ಕನ್ನಡಿಯಲ್ಲಿ ತನ್ನನು ತಾನಿ ನೋಡಿ ಬೆಚ್ಚಿ ಬಿದ್ದ‌ ನಟಿ ….!

ಬೆಂಗಳೂರು :

     ಕಲಾವಿದರು ಯಾವಾಗಲೂ ಫಿಟ್ ಆಗಿರೋಕೆ ಬಯಸುತ್ತಾರೆ. ಈ ಕಾರಣದಿಂದಲೇ ನಿತ್ಯವೂ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ. ತಾವು ಸೇವನೆ ಮಾಡೋ ಆಹಾರದ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಆದರೆ, ಎಲ್ಲಾ ಸಮಯದಲ್ಲೂ ಇದೇ ರೀತಿ ನಡೆದುಕೊಳ್ಳೋಕೆ ಆಗಲ್ಲ. ಈ ಕಾರಣಕ್ಕೆ ದೇಹದ ಶೇಪ್ ಕಳೆದು ಹೋಗುತ್ತದೆ. ದೊಡ್ಡದಾಗಿ ಹೊಟ್ಟೆ ಬರುತ್ತದೆ. ಸೊಂಟದ ಭಾಗದಲ್ಲಿ ಬೊಜ್ಜು ತುಂಬಿಕೊಳ್ಳುತ್ತದೆ . ಈಗ ನಟಿಯೊಬ್ಬರಿಗೆ ಹೀಗೆಯೇ ಆಗಿದೆ. ಕನ್ನಡಿಯಲ್ಲಿ ತಮ್ಮದೇ ಹೊಟ್ಟೆ ನೋಡಿ ಅವರಿಗೆ ಶಾಕ್ ಆಗಿದೆ. ಆ ಬಳಿಕ ಆಗಿದ್ದು ಮಾತ್ರ ನಿಜಕ್ಕೂ ಸ್ಫೂರ್ತಿದಾಯಕ ಘಟನೆ. ಈ ರೀತಿ ಆಗಿದ್ದು ರಿತಿಕಾ ಸಿಂಗ್  ಅವರಿಗೆ. 

    ರಿತಿಕಾ ಹುಟ್ಟಿದ್ದು ಮುಂಬೈನಲ್ಲಿ. ಅವರು 2016ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಮೊದಲು ತಮಿಳು, ತೆಲುಗು ಸಿನಿಮಾಗಳನ್ನು ಮಾಡುತ್ತಿದ್ದ ಅವರು ನಂತರ ಹಿಂದಿ, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ವೆಟ್ಟೈಯನ್’ ಸಿನಿಮಾದಲ್ಲಿ ರಿತಿಕಾ ನಟಿಸಿದ್ದರು. ಈ ಚಿತ್ರ ಹಿಟ್ ಆಯಿತು. ಆ ಬಳಿಕ ರಿತಿಕಾ ಬ್ರೇಕ್ ಪಡೆದರು. ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಈ ಅವಧಿಯಲ್ಲಿ ರಿತಿಕಾ ಸಂಪೂರ್ಣವಾಗಿ ಶೇಪ್ ಕಳೆದುಕೊಂಡಿದ್ದರು. ರಿತಿಕಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ‘ನಾನು ತೂಕ ಹೆಚ್ಚಿಸಿಕೊಂಡಿದ್ದೇನೆ. ಈಗ ನನ್ನ ತೂಕ 72 ಕೆಜಿ’ ಎಂದು ಅವರು ಹೇಳಿದ್ದಾರೆ. ಆ ಬಳಿಕ ಅವರದ್ದೇ ಹೊಟ್ಟೆ ನೋಡಿ ಅವರಿಗೆ ಭಯ ಆಗಿದೆ. ಆ ಬಳಿಕ ಅವರ ಸ್ಫೂರ್ತಿದಾಯಕ ಜರ್ನಿ ಪ್ರಾರಂಭ ಆಗಿದೆ. ಅವರು ನಾನಾ ರೀತಿಯ ವರ್ಕೌಟ್ ಆರಂಭಿಸಿದ್ದಾರೆ.

Recent Articles

spot_img

Related Stories

Share via
Copy link