ಪಾಕ್ ಮೇಲೆ ಭಾರತ ದಾಳಿ ಮಾಡಿದರೆ ಚೀನಾದೊಂದಿಗೆ ಕೈಜೋಡಿಸಿ; ಯೂನಸ್

ಡಾಕಾ 

     “ಭಾರತ ಒಂದುವೇಳೆ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಬಾಂಗ್ಲಾದೇಶ   ಚೀನಾದ ಜೊತೆ ಕೈಜೋಡಿಸಿ ಈಶಾನ್ಯ ಭಾರತದ 7 ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು” ಎಂದು ಬಾಂಗ್ಲಾದೇಶದ ಮಾಜಿ ಜನರಲ್ ಫಜ್ಲುರ್ ರೆಹಮಾನ್ ಹೇಳಿದ್ದಾರೆ. ಇದಕ್ಕೂ ಮೊದಲು, ಬಾಂಗ್ಲಾದೇಶ ಸರ್ಕಾರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಕೂಡ ಚೀನಾದಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು.

     ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ  ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಮಿಲಿಟರಿ ಪ್ರತೀಕಾರ ತೀರಿಸಿಕೊಂಡರೆ, ‘ಸೆವೆನ್ ಸಿಸ್ಟರ್ಸ್’ ಎಂದೂ ಕರೆಯಲ್ಪಡುವ ಭಾರತದ ಈಶಾನ್ಯ ರಾಜ್ಯಗಳನ್ನು ಆಕ್ರಮಿಸಲು ಚೀನಾದೊಂದಿಗೆ ಕೈ ಜೋಡಿಸಬೇಕು ಎಂದು ಮಾಜಿ ಬಾಂಗ್ಲಾದೇಶದ ಮಿಲಿಟರಿ ಅಧಿಕಾರಿ ಮತ್ತು ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಆಪ್ತ ಸಹಚರ ರೆಹಮಾನ್ ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದಾರೆ.

 
   ಈ ನಿಟ್ಟಿನಲ್ಲಿ ಜಂಟಿ ಮಿಲಿಟರಿ ವ್ಯವಸ್ಥೆ ಕುರಿತು ಚೀನಾದೊಂದಿಗೆ ಚರ್ಚೆಗಳನ್ನು ಪ್ರಾರಂಭಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ.” ಎಂದಿದ್ದಾರೆ. ಈ ಬಗ್ಗೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ರೆಹಮಾನ್ ಅವರ ಹೇಳಿಕೆಗಳಿಂದ ದೂರ ಉಳಿದಿದೆ. ಶುಕ್ರವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಹೇಳಿಕೆನು ರೆಹಮಾನ್ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಆ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದೆ.

Recent Articles

spot_img

Related Stories

Share via
Copy link