ಕ್ಯಾನ್ಸರ್ ಔಷಧಿಗಳ ಬೆಲೆ ಶೇ.60 ಕಡಿತ!!

ದೆಹಲಿ :
      ಕ್ಯಾನ್ಸರ್‌ ಚಿಕಿತ್ಸೆಗೆ ಸಂಬಂಧಿಸಿದ ಕೆಲವು ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧಗಳ ಬೆಲೆ ನಿಯಂತ್ರಣ ಆಯೋಗ (ಎನ್‌ಪಿಪಿಎ) ಶೇ. 60ರಷ್ಟು ಇಳಿಕೆ ಮಾಡಿದೆ.

      ಏರ್ಲೋಟಿನಾಬ್, ಪೆಮಿಟ್ರೆಕ್ಸಿಡ್, ಎಪಿರುಬಿಸಿಯನ್ ಒಳಗೊಂಡಂತೆ 9 ಔಷಧಗಳ ದರವನ್ನು ಇಳಿಸಲಾಗಿದೆ. ಕ್ಯಾನ್ಸರ್ ನಿರೋಧಕ ಔಷಧಗಳನ್ನು ಶೇ. 30- 60 ರಷ್ಟು ಕಡಿತಗೊಳಿಸಲಾಗಿದೆ ಎಂದು ರಾಷ್ಟ್ರೀಯ ಔಷಧಗಳ ಬೆಲೆ ನಿಯಂತ್ರಣ ಆಯೋಗ ಹೇಳಿದೆ. ಈಗ ಇಳಿಕೆ ಮಾಡಲಾಗಿರುವ ಔಷಧಗಳು ಪ್ರೋಸ್ಟ್ರೇಟ್ ಮತ್ತು ಬ್ರೆಸ್ಟ್ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಔಷಧಗಳಾಗಿವೆ.

      ಭಾರತದಲ್ಲಿ ಪ್ರತಿ ವರ್ಷ 11.50 ಲಕ್ಷ ಜನರು ಹೊಸದಾಗಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಇಂಡಿಯಾ ಅಗೆನೆಸ್ಟ್ ಕ್ಯಾನ್ಸರ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

     ಮಾರ್ಚ್ ನಿಂದ ಎರಡನೇ ಬಾರಿಗೆ ಕೆಲವು ಕ್ಯಾನ್ಸರ್ ಔಷಧಿಗಳ ಬೆಲೆ ಕಡಿತಗೊಂಡಿದೆ. ಮಾರ್ಚ್ ತಿಂಗಳಲ್ಲಿ ಸುಮಾರು 380 ಔಷಧಗಳ ಬೆಲೆಯನ್ನು ತಗ್ಗಿಸಲಾಗಿತ್ತು. ಈ ಮೂಲಕ ಇದುವರೆಗೂ ಸುಮಾರು 1000 ಕ್ಯಾನ್ಸರ್‌ ಚಿಕಿತ್ಸೆ ಔಷಧಗಳ ದರವನ್ನು ಸರಕಾರ ಇಳಿಸಿದೆ ಎಂದು ತಿಳಿದುಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap