ನಾಯಕನಹಟ್ಟಿ
ಮಾನವೀಯತೆ ಮೆರೆದ ಹಿರೇಹಳ್ಳಿ ಕ್ಷೇತ್ರ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಬ್ಬೇನಹಳ್ಳಿ ಎ. ಪಿ.ರೇವಣ್ಣ ನರೇಗಾ ಕೂಲಿ ಕಾರ್ಮಿಕರಿಗೆ ಪಪ್ಪಾಯಿ ಹಣ್ಣು ವಿತರಣೆ ಮಾಡಿದ ಹಿರೇಹಳ್ಳಿ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎ. ಪಿ.ರೇವಣ್ಣ ಉದ್ಯೋಗಕ್ಕೆ ಖಾತ್ರಿ ಕೆಲಸ ಮಾಡುತ್ತಿರುವ ಜನಗಳು ಅಭಿನಂದನೆಗಳನ್ನು ಸಲ್ಲಿಸಿದರು
ಮಂಗಳವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಪಪ್ಪಾಯಹಣ್ಣು ವಿತರಣೆ ಮಾಡಿ ಮಾತನಾಡಿದರು.ನಂತರ ಮಾತನಾಡಿದ ಅವರು ಪೋಷಕರು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ದೇಶ ಭವಿಷ್ಯ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಉದ್ಯೋಗ ಖಾತ್ರಿ ಕೆಲಸ ಮಾಡುವ ಜನರಿಗೆ ಕಿವಿ ಮಾತು ಹೇಳಿದರು.
ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಶಾಲೆ ಬಿಡಿಸಬೇಡಿ ಅವರು ಒಳ್ಳೆ ಶಿಕ್ಷಣ ಕೊಡಿ ಎಂದು ಮನವರಿಕೆ ಮಾಡಿದರು ಹಾಗೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಸರಿಯಾದ ಸಮಯಕ್ಕೆ ಆಹಾರ ಸೇವಿಸಬೇಕು ಉತ್ತಮ ಆರೋಗ್ಯವು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಹೊಂದಬಹುದಾದ ಅತ್ಯಮೂಲ್ಯ ಆಸ್ತಿಯಾಗಿದೆ ಎಂದರು.
ಆರೋಗ್ಯವೇ ಭಾಗ್ಯ ಎಂಬ ವಚನ ಇದೆ ಆರೋಗ್ಯವಾಗಿದ್ದರೆ ಏನು ಬೇಕಾದರೂ ಪಡೆಯಬಹುದು ನೀವೆಲ್ಲರೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು ಜಗತ್ತಿನಲ್ಲಿ ಆರೋಗ್ಯ ಚೆನ್ನಾಗಿದ್ದರೆ ಹಣ ಅಂತಸ್ತು ಅಧಿಕಾರ ಸೇರಿದಂತೆ ಎಲ್ಲವನ್ನು ಪಡೆಯಬಹುದು ಎಂದು ಹೇಳಿದರು ನಮ್ಮ ಗ್ರಾಮದಲ್ಲಿ ಗೋಕಟ್ಟೆ ಮತ್ತು ಜಿನಗಿ ಹಳ್ಳದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉರಿ ಬಿಸಿಲಲ್ಲಿ ಲೆಕ್ಕಿಸದೆ ಕೆಲಸ ಮಾಡುವ ಕೂಲಿ ಕಾರ್ಮಿಕರು ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಪಪ್ಪಾಯಿ ಹಣ್ಣು ವಿತರಣೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಪಡ್ಲಬೋರಣ್ಣ, ಟಿ. ಶೇಖರ್ ಗೌಡ, ಗ್ರಾಮಸ್ಥರಾದ ಬಿ. ಎಸ್. ನಿರಂಜನ್ ಗೌಡ, ಯತೀಶ್, ಗೋವಿಂದಪ್ಪ,ಟಿ. ನಾಗರಾಜ್, ಏಕಾಂತಪ್ಪ, ಮಂಜುನಾಥ್, ಬಿ. ಕೃಷ್ಣಪ್ಪ, ನರೇಗಾ ಕೂಲಿ ಕಾರ್ಮಿಕರು ಇದ್ದರು.
