ತಿಪಟೂರು :
ನಗರಸಭೆಯ ಗದ್ದುಗೆ ಹಿಡಿಯಲು ಮೇ 29 ಕ್ಕೆ ಚುನಾವಣೆ ನಿಗದಿಯಾಗಿದ್ದು ಸೋಮವಾರ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾಗಿದ್ದು ಈಗಾಗಾಲೆ ಸ್ಪರ್ಧಿಗಳು ತಮ್ಮ ವಾರ್ಡ್‍ಗಲ್ಲಿ ಏನೂ ಬೇಕೋ ಎಲ್ಲವನ್ನು ಹಂಚುತ್ತ ಮತಗಳನ್ನು ಪಕ್ಕಾಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.
ಎಲ್ಲಾರ ಪ್ರನಾಳಿಕೆಯೂ ಒಂದೇ :
ಮತದಾರರೇ ಚುನಾವಣೆಯಲ್ಲಿ ಸ್ಪರ್ಧಿಸಿರುವವರೆಲ್ಲೂ ಒಂದೇ ಪ್ರನಾಳಿಕೆಯನ್ನು ಹಿಡಿದು ಮತಯಾಚನೆಮಾಡುತ್ತಿದ್ದು ಪ್ರಮುಖವಾಗಿ ಮೂಲಭೂತ ಸೌಕರ್ಯಗಳ ಕೊತರೆ, ರಸ್ತೆ, ಚರಂಡಿ ಹೆಚ್ಚಿನದಾಗಿ ನೀರನ್ನು ಕೊಡಿಸುತ್ತೇವೆಂದು ಹೇಳುತ್ತಿದ್ದು ಇಷ್ಟು ದಿನ ಅವರಿಗೆ ಅರಿವಿರಲಿಲ್ಲವೇ? ಅಥವಾ ಹಿಂದಿನ ಸದಸ್ಯರುಗಳು ಏನೂ ಮಾಡಿಯೇ ಇಲ್ಲವೇ ಮತ್ತು ನಮ್ಮ ವಾರ್ಡ್‍ನಲ್ಲಿ ಇಷೆಲ್ಲಾ ಸಮಸ್ಯೆಗಳಿವೆಯೇ ಎಂಬುದು ಮಾನ್ಯ ಮತದಾರ ಪ್ರಭುಗಳಿಗೆ ಗೊತ್ತಿಲ್ಲದಂತಾಗಿದೆ.
ಸ್ಲಂ ಎಂದರೆ ಗಾಂಧಿನಗರ ಉದಾಹರಣೆಎನ್ನುವ ಕಾಲವೊಂದಿತ್ತು ಆದರೆ ಬಹುಶಿಕ್ಷಿತರೇ ವಾಸವಾಗಿರುವ ವಾರ್ಡ್ ನಂ10, ವಾರ್ಡ್ ನಂ 9, ವಿದ್ಯಾನಗರ ವಾರ್ಡ್‍ಗಳಲ್ಲಿ ಸಮರ್ಪಪಕವಾದ ರಸ್ತೆ, ಚರಂಡಿಗಳನ್ನು ಕಾಣುವಹಾಗೆಯೇ ಇಲ್ಲ ಆದರೂ ಎಲ್ಲರೂ ಶಿಕ್ಷಿತರು, ಶಿಕ್ಷಕರು, ಅಧಿಕಾರಿಗಳೇ ವಾಸವಾಗಿರುವ ಈ ಪ್ರದೇಶಗಳಲ್ಲೇ ಸಮರ್ಪಕವಾದ ಯಾವುದೇ ವ್ಯವಸ್ಥೆ ಇಲ್ಲವೆನ್ನುವುದಾರೆ ಇನ್ನು ಗಾಂಧಿನಗರದ ಪಾಡೇನು ಸ್ವಲ್ಪ ಯೋಚಿಸಿ ಮತದಾನಮಾಡಿ ಸೂಕ್ತವ್ಯಕ್ತಿಯನ್ನು ಮತ್ತು ನಮ್ಮ ವಾರ್ಡ್‍ನ ಕೆಲಸಗಳನ್ನು ಮಾಡುವಂತಹ ವ್ಯಕ್ತಿಗೆ ಮತನೀಡಿ ಎಂದು ಸೌಹಾರ್ಧ ಸಮಿತಿಯ ಕಾರ್ಯದರ್ಶಿ ಅಲ್ಲಾಬಕಾಶ್ ತಿಳಿಸುತ್ತಾರೆ.
ಚುನಾವಣೆ ಪ್ರಚಾರಕ್ಕೆ ಅನುಕೂಲವಾಗುತ್ತಿರುವ ಬೇಸಿಗೆ ರಜೆ : ಚುನಾವಣಾ ಪ್ರಚಾರಕ್ಕೆ ಈ ಬಾರಿಯ ಬೇಸಿಗೆ ರಜೆ ಯಲ್ಲಿ ಬಂದಿರುವುದರಿಂದ ಯುವಕರು ಮತ್ತು ಮಕ್ಕಳನ್ನು ಚುನಾವಣ ಪ್ರಚಾರಕ್ಕೆ ಅಭ್ಯರ್ಥಿಗಳು ಬಳಸಿಕೊಳ್ಳುತ್ತಿದ್ದು ಮಕ್ಕಳು ಕರಪತ್ರಗಳನ್ನು ಹಂಚಿದರೆ ಮತ್ತು ಬೆಳಗ್ಗೆಯಿಂದ ಸಂಜೆಯವರೆಗೂ ಅಭ್ಯರ್ಥಿಗಳ ಜೊತೆ ತಿರುಗಿದರೆ ಸಿಗುವ ಪುಡಿಗಾಸಿಗೋಸ್ಕರ ಪ್ರಚಾರಕಾರ್ಯದಲ್ಲಿ ಭಾಗವಹಿಸುತ್ತಿದ್ದು ಇದು ಅಭ್ಯರ್ಥಿಗಳಿಗೆ ವರದಾನವಾಗಿದೆ.
ಅಂತಿಮವಾಗಿ ನಗರಸಭೆ ಚುನಾವಣೆಗೆ 134 ಅಭ್ಯರ್ಥಿಗಳು ಕಣದಲ್ಲಿದ್ದು ಬುದವಾರದ ಚುನಾವನೆಯಲ್ಲಿ ಗದ್ದುಗೆಹಿಡಿಯಲು ಹೊರಾಡಲಿದ್ದಾರೆ :
31 ವಾರ್ಡ್‍ಗಳಿಂದ ಒಟ್ಟು 134 ಅಭ್ಯರ್ಥಿಗಳು ಕಣದಲ್ಲಿದ್ದು ಅವರುಗಳ ಪಟ್ಟಿ ಈರೀತಿ ಇದೆ.
ವಾರ್ಡ್ 1: ಟಿ.ಆರ್. ರೇಣುಕಾ (ಕಾಂಗ್ರೆಸ್), ವಿ. ಸಂಧ್ಯಾ (ಬಿಜೆಪಿ), 2: ಡಾ. ಎಂ.ಎಸ್. ಓಹಿಲಾ (ಬಿಜೆಪಿ), ಆರ್. ರಜನಿ (ಕಾಂ), ಎಂ. ರೂಪಾ (ಜೆಡಿಎಸ್), 3: ಕಮಲಮ್ಮ (ಬಿಜೆಪಿ), ಜೆ.ಎಂ. ನಂದಿನಿ (ಜೆಡಿಎಸ್), ಕೆ.ಎಸ್. ಮೇಘಶ್ರೀ ಭೂಷಣ್ (ಕಾಂ), 4: ಬಿ.ಎನ್. ಅಜಯ್(ಕಾಂ), ಜಿ.ಕೆ. ಪ್ರಸನ್ನ(ಬಿಜೆಪಿ), ಹಮೀದ್ ಖಾನ್ (ಜೆಡಿಎಸ್), ಎಸ್.ಸಿ. ನಾಗರಾಜ್, ಗೌಸ್ ಇ ಆಜಮ್, ಕೆ.ಎನ್. ಮಂಜುನಾಥ್, ಸಯ್ಯದ್ ಪರ್ವೀಜ್, ಸೈಯದ್ ತಾಸಿನ್ ಷರೀಫ್ (ಪಕ್ಷೇತರರು), 5: ನಾಗರಾಜು (ಜೆಡಿಎಸ್), ಪ್ಯಾರೇಜಾನ್ (ಕಾಂ), ಪಿ.ಜೆ. ರಾಮ ಮೋಹನ್ (ಬಿಜೆಪಿ), ಟಿ.ಎನ್. ಮಂಜುನಾಥ್ (ಪಕ್ಷೇತರ), 6: ಟಿ.ಎನ್. ಪ್ರಕಾಶ್ (ಕಾಂ), ಎಂ.ಪಿ. ಪ್ರಸನ್ನ ಕುಮಾರ್ (ಬಿಜೆಪಿ), 7: ಡಾ. ಪ್ರತಾಪ್ (ಬಿಜೆಪಿ), ಎಂ.ಎಸ್. ಯೋಗೀಶ್ (ಪಕ್ಷೇತರ), 8: ಟಿ.ಜೆ. ಗಂಗಾ (ಕಾಂ), ಟಿ.ಎನ್. ಜಯಲಕ್ಷ್ಮೀ (ಬಿಜೆಪಿ), ಎಂ.ಎಸ್. ಮಮತ(ಜೆಡಿಎಸ್), ಎಂ.ಎನ್. ಸುನೀತಾ(ಪಕ್ಷೇತರ) 9: ಟಿ.ವಿ. ನಂದೀಶ್ (ಜೆಡಿಎಸ್), ಹಳ್ಳಿ ಮಂಜು(ಕಾಂ), ಶಶಿಕಿರಣ್ (ಬಿಜೆಪಿ), ಎನ್.ಎಸ್. ಕೃಷ್ಣಸ್ವಾಮಿ, ಟಿ.ಆರ್. ಯೋಗೀಶ್, ಉಜ್ಜಜ್ಜಿ ರಾಜಣ್ಣ, ಟಿ.ಜಿ. ಲಿಂಗರಾಜು (ಪಕ್ಷೇತರ), 10: ಎಚ್.ಪಿ. ನಾಗರಾಜು (ಕಾಂ), ಎಚ್.ಎಸ್. ಮೋಹನ್ ರಾಜ್ (ಬಿಜೆಪಿ), ಎಚ್.ಜಿ. ರಾಜಶೇಖರ್, ಎಸ್. ಸೋಮಶೇಖರ್ (ಪಕ್ಷೇತರ), 11: ಅಂದಾನಿ (ಕಾಂ), ಎಂ.ಬಿ. ಜಯರಾಂ (ಜೆಡಿಎಸ್), ಎ.ಬಿ. ವಸಂತ ಕುಮಾರ್ (ಬಿಜೆಪಿ), 12: ಎಚ್.ಕೆ. ಮಲ್ಲೇಶನಾಯಕ್ (ಬಿಜೆಪಿ), ವೆಂಕಟೇಶ ನಾಯಕ (ಕಾಂ), ಕಿರಣ್, ಬಿ.ಟಿ. ಕುಮಾರ್, ಟಿ.ಎಸ್. ಶ್ರೀನಿವಾಸ್ (ಪಕ್ಷೇತರ), 13: ಟಿ.ಆರ್. ಭಾರತಿ(ಕಾಂ), ಸಿ.ಆರ್. ಭಾರತಿ(ಜೆಡಿಎಸ್), ಸುಮಾ (ಬಿಜೆಪಿ), ಯಮುನಾ, ಯಶೋಧ ನಾಗರಾಜ, ರೇಖಾ ಅನೂಪ್, ಸ್ವರ್ಣ ಲಿಂಗರಾಜು (ಪಕ್ಷೇತರ), 14: ಡಿ.ಆರ್. ಬಸವರಾಜು (ಬಿಜೆಪಿ), ವಿ. ಯೋಗೇಶ್ (ಕಾಂ), ಎಸ್.ಸಿ. ಶಿವಕುಮಾರ ಸ್ವಾಮಿ (ಜೆಡಿಎಸ್), ಕೆ.ಸಿ. ರಾಜಣ್ಣ (ಪಕ್ಷೇತರ), 15: ಕನಕ ರತ್ನ (ಬಿಜೆಪಿ), ವಿನುತ ತಿಲಕ್‍ಕುಮಾರ್ (ಕಾಂ), ಎಂ.