ಸಿ.ಪಿ. ಯೋಗೇಶ್ವರ್ ಬಾವನ ಕೊಲೆ ಪ್ರಕರಣ; ಆರೋಪಿ ಬಂಧನ

ರಾಮನಗರ:

   ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಬಾವ ಮಹದೇವಯ್ಯ ಪಿ. ಅವರ ಕೊಲೆ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಆರೋಪಿಯನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಶುಕ್ರವಾರ ತಮಿಳುನಾಡಿನ ಧರ್ಮಪುರಿಯಲ್ಲಿ ವಶಕ್ಕೆ ಪಡೆದಿದ್ದಾರೆ.

    ಮುರುಗೇಶ್ ವಶಕ್ಕೆ ಪಡೆಯಲಾದ ಆರೋಪಿ. ಮುರುಗೇಶ್ ಬಲಗಾಲಿಗೆ ಹಾವು ಕಚ್ಚಿದ ಕಾರಣ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಈಗ ಆರೋಪಿ ಮುರುಗೇಶ್ಗೆ ಚನ್ನಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

    ಇದೇ ತಿಂಗಳ 2ನೇ ತಾರೀಖು ಶುಕ್ರವಾರ ಮಧ್ಯ ರಾತ್ರಿ ಆರೋಪಿ ಮುರುಗೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆ ಮಾಡಿದ ನಂತರ ಹಂತಕರು ಕಾಡಿನಲ್ಲಿ ಮೃತದೇಹ ಅಡಗಿಸಿಟ್ಟಿದ್ದರು. ಮೂರು ಜನರ ಪೈಕಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹದೇವಯ್ಯ ಪಕ್ಕದ ಜಮೀನಿನಲ್ಲಿ ಆರೋಪಿ ಮುರುಗೇಶ್ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದಿನಿಂದ ಕೆಲಸಕ್ಕೆ ಬರ್ತಾ ಇರಲಿಲ್ಲ. ಹಲವು ಸಿಸಿ ಟಿವಿ ಪರಿಶೀಲನೆ ಬಳಿಕ ವಶಕ್ಕೆ ಪಡೆಯಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap