ಬೆಂಗಳೂರು
ಹವಾಮಾನ ವೈಫರಿತ್ಯದಿಂದ ಈ ಬಾರಿ ರಾಜ್ಯದ ಆಹಾರ ಉತ್ಪಾದನೆ ಪ್ರಮಾಣ ಶೇ. 26ರಷ್ಟು ಕುಸಿತ ಕಂಡಿದ್ದು ಆತಂಕಕ್ಕೆ ಕಾರಣವಾಗಿದೆ
ರಾಜ್ಯದ ಒಟ್ಟು 107 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 135 ಲಕ್ಷ ಟನ್ ಆಹಾರ ಧಾನ್ಯ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ಮುಂಗಾರು ಮತ್ತು ಹಿಂಗಾರುವಿನಲ್ಲಿ ಮಳೆಯ ಕೊರತೆ ಹವಾಮಾನ ವೈಫರಿತ್ಯದಿಂದ ರಾಜ್ಯದ ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇ. 26ರಷ್ಟು ಕುಸಿತಗೊಂಡಿದೆ ಆದರೂ ಮಾರ್ಚ್ ಅಂತ್ಯದ ವೇಳೆ 100 ಲಕ್ಷ ಟನ್ ಆಹಾರ ಧಾನ್ಯ ಇಳುವರಿ ಪಡೆದುಕೊಳ್ಳುವ ಸಾಧ್ಯತೆ ಇದೆ.
ಹವಾಮಾನ ವೈಫರಿತ್ಯದಿಂದ ರಾಜ್ಯದ ಕೃಷಿ ಕ್ಷೇತ್ರದ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರೂ ಸಹ ಬೆಳೆಯ ಇಳುವರಿ ಮೇಲೆ ಕೆಟ್ಟ ಪರಿಣಾಮ ಬೀರಿಲ್ಲ ರಾಜ್ಯದ ಕೃಷಿ ವಲಯ ಮುಂಗಾರು-ಹಿಂಗಾರಿನಲ್ಲಿ ಉತ್ತಮ ಮಳೆಯ ಪ್ರಮಾಣದ ಮೇಲೆ ಅವಲಂಬಿತವಾಗಿದ್ದು, ವಿವಿಧ ವಾತಾವರಣದಿಂದುಟಾಗುವ ಏರು-ಪೇರುಗಳು ರಾಜ್ಯದ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ನೀರಾವರಿ ಅವಲಂಬಿತ ಜಮೀನುಗಳಲ್ಲಿ ಬದಲಿ ಬೆಳೆ ಪದ್ಧತಿ ಉತ್ತಮ ನೀರು ನಿರ್ವಹಣೆಯಿಂದ ಉತ್ತಮ ಬೆಳೆ ಇಳುವರಿ ಸಂಗ್ರಹ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅತ್ಯುತ್ತಮ ಯೋಜನೆಯನ್ನು ರೂಪಿಸಿದೆ .ಸತತವಾಗಿ ಕಳೆದ 2 ವರ್ಷಗಳಿಂದಲೂ ಬೆಳೆಯಲ್ಲಿನ ಇಳುವರಿ ಕಡಿಮೆಯಾಗಿರುವುದು ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸಾಕ್ಷಿಕರಿಸಿದೆ.
ಕಳೆದ2017ರ ವರ್ಷಾಂತ್ಯದಲ್ಲಿ ಹೆಚ್ಚುವರಿ ಮಳೆ ಬಿದ್ದ ನಂತರವೂ ಬೆಳೆಯಲ್ಲಿ ಇಳುವರಿ ಕುಸಿತ ಕಂಡು ಬಂದಿದೆ ಎಂದು ಕೃಷಿ ಇಲಾಖಾಧಿಕಾರಿಗಳು ನಿರ್ದಿಷ್ಟ ಪ್ರಮಾಣದ ಇಳುವರಿ ಮಾಹಿತಿ ಮಾಸಾಂತ್ಯಕ್ಕೆ ದೊರೆಯಲಿದೆ ಎಂದು ವಿವರಿಸಿದ್ದಾರೆ.
ಕಳೆದ ಮುಂಗಾರು ವೇಳೆ ರಾಜ್ಯ ಅತಿ ಹೆಚ್ಚು ಸಮಯ ಮಳೆಯ ಆಭಾವ ಎದುರಿಸಿತ್ತು ಮತ್ತು ಬಿತ್ತನೆ ಕಾರ್ಯವನ್ನೂ ಸಹ ಪೂರ್ಣಗೊಳಿಸಿರಲಿಲ್ಲ. ರಾಜ್ಯದ ಒಟ್ಟು 74.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದರೂ ಅಂತಿಮವಾಗಿ 66.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಪೂರ್ಣಗೊಳಿಲಾಗಿತ್ತು. ಉಳಿದಂತೆ ಹಿಂಗಾರಿನಲ್ಲಿ 31.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 27.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಪೂರ್ಣಗೊಳಿಸಲಾಗಿತ್ತು.
