್ ಸಿಬಿ ನೀಡಿದ 197 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಬಾರಿಸಲಷ್ಟೇ ಶಕ್ತವಾಗಿದ್ದು ಸೋಲು ಕಂಡಿತು.

     ಚೆನ್ನೈ ಪರ ರಚಿನ್ ರವೀಂದ್ರ 41, ಶಿವಂ ದುಬೆ 19, ರವೀಂದ್ರ ಜಡೇಜಾ 25 ರನ್ ಹಾಗೂ ಎಂಎಸ್ ಧೋನಿ ಅಜೇಯ 30 ರನ್ ಬಾರಿಸಿದ್ದಾರೆ. ಆರ್ ಸಿಬಿ ಪರ ಜೋಶ್ ಹೆಜಲ್ಪುಡ್ 3, ಯಶ್ ದಯಾಳ್ ಮತ್ತು ಲಿವಿಂಗ್ಸ್ಟೋನ್ ತಲಾ 2 ವಿಕೆಟ್ ಪಡೆದರು.

    ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್ ಗೆ 45 ರನ್ ಚಚ್ಚಿದರು. ಪ್ರಮುಖವಾಗಿ ಸ್ಫೋಟಕ ಆರಂಭ ನೀಡಿದ ಫಿಲಿಪ್ ಸಾಲ್ಟ್ ಕೇವಲ 16 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಸಹಿತ 32 ರನ್ ಕಲೆ ಹಾಕಿ ಆರ್ ಸಿಬಿಗೆ ಭರ್ಜರಿ ಆರಂಭ ನೀಡಿದರು. 

Recent Articles

spot_img

Related Stories

Share via
Copy link