ಆರೆಸ್ಸೆಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮೇಲೆ ಕಾಂಗ್ರೆಸ್‌ ದೂರು

ಬೆಂಗಳೂರು:

   ರಾಷ್ಟ್ರೀಯ ಸ್ವಯಂಸೇವಕ ಸಂಘದ  ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ  ಅವರು ಅಸಾಂವಿಧಾನಿಕ, ಪ್ರಚೋದನಕಾರಿ ಮತ್ತು ವಿಭಜನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ. ದೂರು ಸ್ವೀಕರಿಸಿರುವುದನ್ನು ಪೊಲೀಸರು ಒಪ್ಪಿಕೊಂಡಿದ್ದರೂ, ಯಾವುದೇ ಎಫ್ಐಆರ್ ದಾಖಲಾಗಿಲ್ಲ.

   ಭಾರತೀಯ ಸಂವಿಧಾನದ ಪೀಠಿಕೆಯಿಂದ ʼಸಮಾಜವಾದಿʼ ಮತ್ತು ʼಜಾತ್ಯತೀತʼ ಪದಗಳನ್ನು ತೆಗೆದುಹಾಕುವಂತೆ ಕೋರಿ ಹೊಸಬಾಳೆ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಗಳು ʼಸಾಂವಿಧಾನಿಕ ನೀತಿಗಳ ಮೇಲಿನ ದಾಳಿʼ ಮತ್ತು ʼರಾಷ್ಟ್ರದ ಸ್ಥಾಪಕ ಮೌಲ್ಯಗಳಿಗೆ ವಿರುದ್ಧವಾದ ಪ್ರಚೋದನೆʼ ಎಂದು ಭಾರತೀಯ ಯುವ ಕಾಂಗ್ರೆಸ್‌ನ ಕರ್ನಾಟಕ ಕಾನೂನು ಘಟಕದ ಸದಸ್ಯರು ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.

   ಭಾರತದ ಸಂವಿಧಾನದ ಪಾವಿತ್ರ್ಯವನ್ನು ರಕ್ಷಿಸುವ ಮತ್ತು ಭಾರತದ ಕರ್ತವ್ಯನಿಷ್ಠ ನಾಗರಿಕನಾಗಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ಹಿತದೃಷ್ಟಿಯಿಂದ ನಾನು ಈ ದೂರನ್ನು ದಾಖಲಿಸುತ್ತಿದ್ದೇನೆʼ ಎಂದು ದೂರುದಾರ, ಯುವ ಕಾಂಗ್ರೆಸ್ ಪ್ರತಿನಿಧಿ ಶ್ರೀಧರ್ ಎಂ.ಎಂ ಹೇಳಿದ್ದಾರೆ. ʼಈ ಹೇಳಿಕೆಗಳು ಕೇವಲ ಕಲ್ಪನೆಯ ವ್ಯಾಖ್ಯಾನವಲ್ಲ. ಅವು ಉದ್ದೇಶಪೂರ್ವಕ, ಪ್ರಚೋದನಕಾರಿ ಮತ್ತು ಅಪಾಯಕಾರಿ. ಹೊಸಬಾಳೆ ಅವರ ಭಾಷಣವು ಭಾರತೀಯ ನ್ಯಾಯ ಸಂಹಿತೆಯ ಹಲವಾರು ನಿಬಂಧನೆಗಳನ್ನು ಉಲ್ಲಂಘಿಸಿದೆʼ ಎಂದು ದೂರಿನಲ್ಲಿ ತಿಳಿಸಲಾಗಿದೆ.

Recent Articles

spot_img

Related Stories

Share via
Copy link