8 ವರ್ಷಗಳ ನಂತರ ಪ್ಯಾರಿಸ್ ಡೈಮಂಡ್ ಲೀಗ್‌ಗೆ ಮರಳಿದ ನೀರಜ್ ಚೋಪ್ರಾ

ನವದೆಹಲಿ: 

    ಎರಡು ಬಾರಿ ಒಲಿಂಪಿಕ್ಸ್‌ ಪದಕ ಗೆದ್ದಿರುವ ಭಾರತ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ  ಅವರು ಎಂಟು ವರ್ಷಗಳ ನಂತರ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜೂನ್ 20 ರಂದು ಪ್ಯಾರಿಸ್‌ನಲ್ಲಿ ನಡೆಯುವ ಈ ಕೂಟದಲ್ಲಿ ವಿಶ್ವದ 7 ಖ್ಯಾತನಾಮ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

   ನೀರಜ್‌ ಕೊನೆಯ ಬಾರಿಗೆ 2017 ರಲ್ಲಿ ಸ್ಟೇಡ್ ಚಾರ್ಲೆಟಿಯಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ, ಅವರು 84.67 ಮೀಟರ್ ಎಸೆಯುವ ಮೂಲಕ ಐದನೇ ಸ್ಥಾನ ಪಡೆದ್ದರು. ಮೇ ತಿಂಗಳಲ್ಲಿ ಸತತ ಎರಡು ಸ್ಪರ್ಧೆಗಳಲ್ಲಿ ಎರಡನೇ ಸ್ಥಾನ ಪಡೆದ ನಂತರ, 2025 ರ ಋತುವಿನ ತನ್ನ ಮೊದಲ ಪ್ರಮುಖ ಗೆಲುವನ್ನು ನೀರಜ್‌ ಗುರಿಯಾಗಿಸಿಕೊಂಡಿದ್ದಾರೆ.

   ಏಳು ಎಸೆತಗಾರರಲ್ಲಿ, ಜೂಲಿಯನ್ ವೆಬರ್ ಮತ್ತು ಆಂಡರ್ಸನ್ ಪೀಟರ್ಸ್ ಮಾತ್ರ ಚೋಪ್ರಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಮೀರಿಸಿದ್ದಾರೆ. ವೆಬರ್ 91.44 ಮೀಟರ್ ಎಸೆದ ಜೀವಮಾನದ ಶ್ರೇಷ್ಠ ಸಾಧನೆಯನ್ನು ಹೊಂದಿದ್ದರೆ, ಪೀಟರ್ಸ್ 93.07 ಮೀಟರ್ ಎಸೆದಿದ್ದಾರೆ. ಕಳೆದ ತಿಂಗಳು ದೋಹಾದಲ್ಲಿ ನಡೆದ ಪ್ರದರ್ಶನದೊಂದಿಗೆ ಚೋಪ್ರಾ ಇತ್ತೀಚೆಗೆ ವಿಶೇಷ 90 ಮೀಟರ್ ಕ್ಲಬ್‌ಗೆ ಸೇರಿದರು.

   ಚೋಪ್ರಾ ತಮ್ಮ 2025 ರ ಅಭಿಯಾನವನ್ನು ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಸಣ್ಣ ಆಹ್ವಾನಿತ ಸ್ಪರ್ಧೆಯಲ್ಲಿ ಗೆಲುವಿನೊಂದಿಗೆ ಪ್ರಾರಂಭಿಸಿದ್ದರು. 84.52 ಮೀಟರ್ ಎಸೆತವನ್ನು ದಾಖಲಿಸಿದ್ದರು. ನಂತರ ಅವರು ಮೇ 16 ರಂದು ದೋಹಾದಲ್ಲಿ(90.23 ಮೀಟರ್ ಎಸೆತ) ವೃತ್ತಿಜೀವನದ ಮೈಲಿಗಲ್ಲನ್ನು ತಲುಪಿದ್ದರು.

Recent Articles

spot_img

Related Stories

Share via
Copy link