ಕೊರಟಗೆರೆ :
ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ನಾಗ ರಂಗ ನಿರಂಜನ್ .ವಿ ಎಂಬ ವಿದ್ಯಾರ್ಥಿ ಚಾಣಕ್ಯ ಪಬ್ಲಿಕ್ ಶಾಲೆಯಿಂದ 625 ಅಂಕಗಳಿಗೆ 613 ಅಂಕ ಗಳಿಸುವ ಮೂಲಕ 98.08% ಗಳಿಸುವ ಮೂಲಕ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿ ಶಾಲೆಗೂ ಹಾಗೂ ಪೋಷಕರಿಗೆ ಕೀರ್ತಿ ಹೆಚ್ಚಿಸಿದ್ದಾನೆ.
ಈ ಹಿಂದೆ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಹೊರ ಬಿದ್ದ ಸಂದರ್ಭದಲ್ಲಿ 596 ಅಂಕ ಲಭಿಸಿದ್ದು ವಿದ್ಯಾರ್ಥಿ ನಿರೀಕ್ಷೆಗಿಂತ ಕಡಿಮೆ ಅಂಕಗಳಿಸಿದ್ದನ್ನು ಕಂಡು ಅಸಮಾಧಾನ ಗೊಂಡು ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕೆ ಒಳಪಡಿಸಿದ್ದಾಗ 17 ಅಂಕಗಳು ಹೆಚ್ಚುವರಿಯಾಗಿ ಲಭಿಸಿರುವುದು 625ಕ್ಕೆ 613 ತೃಪ್ತಿ ತಂದಿದ್ದು ಹಾಗೂ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸುವ ಮೂಲಕ , ಚಾಣಕ್ಯ ಪಬ್ಲಿಕ್ ಶಾಲೆಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಸಾಲಿನಲ್ಲಿ ಇರುವುದಕ್ಕೆ ಪೋಷಕರಾದ ವೇಣುಗೋಪಾಲ್ ಎಚ್ಎಂ ಹಾಗೂ ನೇತ್ರಾ ವೇಣುಗೋಪಾಲ್ ಹಾಗೂ ಚಾಣಕ್ಯ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಯ ಸಾಧನೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ.








