ಕೊರಟಗೆರೆ :
ಪಟ್ಟಣದ ಹೆಸರಾಂತ ಸುಭಾಷ್ ಪದವಿ ಪೂರ್ವ ಕಾಲೇಜ್ ಪ್ರಾರಂಭದಿಂದಲು ಒಳ್ಳೆಯ ಹೆಸರನ್ನ ಪಡೆದುಕೊಂಡು ಬಂದಿದೆ. 2025-26 ನೇ ಸಾಲಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವರ್ಷದ ಮೊದಲ ಕಲಿಕಾ ದಿನದ ಶುಭ ಹಾರೈಕೆಯನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಸಂಸ್ಥೆಯ ಅಧ್ಯಕ್ಷರಾದ ಗಂಗರಾಜು “ಗ್ರಾಂಡ್ ವೆಲ್ಕಮ್ ಡೇ” ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಜಿಲ್ಲೆಯ ಹೆಸರಾಂತ ಮುಖ್ಯ ಭಾಷಣಕಾರ, ಕವಿ-ಲೇಖಕರಾದ ಗಂಗಾಧರ್ ಕೊಡ್ಲಿ ರವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಪ್ರಥಮ ಪಿಯುಸಿ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ವರ್ಷದ ಮೊದಲ ಕಲಿಕಾ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ಮೌಲ್ಯಧಾರಿತ ಶಿಕ್ಷಣವನ್ನು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಮತ್ತು ಅಗತ್ಯವಾದ ಪ್ರಯೋಗೀಕ ಶಿಕ್ಷಣವನ್ನು ಸಂಸ್ಥೆಯು ಪೂರೈಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿಯಾದ ನಿರ್ಮಲಾ ತಿಳಿಸಿದರು.
ನಂತರ ಮಾತನಾಡಿದ ಸುಭಾಷ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಗಂಗರಾಜು, ಪ್ರೌಢಶಾಲೆಯ 10ನೇ ತರಗತಿ ವ್ಯಾಸಂಗವನ್ನು ಮುಗಿಸಿ ಕಾಲೇಜು ಹಂತದ ಶಿಕ್ಷಣ ಪಡೆಯಲು ಬಂದಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೊಸತನದ ಶಿಕ್ಷಣವನ್ನು ಶ್ರದ್ಧಾ ಏಕಾಗ್ರತೆ ವಿಶ್ವಾಸ ಮತ್ತು ಭಕ್ತಿಯಿಂದ ವಿದ್ಯಾಭ್ಯಾಸ ಕಲಿಯಬೇಕು ನಮ್ಮ ಸಂಸ್ಥೆಯು ಸಕಲ ಮೂಲಭೂತ ಸೌಕರ್ಯಗಳನ್ನು ನೀಡುವುದರ ಜೊತೆಗೆ ಮೌಲ್ಯ ಆಧಾರಿತ ಶಿಕ್ಷಣವನ್ನು ಸಹ ನೀಡಲಾಗುವುದು. ಈ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವುದರ ಜೊತೆಗೆ ಮುಂದಿನ ವೃತ್ತಿಪರ ಕೋರ್ಸ್ ಗಳಿಗೆ ಹೋಗಲು ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಭವಿಷ್ಯದ ಗುರಿಯನ್ನು ತಲುಪಲು ಶ್ರಮ, ಶಿಸ್ತು ಮತ್ತು ಸಂಯಮ ನಿಮ್ಮಲ್ಲಿದ್ದರೆ ಖಂಡಿತ ತಮ್ಮ ತಮ್ಮ ಗುರಿ ತಲುಪುತ್ತೀರಿ ಹಾಗೆಯೇ ಕಾಲೇಜಿನ ಆಡಳಿತ ಮಂಡಳಿಯು ಸದಾಕಾಲ ತಮ್ಮಗಳ ಜೊತೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ತಿಳಿಸಿದರು.
ಸುಭಾಷ್ ಪದವಿ ಪೂರ್ವ ಕಾಲೇಜು ತಾಲ್ಲೂಕಿನಲ್ಲಿ ಉತ್ತಮವಾದ ಶಿಕ್ಷಣ ನೀಡುತ್ತಿದೆ. ನುರಿತ ಅನುಭವಿ ಉಪನ್ಯಾಸಕರಿಂದ ಒಳ್ಳೆಯ ಶಿಕ್ಷಣ ಮಕ್ಕಳಿಗೆ ದೊರಕುತ್ತಿದೆ. ಮೌಲ್ಯಧಾರಿತ ಶಿಕ್ಷಣದ ಜೊತೆಗೆ ಪ್ರಾಯೋಗಿಕ ತರಬೇತಿಗಳಿಗೆ ಹೆಚ್ಚಿನ ಹೊತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಶ್ರದ್ಧೆ ಭಕ್ತಿ ವಿನಯದಿಂದ ಓದಿದರೆ ಭವಿಷ್ಯದಲ್ಲಿ ಒಳ್ಳೆಯ ಗುರಿ ತಲುಪುತ್ತಾರೆ..
ಈ ಸುಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲ ಗಂಗಾಧರ್, ