ಏರ್‌ ಡಿಫೆನ್ಸ್‌ ಸಿಸ್ಟಂ ಆಕಾಶ್ ವಿಶಿಷ್ಠತೆ ಏನು ಗೊತ್ತಾ…..?

ನವದೆಹಲಿ :

    ಭಾರತ-ಪಾಕಿಸ್ತಾನ ನಡುವೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ನಡೆದ ಯುದ್ಧದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿದ್ದು, ಪ್ರಶಂಸೆಗೆ ಪಾತ್ರವಾಗಿದ್ದು ರಷ್ಯಾ ನಿರ್ಮಿತ ಕ್ಷಿಪಣಿ ನಾಶ ಸಾಧನ ‘ಎಸ್-400’, ಭಾರತದಲ್ಲೇ ತಯಾರಾದ ‘ಬ್ರಹ್ಮೋಸ್’ ಖಂಡಾಂತರ ಕ್ಷಿಪಣಿ ಹಾಗೂ ಕ್ಷಿಪಣಿ ಧ್ವಂಸ ಕಾರಿ ಸಾಧನ ‘ಆಕಾಶ್’. ದೇಶೀಯವಾಗಿಯೇ ಸಂಶೋಧನೆ ಮಾಡಿ ಅಭಿವೃದ್ಧಿ ಪಡಿಸಲಾಗಿರುವ ‘ಆಕಾಶ್ ಕ್ಷಿಪಣಿ ವಿನಾಶಕ’ ಪ್ರಸ್ತುತ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ.

    ಪಾಕ್ ಸೇನಾಪಡೆಗಳು ಭಾರತದತ್ತ ಗುರಿಯಿಟ್ಟು ಹಾರಿಸಿದ ದೊಡ್ಡ ಬಾಂಬರ್‌ಗಳು, ಕ್ಷಿಪಣಿಗಳನ್ನು ಅವು ಆಕಾಶದಲ್ಲಿ ಇರುವಾಗಲೇ ಹೊಡೆದುರುಳಿಸುವ ಕಾರ್ಯದಲ್ಲಿ ‘ಆಕಾಶ್’ ಪಾತ್ರವೂ ದೊಡ್ಡ ದಾಗಿದೆ. ರಕ್ಷಣಾ ಸಚಿವಾಲಯದಡಿ ಬರುವ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ (ಡಿಆರ್‌ಡಿಒ) ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾದ ಈ ‘ವಾಯುದಾಳಿ ಗುರಾಣಿ’ ಕಾಶ್‌ ನಿಂದಾ‌ ಗಿಯೇ ಪಾಕ್‌ನ ವಾಯುದಾಳಿಯನ್ನು ಸಮರ್ಥ ರೀತಿಯಲ್ಲಿ ತಡೆದು ವಿಫಲಗೊಳಿಸಲು ಸಾಧ್ಯ ವಾಗಿದೆ.

   ಆಕಾಶ್ ಕ್ಷಿಪಣಿ- ಯುದ್ಧ ವಿಮಾನ ನಾಶ ಸಾಧನವನ್ನು ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಿದ್ದರಿಂದ ದೇಶಕ್ಕೆ ‘ಕ್ಷಿಪಣಿ ನಾಶ ಸಾಧನ’ದ ಆಮದು ತೊಂದರೆ ತಪ್ಪಿದಂತಾಗಿದೆ. ಈ ಸಾಧನದ ತಯಾರಿಕೆಯಿಂದಾಗಿ 2023ರಲ್ಲಿ ದೇಶಕ್ಕೆ 550 ಕೋಟಿ ಅಮೆರಿಕನ್ ಡಾಲರ್ (34500 ಕೋಟಿ ರು.) ಉಳಿತಾಯವಾಗಿದೆ ಎಂದು ರಕ್ಷಣಾ ಸಚಿವಾಲಯ ವರದಿಯಲ್ಲಿ ಹೇಳಲಾಗಿದೆ.

ಅರ್ಜುನನಂತೆ!

    ಆಕಾಶ್ ಬಗ್ಗೆ ಡಿಆರ್‌ಡಿಒ ಹೇಳುವುದೇನೆಂದರೆ, ‘ಇದು ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಡಿಸ್ಟ್ರಕ್ಷನ್ ಸಿಸ್ಟಂ ಆಗಿದೆ. ದೇಶದ ಮೇಲೆ ಎರಗಲೆತ್ನಿಸುವ ಶತ್ರುದೇಶದ ಕ್ಷಿಪಣಿಗಳು, ಬಾಂಬರ್‌ಗಳು, ದೊಡ್ಡ ಡ್ರೋನ್‌ಗಳನ್ನು ಅವು ಆಕಾಶ ಮಾರ್ಗದಲ್ಲಿ ಇರುವಾಗಲೇ ಬಲು ದೂರದಿಂದಲೇ ಹೊಡೆದುರುಳಿಸುವ, ಆಕಾಶದಲ್ಲೇ ನಾಶಪಡಿಸುವ ಸಾಮರ್ಥ್ಯ ಇರುವುದೇ ಭಾರತದ ‘ಆಕಾಶ್’ಗೆ. 

   ‘ಗ್ರೂಪ್ ಮೋಡ್’ ಮತ್ತು ‘ಅಟೊನಮಸ್ ಮೋಡ್’ ಎರಡನ್ನೂ ಒಳಗೊಂಡಿರುವ ಆಕಾಶ್ ಸಾಮಾನ್ಯವಾದ ಯುದ್ಧಾಸ್ತ್ರವಲ್ಲ. ಮಹಾಭಾರತದ ಅರ್ಜುನನಂತೆ, ಒಂದೇ ಸಮಯದಲ್ಲಿ ಒಂದೇ ಹೊಡೆತದಲ್ಲಿ ಹಲವು ಗುರಿಗಳನ್ನು ನಾಶಪಡಿಸಬಲ್ಲ ಸಾಮರ್ಥ್ಯ ಇರುವ ‘ಯುದ್ಧಾಸ್ತ್ರ’ವಾಗಿದೆ.

    ಕ್ಷಿಪಣಿ ಧ್ವಂಸಕಾರಿ ‘ಆಕಾಶ್’ ಸಾಧನ ‘ಎಲೆಕ್ಟ್ರಾನಿಕ್ ಕೌಂಟರ್ -ಕೌಂಟರ್ ಮೆಸರ್ಸ್’(ಇಸಿಸಿಎಂ) ಸೌಲಭ್ಯವನ್ನು ಒಳಗೊಂಡಿದೆ. ಟ್ರಕ್ ಮೇಲೆ ಈ ಸಾಧನವನ್ನು ಜೋಡಿಸಬಹುದಾಗಿದೆ. ಹಾಗಾಗಿ ಯೇ ಎಲ್ಲಿಗೆ ಬೇಕೆಂದರಲ್ಲಿಗೆ ಸರಾಗವಾಗಿ ಕೊಂಡೊಯ್ಯಬಹುದಾಗಿದೆ. ಯುದ್ಧ ವಿಮಾನಕ್ಕೂ ಜೋಡಿಸಬಹುದಾದ ಮಾದರಿಯಲ್ಲೂ ‘ಆಕಾಶ್’ ಲಭ್ಯವಿದೆ.

   ಹಾಗಾಗಿ ‘ಡಿಆರ್‌ಡಿಒ’ ಅಭಿವೃದ್ಧಿಪಡಿಸಿದ, ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ದೇಶದಲ್ಲೇ ತಯಾರಾದ ಈ ಶತ್ರುಸೇನೆ ಶಸ್ತ್ರಾಸ್ತ್ರ ನಾಶಕ ಯಂತ್ರ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. ಅಲ್ಲದೇ, ವಿದೇಶಕ್ಕೂ ರವಾನೆ ಆಗಿದೆ. ಅರ್ಮೇನಿಯ ದೇಶದ ಸೇನೆ ಯಲ್ಲೂ ಬಳಕೆ ಆಗುತ್ತಿದೆ.

