ಬಾಗಲಕೋಟೆ:
ಚಾಲುಕ್ಯರ ರಾಜಧಾನಿಯಾಗುದ್ದ ಬಾದಾಮಿ ಅಭಿವೃದ್ಧಿಗೆ ೧ ಸಾವಿರ ಕೋಟಿ ರೂ.ಗಳ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿಕೊಡಿ, ನಮ್ಮ ಹತ್ತಿರ ದುಡ್ಡಿಲ್ಲ, ಸಿದ್ದರಾಮಣ್ಣನ ಹತ್ತಿರ ದುಡ್ಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಬಾದಾಮಿಯಲ್ಲಿ ಜರುಗಿದ ಅಗ್ನಿ ಶಾಮಕದಳ ಠಾಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಅವರು ಬಾದಾಮಿ ಅಭಿವೃದ್ಧಿಗೆ ದೊಡ್ಡದಾದ ಯೋಜನೆ ರೂಪಿಸುವಂತೆ ವೇದಿಕೆಯಲ್ಲಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಸಲಹೆ ಮಾಡಿದ್ದಾರೆ. ಅಷ್ಟು ದೊಡ್ಡ ಮೊತ್ತ ಎಂದ ಮೇಲೆ ಗಾಬರಿ ಆಗಬೇಡ. ಕೇಂದ್ರಕ್ಕೆ ಕಳುಹಿಸಿಕೊಡು. ನಮ್ಮ ಹತ್ತಿರ ದುಡ್ಡಿಲ್ಲ, ಸಿದ್ದರಾಮಣ್ಣನ ಹತ್ತಿರ ದುಡ್ಡಿಲ್ಲ ಎಂದು ಎರಡೆರಡು ಬಾರಿ ಉಚ್ಚರಿಸಿ ಎಲ್ಲ ನಿಮಗೆ ಅಕ್ಕಿ, ಬೇಳೆ, ಎಣ್ಣೆ ಕೊಟ್ಟು ದುಡ್ಡು ಖಾಲಿಯಾಗಿದೆ . ಎಣ್ಣೆ ಸಚಿವರೂ ಇಲ್ಲಿಯೇ ಇದ್ದಾರೆ ಎಂದು ಅಬಕಾರಿ ಸಚಿವ ತಿಮ್ಮಾಪೂರ ಅವರ ಕಡೆಗೆ ನೋಡಿ ನಗೆ ಚಟಾಕಿ ಸಿಡಿಸಿದ್ದಾರೆ.