ಮುಂಗಾರು -ಹಿಂಗಾರು ಎರಡೂ ಸಮಯದಲ್ಲೂ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು, ಒಟ್ಟಾರೆ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿತ್ತೆಂದು ಅಂದಾಜಿಸಲಾಗಿದೆ.ಕೃಷಿ ಬೆಳೆ ಆಯೋಗ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರು ಭತ್ತದ ಬೆಳೆಯಲ್ಲಿ 46.3 ಲಕ್ಷ ಟನ್ ಇಳುವರಿ ದೊರೆತಿದ್ದು, ಎಂದಿನ ಪ್ರಮಾಣವನ್ನು ಕಾಯ್ದುಕೊಂಡಿದೆ. ಆದರೆ, ರಾಗಿ, ಜೋಳ, ತೊಗರಿ ಬೆಳೆ ಇಳುವರಿ ಪ್ರಮಾಣ ತೀವ್ರ ಕುಸಿತಗೊಂಡಿದೆ ಎಂದಿದ್ದಾರೆ.
ರಾಗಿ ಜೋಳ ಅವಶ್ಯಕತೆ
28 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದರೂ ಸಹ ಖರೀದಿಗೆ ಜೋಳ ಲಭ್ಯವಾಗಿರಲಿಲ್ಲ ಅನ್ನಭಾಗ್ಯ ಯೋಜನೆಯಡಿ ಆಹಾರ ವಿತರಣೆ ಸರ್ಕಾರಕ್ಕೆ ಪ್ರತಿ ತಿಂಗಳು 50 ಸಾವಿರ ಟನ್ ರಾಗಿ ಅವಶ್ಯಕತೆ ಇದೆ. ಆದರೆ, ರಾಗಿಯ ಲಭ್ಯತೆಯಾಧರಿಸಿ ಅದನ್ನು 8 ಸಾವಿರ ಟನ್‍ಗೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 104 ಮತ್ತು 86 ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. .1750 ಮತ್ತು 2,897 ಬೆಂಬಲ ಬೆಲೆ ನಿಗದಿಪಡಿಸಿ ಸರ್ಕಾರ ಖರೀದಿಗೆ ಮುಂದಾಗಿದೆ. ಭತ್ತದ ದಾಸ್ತಾನು ಉತ್ತಮ ಸ್ಥಿತಿಯಲ್ಲಿದ್ದು, ಮಳೆಯಾಶ್ರಿತ ರಾಗಿ-ಜೋಳ ಪ್ರಮಾಣ ರಾಜ್ಯದಾದ್ಯಂತ ಕುಸಿದಿರುವುದಾಗಿ ತಿಳಿಸಿದ್ದಾರೆ.
ಸರ್ಕಾರ ಆಹಾರ ಭದ್ರತೆ ಕುರಿತಂತೆ ತುರ್ತು ಸೂಚನೆ ನೀಡುವ ಬದಲು ಬೆಳೆಗಳ ದಾಸ್ತಾನು ಸಂಗ್ರಹಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಕಡಿಮೆ ಇಳುವರಿಯಿಂದ ಆಹಾರದುಬ್ಬರ ಸೃಷ್ಟಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಕ್ಕಟ್ಟು ಸೃಷ್ಠಿಗೆ ಕಾರಣ
ದೇಶದಾದ್ಯಂತ ಆಹಾರ ಸಂಗ್ರಹ ಗುರಿ ಉತ್ತಮ ಮಟ್ಟದಲ್ಲಿದ್ದು, ಕೆಲವು ರಾಜ್ಯಗಳಲ್ಲಿ ಮಾತ್ರ ದಾಸ್ತಾನು ಮತ್ತು ಕೃಷಿ ಉತ್ಪನ್ನ ಉತ್ಪಾದನೆ ಕಡಿಮೆಯಾಗಿದೆ. ಹೀಗಿದ್ದರೂ ರಾಜ್ಯಸರ್ಕಾರ ಕೃಷಿ ಬಿಕ್ಕಟ್ಟು ಎದುರಿಸಲು ಕ್ರಮಕೈಗೊಂಡಿಲ್ಲ. ರೈತರಿಂದ ಸರ್ಕಾರ ಆಹಾರ ಧಾನ್ಯ ಖರೀದಿಗೆ ತಕ್ಷಣ ಮುಂದಾಗಬೇಕಿದೆ. ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದು ಬಿಕ್ಕಟ್ಟು ಸೃಷ್ಠಿಗೆ ಕಾರಣವಾಗಿದೆ ಎಂದಿದ್ದಾರೆ ಕೃಷಿತಜ್ಞ ಆರ್.ಎಸ್ ದೇಶಪಾಂಡೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸ್ಥಾಪಿಸಿರುವ ಖರೀದಿ ಕೇಂದ್ರಗಳು ಧಾನ್ಯ ಖರೀದಿಸುವಲ್ಲಿ ವಿಫಲವಾಗಿವೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಈ ಬೇಸಿಗೆಯ ನಂತರ ಬಿಕ್ಕಟ್ಟು ಸೃಷ್ಠಿಯಾಗಲಿದೆ. ಸರ್ಕಾರ ಆಹಾರ ಧಾನ್ಯ ಖರೀದಿ ಕೇಂದ್ರಗಳು ಚಟುವಟಿಕೆಗಳಿಂದ ಕೂಡಿಲ್ಲದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.