ಗಾರ್ಡಿಯನ್ಸ್ ಆಫ್‌ ಸ್ಕೈ

   ‘ಡಿಆರ್‌ಡಿಒ’ ಅಭಿವೃದ್ಧಿಪಡಿಸಿದ ಶಾರ್ಟ್‌ರೇಂಜ್ ಕ್ಷಿಪಣಿ ನಾಶಕ ಸಾಧನವಾದ ಆಕಾಶ್ ಅನ್ನು ‘ಗಾರ್ಡಿಯನ್ಸ್ ಆಫ್ ಇಂಡಿಯನ್ ಸ್ಕೈ’ ಅರ್ಥಾತ್ ‘ಭಾರತದ ಆಕಾಶದ ಬಲಿಷ್ಠ ಕಾವಲುಗಾರ’‌ ಎಂದೇ ಕರೆಯಲಾಗುತ್ತದೆ. ಇಸ್ರೇಲ್ ಶತ್ರು ದೇಶ ಗಳ ಕ್ಷಿಪಣಿ ದಾಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ನಿರ್ಮಿ ಸಿರುವ ‘ಐರನ್ ಡೋಮ್’ಗೆ ಕೂಡಾ ಭಾರತದ ‘ಆಕಾಶ್’ ಸಾಧನವನ್ನು ಹೋಲಿಸಿ ಪ್ರಶಂಸಿಸ ಲಾಗುತ್ತದೆ. ಪ್ರಧಾನಿ ಮೋದಿ ಅವರೂ ಕೂಡ ಇತ್ತೀಚಿನ ಭಾರತ-ಪಾಕ್ ಸಮರದಲ್ಲಿ ದೇಶವನ್ನು ಶತ್ರುದಾಳಿಯಿಂದ ಸಮರ್ಥವಾಗಿ ರಕ್ಷಣೆ ಮಾಡಿದ ‘ಆಕಾಶ್’ ಮತ್ತು ‘ಎಸ್-400’ ಸಾಧನಗಳನ್ನು ಬಹಳವಾಗಿ ಮೆಚ್ಚಿ ಶ್ಲಾಘಿಸಿದ್ದಾರೆ. ಶತ್ರುಸೇನೆಯ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿ ಭಾರತವನ್ನು ಸುರಕ್ಷಿತವಾಗಿ ಕಾಪಾಡಿದ ‘ಆಕಾಶ್’ ಮತ್ತು ‘ಎಸ್-400’ ಸಾಧನ ಗಳೆರಡೂ ಶತ್ರುಸೇನೆಯ ದಾಳಿಗೆ ಬಲಿಷ್ಠ ಅಡ್ಡಗೋಡೆಗಳಾಗಿ ಕೆಲಸ ಮಾಡಿವೆ ಎಂದೇ ಪ್ರಶಂಸಿಸಲಾಗಿದೆ.

ವೈಶಿಷ್ಟ್ಯ

ಸಾಧನದ ಹೆಸರು: ಆಕಾಶ್ ಬ್ಯಾಟರಿ

ಸಿಂಗಲ್ ಪಿಇಎಸ್‌ಎ ೩ಡಿ ರಾಜೇಂದ್ರ ರಾಡಾರ್

ತಲಾ ೩ ಕ್ಷಿಪಣಿಗಳಿರುವ ೪ ಲಾಂಚರ್‌ಗಳು

ಪ್ರತಿ ಬ್ಯಾಟರಿ ಸಾಧನವೂ ೬೪ ಟಾರ್ಗೆಟ್‌ಗಳನ್ನು ಗುರುತಿಸಬಲ್ಲವು

೧೨ ಕ್ಷಿಪಣಿ, ಯುದ್ಧ ವಿಮಾನಗಳನ್ನು ಏಕಕಾಲದಲ್ಲಿ ಹೊಡೆದುರುಳಿಸಬಲ್ಲವು

ಕ್ಷಿಪಣಿಯ ತೂಕ ೬೦ ಕೆಜಿ

ಭಾರೀ ಪ್ರಮಾಣದ ಸೋಟಕಗಳಿರುವ ಕ್ಷಿಪಣಿ

ಪ್ರೀ ಫ್ರ್ಯಾಗ್‌ಮೆಂಟೆಡ್ ವಾರ್ ಹೆಡ್(ಸಿಡಿತಲೆ) ಪ್ರಾಕ್ಸಿಮಿಟಿ ಫ್ಯೂಸ್ ಹೊಂದಿದೆ

ಆಕಾಶ್ ಸಿಸ್ಟಂ ಎಲ್ಲಿ ಬೇಕಾದರೂ ಕೊಂಡೊಯ್ಯಬಲ್ಲ ರೀತಿಯ ವಾಹನಕ್ಕೆ ಜೋಡಣೆಯಾಗಿದೆ

2000 ಚದರ ಕಿಮೀವರೆಗೂ ವಾಯುದಾಳಿಯತ್ತ ನಿಗಾ ಇಡಬಲ್ಲ ಸಾಮರ್ಥ್ಯ 8 ಸಮರ್ಥ ರಾಡಾರ್-ಸರ್ವೆಲೆನ್ಸ್ ವ್ಯವಸ್ಥೆಯಿದೆ

ಸರ್ಫೇಸ್ ಟು ಏರ್ ಕ್ಷಿಪಣಿ ನಾಶದ ಆಕಾಶ್ ಬೆಲೆ: 2.50 ಕೋಟಿ ರು.

2009ರಲ್ಲಿ ಮೊದಲ ತಯಾರಿಕೆ

ಯುದ್ದ ವಿಮಾನ ವಿನಾಶಕ

ವೈಶಿಷ್ಟ್ಯ: ಎರಡು ಬಗೆಯಲ್ಲಿ ಶತ್ರು ಸೇನೆಯ ಕ್ಷಿಪಣಿ, ಡ್ರೋನ್ ನಾಶ ಪಡಿಸುವ ಸಮರ್ಥ ಸಮರಾಸ್ತ್ರ

ಶಕ್ತಿ: ಭಾರತೀಯ ಸೇನೆ ಮತ್ತು ವಾಯುಪಡೆಯಲ್ಲಿನ ಪ್ರತ್ಯೇಕ ರೀತಿಯ ಪ್ರತ್ಯಸ್ತ್ರ

ಸಾಮರ್ಥ್ಯ: ಮಧ್ಯಮ ಶ್ರೇಣಿ

ಅಭಿವೃದ್ಧಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)

ತಯಾರಿಕೆ: ಭಾರತ್ ಡೈನಮಿಕ್ಸ್ ಲಿ.(ಬಿಡಿಎಲ್) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿ.(ಬಿಇಎಲ್)

ಬಿಇಎಲ್, ಟಾಟಾ, ಎಲ್ ಅಂಡ್ ಟಿ ತಯಾರಿಕೆ: ಸರ್ವೆಲೆನ್ಸ್ ಮತ್ತು ಫಾರ್ ಕಂಟ್ರೋಲ್ ರಾಡಾರ್,

ಟ್ಯಾಕ್ಟಿಕಲ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಹಾಗೂ ಮಿಸೈಲ್(ಕ್ಷಿಪಣಿ) ಲಾಂಚರ್.

ಗುರಿ-ದಾಳಿ: ಶತ್ರುಸೇನೆಯ ಸಮರ ಕ್ಷಿಪಣಿ, ಯುದ್ಧ ವಿಮಾನಗಳನ್ನು, ವಿಮಾನದಿಂದ ಉಡಾ ಯಿಸಿದ ಬಾಂಬರ್, ಕ್ಷಿಪಣಿಗಳನ್ನು 45 ಕಿಮೀ ದೂರದಲ್ಲಿದ್ದಾಗಲೇ ಗುರುತಿಸಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

ಆಕಾಶ್ ಪೆಟ್ಟಿಗೆ ನಡುಗಿದ ಪಾಕ್ 

    ಮೇ ೭ರಿಂದ ೧೦ರವರೆಗೂ ನಡೆದ ಯುದ್ಧದಲ್ಲಿ ಪಾಕಿಸ್ತಾನದ ಕ್ಷಿಪಣಿ, ಡ್ರೋನ್ ದಾಳಿಗಳನ್ನು ನಾಶಪಡಿಸಿದ್ದೇ ‘ಆಕಾಶ್’. ಮೇ ೮ ಮತ್ತು ೯ ಹಾಗೂ ೧೦ರ ರಾತ್ರಿ ಕಗ್ಗತ್ತಲಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದ ವಿವಿಧ ನಗರಗಳತ್ತ ಗುರಿಯಿಟ್ಟು ದಾಳಿ ನಡೆಸಲು ಮುಂದಾಗಿದ್ದ ಚೀನಾ ನಿರ್ಮಿತ ಪಿಎಲ್-೧೫ ಕ್ಷಿಪಣಿಗಳು ಮತ್ತು ಟರ್ಕಿಯಲ್ಲಿ ತಯಾರಾಗಿದ್ದ ಡ್ರೋನ್‌ಗಳನ್ನು ಅವು ಭಾರತದ ವಾಯುಪ್ರದೇಶವನ್ನು ಪ್ರವೇಶಿಸುತ್ತಲೇ ಹೊಡೆದುರುಳಿಸಿದ್ದರಲ್ಲಿ ‘ಆಕಾಶ್’ ಮತ್ತು ‘ಎಸ್-೪೦೦’ ಪಾತ್ರ ದೊಡ್ಡದಿದೆ. ‘ಡಿಆರ್‌ಡಿಒ’ದ ತಂತ್ರಜ್ಞ ಡಾ.ಪ್ರಹ್ಲಾದ್ ರಾಮ ರಾವ್ ಅವರ ನೇತೃತ್ವದ ತಂಡ ಅಭಿವೃದ್ಧಿಪಡಿಸಿದ ‘ಆಕಾಶ್’ ಕಾರ್ಯವೈಖರಿ ಅದೆಷ್ಟು ನಿಖರ, ಪರಿಣಾಮಕಾರಿ ಎಂಬುದು ಮತ್ತೊಮ್ಮೆ ಭಾರತ- ಪಾಕಿಸ್ತಾನ ನಡುವಿನ ಇತ್ತೀಚಿನ ಯುದ್ಧದಲ್ಲಿ ಸಾಬೀತಾಗಿದೆ.

