ತುಂಗಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕರಿಬ್ಬರ ಸಾವು

ರಾಯಚೂರು:

    ತುಂಗಭದ್ರಾ ನದಿಯಲ್ಲಿ  ಈಜಲು ತೆರಳಿದ ಬೆಂಗಳೂರು ಮೂಲದ ಇಬ್ಬರು ಯುವಕರು  ಮುಳುಗಿ ಸಾವನ್ನಪ್ಪಿರುವ  ಘಟನೆ ರಾಯಚೂರು  ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮೂಲದ ಮುತ್ತುರಾಜ್‌ ಮತ್ತು ಮದನ್‌ ಎಂದು ಗುರುತಿಸಲಾಗಿದೆ. ಯುವಕರ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ. ರಕ್ಷಿಸಲು ಹೋಗುವ ಮುನ್ನವೇ ಇಬ್ಬರೂ ಕೈಕಾಲು ಬಡಿದು ತಳ ಸೇರಿದ್ದರು.

    ಎಲೆಬಿಚ್ಚಾಲಿ ಗುರುರಾಯರ ಏಕಶಿಲಾ ವೃಂದಾವನ ದರ್ಶನಕ್ಕೆ ಬೆಂಗಳೂರಿನಿಂದ 15 ಜನ ಸ್ನೇಹಿತರ ತಂಡ ಆಗಮಿಸಿತ್ತು. ಈ ವೇಳೆ ಮುತ್ತುರಾಜ್ ಮತ್ತು ಮದನ್ ನದಿಯಲ್ಲಿ ಈಜಲು ತೆರಳಿದ್ದಾರೆ. ನದಿಯಲ್ಲಿ ತಗ್ಗು ಪ್ರದೇಶದಲ್ಲಿ ಸಿಲುಕಿ ಒದ್ದಾಡಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆ ಕುರಿತಂತೆ ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Articles

spot_img

Related Stories

Share via
Copy link