ಮುಂಬೈ: .
ಏಪ್ರಿಲ್ 1ರ ಮಂಗಳವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ(Stock market crash) ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1,291 ಅಂಕಗಳ ಭಾರಿ ಕುಸಿತಕ್ಕೀಡಾಯಿತು. ಬ್ಯಾಂಕಿಂಗ್ ಮತ್ತು ಐಟಿ ಷೇರುಗಳ ದರ ಕುಸಿಯಿತು. ಟ್ರಂಪ್ ಅವರ ಟಾರಿಫ್ ಘೋಷಣೆಗೆ ಮುನ್ನ ಮಾರುಕಟ್ಟೆ ಅನಿಶ್ಚಿತತೆಯಿಂದ ತತ್ತರಿಸಿತು. ಸೆನ್ಸೆಕ್ಸ್ 1,291 ಅಂಕಗಳನ್ನು ಕಳೆದುಕೊಂಡು 76,123ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 331 ಅಂಕ ನಷ್ಟದಲ್ಲಿ 23,187ಕ್ಕೆ ವಹಿವಾಟು ನಡೆಸುತ್ತಿತ್ತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಐಟಿ ಸ್ಟಾಕ್ಸ್‌ಗಳಾದ ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಟೆಕ್ ದರ ಇಳಿಯಿತು.
ಈ ನಡುವೆ ಬೆಂಗಳೂರು ಮೂಲದ, ಡಿಫೆನ್ಸ್ ಪಿಎಸ್‌ಯು ಆಗಿರುವ ಎಚ್‌ಎಎಲ್ ಕಂಪನಿಯ ಷೇರಿನ ದರದಲ್ಲಿ 7.5% ಏರಿಕೆಯಾಗಿದೆ. ಎಚ್‌ಎಎಲ್ 2024-25ರಲ್ಲಿ 30,400 ಕೋಟಿ ರುಪಾಯಿಗೂ ಹೆಚ್ಚು ಆದಾಯ ಗಳಿಸಿ ಉತ್ತಮ ಪ್ರಗತಿ ದಾಖಲಿಸಿರುವುದು ಇದಕ್ಕೆ ಕಾರಣ. ಎಚ್‌ಎಎಲ್ ಷೇರಿನ ಈಗಿನ ಮಾರುಕಟ್ಟೆ ದರ 4,269 ರುಪಾಯಿಗಳಾಗಿದೆ.
ಮತ್ತೊಂದು ಕಡೆ ವೊಡಾಫೋನ್ ಐಡಿಯಾ ಷೇರಿನ ದರದಲ್ಲೂ 15% ಏರಿಕೆಯಾಗಿದೆ. ಕೇಂದ್ರ ಸರಕಾರವು ಕಂಪನಿಯ ಬಾಕಿ 36,950 ಕೋಟಿ ರುಪಾಯಿಗಳನ್ನು ಈಕ್ವಿಟಿಯಾಗಿ ಪರಿವರ್ತಿಸಲು ನಿರ್ಧರಿಸಿರುವುದು ಇದಕ್ಕೆ ಕಾರಣ. ಇದರೊಂದಿಗೆ ವೊಡಾಫೋನ್ ಐಡಿಯಾದಲ್ಲಿ ಕೇಂದ್ರ ಸರಕಾರದ ಷೇರು ಪಾಲು 22.6%ರಿಂದ 48.99%ಕ್ಕೆ ಏರಿಕೆಯಾಗುತ್ತಿದೆ. ವೊಡಾಫೋನ್ ಐಡಿಯಾ ಷೇರು ದರ ಈಗ 8 ರುಪಾಯಿಗಳ ಆಸುಪಾಸಿನಲ್ಲಿದೆ.