   ಶಾರ್ಟ್ ರೇಂಜ್ ಕ್ಷಿಪಣಿ ನಾಶಕ ಸಾಧನವಾದ ‘ಆಕಾಶ್’ಅನ್ನು ಈ ಮೊದಲೂ ಬಳಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕರು ೨೦೧೯ರಲ್ಲಿ ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಸೇನಾವಾಹನಗಳನ್ನು ಗುರಿಯಾಗಿಸಿ ಭಯೋತ್ಪಾದಕ ದಾಳಿ ನಡೆಸಿ ಸಿಆರ್‌ಪಿಎಫ್‌ ನ ೪೦ ಯೋಧರನ್ನು ಬರ್ಬರವಾಗಿ ಕೊಂದ ಘಟನೆ ಬಳಿಕ ಪಾಕಿಸ್ತಾನದ ಮೇಲೆ ಪ್ರತಿಕಾರ ಕ್ರಮ ಕೈಗೊಳ್ಳುವ ಕಾರ್ಯಾಚರಣೆಯಲ್ಲಿಯೂ ‘ಆಕಾಶ್’ ಬಳಕೆಯಾಗಿತ್ತು. ಪಾಕಿಸ್ತಾನದಲ್ಲಿನ ಉಗ್ರರ ನೆಲೆಯಾದ ಬಾಲಾಕೋಟ್‌ನ ಜಾಬಾ ಟಾಪ್ ಮೇಲೆ ಭಾರತೀಯ ವಾಯುಪಡೆ ವಿಮಾನಗಳು ಬೃಹತ್ ದಾಳಿ ನಡೆಸಿದಾಗ ‘ಆಕಾಶ್’ ಸಾಧನವನ್ನು ಬಳಸಿಕೊಳ್ಳಲಾಗಿತ್ತು.

ಶತ್ರು ವಾಯದಾಳಿ ತಡೆಯುವ ಆಕಾಶ್

ಭಾರತೀಯ ಸೇನೆ ಮತ್ತು ವಾಯುಪಡೆಗೆ ಬಲ

ಅರ್ಮೇನಿಯ ದೇಶದ ಸೇನೆಯಲ್ಲೂ ಬಳಕೆ

ವಿನ್ಯಾಸಗಾರ: ಪ್ರಹ್ಲಾದ್ ರಾಮರಾವ್, ಡಿಆರ್‌ಡಿಒ

ತಯಾರಿಕೆ: ಭಾರತ್ ಡೈನಮಿಕ್ಸ್ ಲಿ.

೩ ವಿಧದ ಸಾಧನ: ಆಕಾಶ್ ೧ಎಸ್, ಆಕಾಶ್ ಪ್ರೈಮ್, ಆಕಾಶ್-ಎನ್‌ಜಿ

ಉದ್ದ: ೫೭೮ ಸೆಂ.ಮೀ.

ಒಟ್ಟು ತೂಕ: ೭೨೦ ಕೆಜಿ

ಡಯಾಮೀಟರ್: ೩೦ ಸೆಂ.ಮೀ.

ಡೆಟೊನೇಷನ್: ರೇಡಿಯೋ ಪ್ರಾಕ್ಸಿಮಿಟಿ ಫ್ಯೂಜ್

Recent Articles

spot_img

Related Stories

Share via
Copy link