ಕೆ ಎನ್‌ ರಾಜಣ್ಣ ಅವರ ಗೌರವ ಗ್ರಂಥ ಸಮರ್ಪಣೆ ಕಾರ್ಯಕ್ರಮದ ಬಗ್ಗೆ ಜನರ ಅಭಿಪ್ರಾಯ ….!

1.
    ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಅವರು ದೀನ ದಲಿತರ, ತಳ ಸಮುದಾಯದವರು ಏಳಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ೭೫ನೇ ಜನ್ಮದಿನದ ಪ್ರಯುಕ್ತ ಅಮೃತ ಮಹೋತ್ಸವ ಆಯೋಜನೆ ಮಾಡಿರುವುದು ಸಂತಸದ ವಿಷಯ. ಅವರನ್ನು ಕಣ್ಣಾರೆ ಕಾಣಲೆಂದೆ ನಾವು ಬಿಜಾಪುರದಿಂದ ತುಮಕೂರಿಗೆ ಬಂದಿದ್ದೇವೆ.-ಭೀಮರಾಯ ಗೌಡ ಬಿರಾದಾರ್, ಬಿಜಾಪುರ

2.
ಸಹಕಾರ ಧುರೀಣರಾದ ಕೆ.ಎನ್. ರಾಜಣ್ಣ ಅವರು ನಮ್ಮಂತಹ ಚಿಕ್ಕ ಸಹಕಾರ ಸಂಘಗಳಿಗೆ ಸಾಲ ನೀಡುವ ಮೂಲಕ ಸಂಘಗಳ ಏಳಿಗೆಗೆ ಶ್ರಮಿಸಿದ್ದಾರೆ. ಕೃಷಿ, ಹೈನುಗಾರಿಕೆ, ಶಿಕ್ಷಣಕ್ಕೆ ಒತ್ತು ನೀಡಿದ ಅವರಿಗೆ ಇಂದು ಅಮೃತ ಮಹೋತ್ಸವ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ಗೌರವ ಸೂಚಿಸಿರುವುದು ಸಂತೋಷದ ಸಂಗತಿ.- ಬಸವರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸುರಪುರ, ಯಾದಗಿರಿ ಜಿಲ್ಲೆ.

3.
ಬಡವರು, ಹಿಂದುಳಿದವರು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ಮಾಡಿದವರು ಕೆ.ಎನ್. ರಾಜಣ್ಣ ಅವರು. ಅವರ ೭೫ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ ತುಮಕೂರಿನಲ್ಲಿ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ನಾವು ಮಿಡಿಗೇಶಿಯಿಂದ ೨ ಬಸ್‌ಗಳಲ್ಲಿ ೭೦ಕ್ಕೂ ಹೆಚ್ಚು ಜನ ಮಹಿಳೆಯರೇ ಬಂದಿದ್ದೇವೆ.-ಜಯಮ್ಮ, ಗ್ರಾ.ಪಂ. ಮಾಜಿ ಅಧ್ಯಕ್ಷರು, ಮಿಡಿಗೇಶಿ

4.
ಕೆ.ಎನ್. ರಾಜಣ್ಣ ಅವರು ಕೃಷಿ ಸಹಕಾರ ಸಂಘಗಳಿಗೆ ಬಡ್ಡಿ ಇಲ್ಲದೇ ಸಾಲ ನೀಡಿದ್ದಾರೆ. ರೈತರ ಏಳಿಗೆಗೆ ಶ್ರಮಿಸಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳಿಗೂ ಅನುಕೂಲ ಮಾಡಿದ್ದಾರೆ. ಸಹಕಾರ ಸಂಘಗಳಲ್ಲಿ ಸಾಲ ತಗೊಂಡ ರೈತ ಏನಾದರೂ ಮೃತಪಟ್ಟರೆ ಅವರ ಸಾಲವನ್ನು ಸರ್ಕಾರ ಮನ್ನ ಮಾಡುವಂತಹ ಕಾಯ್ದೆ ತಂದಿದ್ದಾರೆ. ಅಂತ ವ್ಯಕ್ತಿಯ ೭೫ ವರ್ಷದ ಅಮೃತ ಮಹೋತ್ಸವ ಆಚರಣೆ ಮಾಡಿದ್ದು ಖುಷಿ ತಂದಿದೆ.-ಸಂಗತಿಮ್ಮಣ್ಣ, ಸಿಂಗಾಪುರ ಕೃಷಿ ಸಹಕಾರ ಸಂಘದ ನಿರ್ದೇಶಕರು, ಹಿರಿಯೂರು

5.
ಮಧುಗಿರಿ ಕ್ಷೇತ್ರದ ಜನತೆಗೆ ನಂಬಿಕೆ ಉಳಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಯಾವ ಕೆಲಸವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿದು ಕೆಲಸ ಮಾಡುವಂತಹ ರಾಜಣ್ಣ ಅವರು ತುಮಕೂರು ಜಿಲ್ಲೆಗೆ ನಂ.೧ ನಾಯಕರಾಗಿದ್ದಾರೆ. ಇಂದು ಅವರು ಜನ್ಮದಿನದ ಅಂಗವಾಗಿ ಅಮೃತ ಮಹೋತ್ಸವ ಆಯೋಜಿಸಿರುವುದು ಅವರ ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕ ಗೌರವ.-ರಾಮು ಜೆ.ಆರ್., ಕೆಎನ್‌ಆರ್ ಅಭಿಮಾನಿ, ಮಧುಗಿರಿ

6.
ಬಡವರು, ದೀನ ದಲಿತರ ಏಳಿಗೆಗೆ ಶ್ರಮಿಸಿ ಎಲ್ಲರನ್ನೂ ಸಮಾನವಾಗಿ ಕಾಣುವವರು ಕೆ.ಎನ್. ರಾಜಣ್ಣ. ಹಿಂದುಳಿದ ವರ್ಗದ ಜನರಿಗೆ ೮೦೦ ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ಜೂ.೨೮ ರಂದು ಮಧುಗಿರಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕರೆತರುತ್ತಿದ್ದಾರೆ. ವಿಶೇಷ ವರ್ಗದ ಯೋಜನೆಯಲ್ಲಿ ಈಗಾಗಲೇ ೩೦೦೦ ಮನೆ ಹಂಚಿಕೆ ಆಗಿದೆ. ಮಧುಗಿರಿ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡುತ್ತಿದ್ದು, ಇಂತಹ ಅದೇಷ್ಟೋ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ.-ಶ್ರೀನಿವಾಸ್ ಮೂರ್ತಿ, ಹೊಸಕೆರೆ ಗ್ರಾಂ ಪಂ ಸದಸ್ಯರು, ಮಧುಗಿರಿ ತಾ

7.

ಕೆ.ಎನ್. ರಾಜಣ್ಣ ಅವರು ಸಹಕಾರ ಸಚಿವರಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕಾರಣರಾಗಿದ್ದಾರೆ. ಅಂತಹ ವ್ಯಕ್ತಿಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ನಾನು ಸೇರಿ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಬಂದಿದ್ದೇವೆ. ಅವರು ನಿಜವಾಗಲೂ ಸಹಕಾರ ಸಾರ್ವಭೌಮರೇ.-ಮಂಜುಳಾ ಕುಮಾರಿ, ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷರು, ನಾಗೇಗೌಡನಪಾಳ್ಯ ತುರುವೇಕೆರೆ.

8.ಸಹಕಾರ ಸಚಿವರಾಗಿ ಕೆ.ಎನ್. ರಾಜಣ್ಣ ಅವರು ನಮ್ಮಂತಹ ಸಹಕಾರ ಬ್ಯಾಂಕ್‌ಗಳಿಗೆ ಅದೆಷ್ಟೋ ಸಹಾಯ ಮಾಡಿದ್ದಾರೆ. ಅವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನೋಡಲೆಂದೇ ಹಾವೇರಿಯಿಂದ ನಾನು ನಮ್ಮ ಬ್ಯಾಂಕ್ ಸಿಬ್ಬಂದಿಯನ್ನು ಕರೆದುಕೊಂಡು ಬಂದಿದ್ದೇನೆ. ಅವರನ್ನು ಪ್ರತ್ಯಕ್ಷವಾಗಿ ನೋಡಿ ಬಾಳ್ ಖುಷಿ ಆತ್ರಿ ಪಾ.-ವೀರೇಶ್ ರಿತ್ತಿ ಗಾಣಗೆರೆ, ಫೀಲ್ಡ್ ಆಫೀಸರ್, ಕೆ.ಸಿ.ಸಿ ಬ್ಯಾಂಕ್ ಹಾವೇರಿ

Recent Articles

spot_img

Related Stories

Share via
Copy link