ಭಾರತ ತೊರೆಯಲು ಪಾಕ್‌ ಪ್ರಜೆಗಳಿಗೆ ಸೂಚನೆ; ಸುಪ್ರೀಂ ಕೋರ್ಟ್‌ ಮೊರೆ ಹೋದ ವ್ಯಕ್ತಿ

ನವದೆಹಲಿ:

    ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈಗಾಗಲೇ ಭಾರತ ಸರ್ಕಾರ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ತೊರೆಯುವಂತೆ ಆದೇಶ ನೀಡಿದೆ. ಇದೀಗ ಈ ಆದೇಶದ ವಿರುದ್ಧ ಆಕ್ಸೆಂಚರ್ ಉದ್ಯೋಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಅಹ್ಮದ್ ತಾರಿಕ್ ಬಟ್ ಎಂಬ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದು,ಭಾರತೀಯ ಪಾಸ್‌ಪೋರ್ಟ್‌ಗಳು ಮತ್ತು ಆಧಾರ್ ಕಾರ್ಡ್ ಹೊಂದಿದ್ದರೂ ದೇಶ ಬಿಟ್ಟು ಹೋಗುವಂತೆ ಆದೇಶಿಸಲಾಗಿದೆ ಎಂದು ಹೇಳಿಕೊಂಡಿದ್ದರು.ಇದೀಗ ಕೋರ್ಟ್‌ ಆದೇಶಕ್ಕೆ ತಡೆ ಹಿಡಿದಿದೆ.

   ಕೇರಳದ ಕೋಝಿಕ್ಕೋಡ್‌ನಲ್ಲಿರುವ ಐಐಎಂನಿಂದ ಎಂಬಿಎ ಪದವಿ ಪಡೆದಿರುವ ಬಟ್‌ ವಿರುದ್ದ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್‌ ಹೇಳಿಕೆ ನೀಡಿದೆ. ನ್ಯಾಯಾಲಯವು ದಾಖಲೆಗಳ ಪರಿಶೀಲನೆಗೆ ನಿರ್ದೇಶನ ನೀಡಿದೆ. ಶುಕ್ರವಾರ ಬೆಳಿಗ್ಗೆ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಆತನ ಬಳಿ ಭಾರತಕ್ಕೆ ಹೇಗೆ ಬಂದಿರಿ ಎಂದು ಪ್ರಶ್ನೆ ಮಾಡಿದ್ದಾರೆ. ಬಟ್ ಅವರು 1997 ರಲ್ಲಿ ಪಾಕಿಸ್ತಾನದ ಪಾಸ್‌ಪೋರ್ಟ್ ಹೊಂದಿದ್ದ ತಮ್ಮ ತಂದೆಯೊಂದಿಗೆ ಭಾರತಕ್ಕೆ ಬಂದಿದ್ದರು ಎಂದು ಹೇಳಿದರು. ಶ್ರೀನಗರಕ್ಕೆ ಆಗಮಿಸಿದ ನಂತರ, ಬಟ್ ಅವರು ತಮ್ಮ ಪಾಕ್ ಪಾಸ್‌ಪೋರ್ಟ್ ಅನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಒಪ್ಪಿಸಿದರು, ನಂತರ ಅವರು ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ ಪಡೆದುಕೊಂಡರು ಎಂದು ಹೇಳಿದ್ದಾರೆ.

   ಅವರ ಕುಟುಂಬದ ಇತರ ಸದಸ್ಯರು ಮೂರು ವರ್ಷಗಳ ನಂತರ, ಅಂದರೆ 2000 ರಲ್ಲಿ ಶ್ರೀನಗರಕ್ಕೆ ಬಂದರು ಮತ್ತು ಪ್ರತಿಯೊಬ್ಬರೂ ಭಾರತೀಯ ಪೌರತ್ವ ಮತ್ತು ಪಾಸ್‌ಪೋರ್ಟ್ ಅನ್ನು ಸಹ ಪಡೆದುಕೊಂಡರು ಎಂದು ಬಟ್‌ ಹೇಳಿದ್ದಾರೆ. ಆದಾಗ್ಯೂ, ಈ ದಾಖಲೆಗಳ ಹೊರತಾಗಿಯೂ, ಮತ್ತು ಅವರ ಕುಟುಂಬ ಸದಸ್ಯರು ಮತ್ತು ಅವರು ಎಲ್ಲರೂ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂಬ ಅಂಶದ ಹೊರತಾಗಿಯೂ, ಕಳೆದ ವಾರ ಗೃಹ ಸಚಿವಾಲಯದ ಆದೇಶವು ಎಲ್ಲರಿಗೂ ದೇಶವನ್ನು ತೊರೆಯುವಂತೆ ನೋಟಿಸ್ ನೀಡಿದೆ ಎಂದು ಅವರು ಹೇಳಿದರು. ಅವರು ವೀಸಾದ ಮೇಲೆ ಭಾರತಕ್ಕೆ ಪ್ರವೇಶಿಸಿದ್ದಾರೆ ಮತ್ತು ಅವಧಿ ಮೀರಿ ಇಲ್ಲಿಯೇ ಉಳಿದಿದ್ದಾರೆ ಎಂದು ನೋಟಿಸ್‌ನಲ್ಲಿ ತಪ್ಪಾಗಿ ಹೇಳಲಾಗಿದೆ ಎಂದು ಅವರು ಹೇಳಿದ್ದಾರೆ. 

   ನಿಷೇಧಿತ ಪಾಕ್ ಮೂಲದ ಲಷ್ಕರ್-ಎ-ತೈಬಾ ಗುಂಪಿನ ನಾಲ್ವರು ಭಯೋತ್ಪಾದಕರು 26 ನಾಗರಿಕರನ್ನು ಕೊಂದ ಪಹಲ್ಗಾಮ್ ದಾಳಿಯ ನಂತರ, ಸರ್ಕಾರವು ಪಾಕ್ ಪ್ರಜೆಗಳಿಗೆ ನೀಡಲಾಗುತ್ತಿದ್ದ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿದೆ.

Recent Articles

spot_img

Related Stories

Share via
Copy link