ಡಿ. ಶಂಕರಾಮಣಿ (ಜೆಡಿಎಸ್), 16: ಗೌರಮ್ಮ (ಕಾಂ), ಪದ್ಮಾ ಶಿವಪ್ಪ(ಬಿಜೆಪಿ), ಪುಷ್ಪ ಮಹೇಶ್ (ಜೆಡಿಎಸ್), ಕೆ. ಭ್ರಮ, ಶಾರದಮ್ಮ ಶಾಂತಪ್ಪ (ಪಕ್ಷೇತರ), 17: ಟಿ.ಎಂ. ಗಂಗಾ (ಕಾಂ), ಎಲ್.ಆರ್. ಪ್ರೇಮಲೀಲಾ (ಜೆಡಿಎಸ್), ಶಶಿಕಲಾ (ಬಿಜೆಪಿ), 18: ಮಹೇಶ್ (ಕಾಂ) ಎನ್. ಮಂಜುನಾಥ್ (ಬಿಜೆಪಿ), ಶಿವಶಂಕರ್ (ಜೆಡಿಎಸ್), ಎಂ. ಚಂದ್ರನಾಯಕ (ಪಕ್ಷೇತರ), 19: ಕೆ.ಆರ್. ಅರುಣ್‍ಕುಮಾರ್ (ಜೆಡಿಎಸ್), ಎಚ್.ಜಿ. ಸುಧಾಕರ್ (ಕಾಂ), ಸಂಗಮೇಶ್ (ಬಿಜೆಪಿ), ಎಂ.ಆರ್. ಗಿರೀಶ್, ಎಸ್. ಯೋಗೀಶ್ (ಪಕ್ಷೇತರ), 20: ರುಕ್ಸಾನ ಬಾನು (ಜೆಡಿಎಸ್), ಎಚ್. ಮುನಾಫ್, ಕೆ.ಎಸ್. ಸೈಯರ್ ಜಹೀರ್ (ಪಕ್ಷೇತರ), 21: ಟಿ.ಪಿ. ಲೀಲಾವತಿ (ಬಿಜೆಪಿ), ಕೆ. ವನಿತಾ (ಜೆಡಿಎಸ್), ಹೂರ್ ಬಾನು (ಕಾಂ), ಡಾ. ಎ.ಸಿ.ಜಯಲಕ್ಷ್ಮೀ, ಡಿ. ಧನಲಕ್ಷ್ಮೀ, ನೂರಾನಿ ಬಾನು, ಹೀನಾ ಕೌಸರ್ (ಪಕ್ಷೇತರ), 22: ಬಿ. ಆಮ್ರೂದ್ ಪಾಷಾ (ಜೆಡಿಎಸ್), ಟಿ.ವಿ. ಪ್ರಕಾಶ್ ಚಂದ್ರ (ಕಾಂ), ಕೋಟೆ ಪ್ರಭು (ಕಾಂ), ಟಿ.ಎನ್. ಕುಮಾರಸ್ವಾಮಿ, ಖುದ್ದೂಸ್ ಸಾಬ್, ಮಹಮ್ಮದ್ ಇಸ್ಮಾಯಿಲ್, ಸೈಯದ್ ಫೀರ್, ಸೌಭಾಗ್ಯಮ್ಮ (ಪಕ್ಷೇತರರು), 23: ಆರೀಫ್ ಪಾಷ್ (ಜೆಡಿಎಸ್), ಮಹಮದ್ ಗೌಸ್ (ಕಾಂ), ಮಂಜುನಾಥ್ (ಬಿಜೆಪಿ), ಎಂ. ಗಣೇಶ್, ಮಹಮದ್ ಇಸ್ಮಾಯಿಲ್ (ಪಕ್ಷೇತರ), 24: ಆಸಿಫಾ ಬಾನು (ಜೆಡಿಎಸ್), ನಸೀಮ್ ಉನ್ನೀಸಾ (ಕಾಂ), ಅಮ್ತುರ್ ರಾಫೆ, ಆಯಿಶಾ ಸಿದ್ದಿಖಾ (ಪಕ್ಷೇತರ), 25: ಅಬ್ದುಲ್ ಖಾದರ್ (ಜೆಡಿಎಸ್), ಮಹಮದ್ ಜುಬೇರ್ (ಕಾಂ), ಇಮ್ರಾನ್ ಪಾಷಾ, ಟಿ.