ಕೋವಿಡ್ ಪಾಸಿಟಿವ್ ವ್ಯಕ್ತಿ ಸಾವು: ತಹಶಿಲ್ದಾರ್ ಪ್ರತಿಭಾ ಮೃತರ ಮನೆಗೆ ಭೇಟಿ

ಮಂಗಳೂರು:

    ಕಾಪು ತಾಲ್ಲೂಕಿನ ಬೆಳ್ಳೆ ಗ್ರಾಮದ 65 ವರ್ಷದ ಪೀಟರ್ ಮಥಾಯಸ್ ಎಂಬುವವರು ಮಣಿಪಾಲದ KMC ಆಸ್ಪತ್ರೆಯಲ್ಲಿ ಮೃತಪಕಟ್ಟಿದ್ದು ಕೋವಿಡ್ ಪಾಸಿಟಿವ್ ದೃಢಪಟ್ಟಿರುತ್ತದೆ.ತಹಶಿಲ್ದಾರ್ ಪ್ರತಿಭಾ ಆರ್ ಇಂದು ಅವರ ಮನೆಗೆ ಭೇಟಿ ನೀಡಿ ಮನೆಯವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿರುತ್ತಾರೆ. ಮನೆಯವರಾರಿಗೂ ಕೋವಿಡ್ ಲಕ್ಷಣಗಳು ಇರುವುದಿಲ್ಲ. ಹೆಣ ಇನ್ನೂ ಆಸ್ಪತ್ತೆಯಲ್ಲಿಯೇ ಇದೆ. 4-6-25 ರ ಬುಧವಾರ ಅಂತ್ಯ ಸಂಸ್ಕಾರ ಏರ್ಪಡಿಸಲಾಗಿದ್ದು ಕೋವಿಡ್ SOP ಅನುಸರಿಸಿ ಅಂತ್ಯ ಸಂಸ್ಕಾರ ಕೈಗೊಳ್ಳಲು ತಹಶಿಲ್ದಾರ್ ತಿಳಿಸಿದ್ದಾರೆ.

   ಪೀಟರ್ ಮಥಾಯಸ್ ರವರು ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 29-5-25 ರಂದು ಹೈಪರ್ ಟೆನ್ಷನ್ ಚಿಕಿತ್ಸೆಗಾಗಿ KMC ಗೆ ದಾಖಲಾಗಿದ್ದರು. ಆಗ ಕೋವಿಡ್ ಟೆಸ್ಟ್ ಮಾಡಿದಾಗ ಕೋರೋನ ದೃಢಪಟ್ಟಿರುತ್ತದೆ. 2-6-2025 ರಂದು ಅಪರಾಹ್ನ ಮೃತಪಟ್ಟಿರುತ್ತಾರೆ.

   ತಹಶಿಲ್ದಾರ್ ಮತ್ತು ವೈದ್ಯರ ತಂಡ, ಆಶಾ ಕಾರ್ಯಕರ್ತೆ ಎಲ್ಲರೂ ಇಂದು ಆ ಮನೆಗೆ ಭೇಟಿ ನೀಡಿ ಊರಿನ ಜನರಿಗೆ ಕೊರೊನ ಮುನ್ನೆಚ್ಚರಿಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ. ಕೊರೊನ SOP ಪಾಲಿಸುವಂತೆ ಸೂಚನೆ ನೀಡಿರುತ್ತಾರೆ. ತಾಲ್ಲೂಕು ವೈದ್ಯಾಧಿಕಾರಿ ವಾಸುದೇವ್, ಶಿರ್ವ ಮೆಡಿಕಲ್ ಆಫೀಸರ್ ಸುಬ್ರಹ್ಮಣ್ಯ, ವೈದ್ಯೆ ವೈಷ್ಣವಿ, ಆಶಾ ಕಾರ್ಯಕರ್ತೆ ಯಶೋದ, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಪ್ರದೀಪ್ ಹಾಜರಿದ್ದರು.

Recent Articles

spot_img

Related Stories

Share via
Copy link