ಎಚ್. ಶ್ರೀನಿವಾಸ್, ಆರ್. ಸಲ್ಮಾನ್, ಸೈಯದ್ ಅಮಾನುಲ್ಲಾ, ಸೈಯದ್ ಫೈರೋಜ್ (ಪಕ್ಷೇತರ), 26: ನದೀಮ್ ಪಾಶಾ (ಕಾಂ), ಸಿದ್ದಿಕ್ ಪಾಷಾ (ಜೆಡಿಎಸ್), ನಯಾಜ್ ಖಾನ್, ನಯೀಮ್ ಪಾಷಾ, ಮುರುಳಿಕೃಷ್ಣ (ಪಕ್ಷೇತರ), 27: ಇರ್ಫಾನ್‍ವುಲ್ಲಾ ಷರೀಫ್ (ಕಾಂ), ಆರ್. ಕಿರಣ್‍ಕುಮಾರ್ (ಬಿಜೆಪಿ), ಸೊಪ್ಪು ಗಣೇಶ್ (ಜೆಡಿಎಸ್), 28: ಇಂದ್ರಾಕ್ಷಿ (ಬಿಜೆಪಿ), ಭಾರತಿ (ಜೆಡಿಎಸ್), ಸ್ವಾತಿ ಅರುಣ್ ಬಾಗಲ್ (ಕಾಂ), ಗಂಗಮ್ಮ (ಪಕ್ಷೇತರ), 29: ಬಿ. ರಾಬಿಯಾ (ಕಾಂ), ಶಾಹಿನಾ ಬಾನು (ಜೆಡಿಎಸ್), ಲತಾ ಲೋಕೇಶ್ (ಪಕ್ಷೇತರ), 30: ಎಚ್.ಡಿ. ಅನುಪಮ( ಜೆಡಿಎಸ್), ಪದ್ಮ ತಿಮ್ಮೇಗೌಡ (ಬಿಜೆಪಿ), ಎಚ್.ಬಿ. ಸಾವಿತ್ರಮ್ಮ (ಕಾಂ), 31: ಎಂ. ಎಸ್. ಅಶ್ವಿನಿ (ಬಿಜೆಪಿ), ಸರೋಜಮ್ಮ (ಜೆಡಿಎಸ್), ಎಂ.ಡಿ. ಸವಿತಾ ಗೌಡ (ಕಾಂ), ಜೆ. ಶೃತಿ (ಪಕ್ಷೇತರ).
ಇವರಲ್ಲಿ ಗೆಲ್ಲುವ ಅಭ್ಯರ್ಥಿಗಳು ನಗರಸಭೆಯನ್ನು ಯಾವ ರೀತಿ ಮನ್ನಡೆಸಿ ನಗರವನ್ನು ಹೇಗೆ ಅಭಿವೃದ್ಧಿ ಪಡಿಸುತ್ತಾರೋ ಅಥವಾ ಮೊದಲಿನವರಹಾಗೆಯೇ ಇವರು ಸಹ ತಮ್ಮ ಅಧಿಕಾರವಧಿಯನು ಮುಗಿಸಿ ಸುಮ್ಮನಾಗುತ್ತಾರೋ ಕಾಯ್ದು ನೋಡುವ ಸರದಿ ಮತಭಾಂದವರದ್ದಾಗದಿರಲಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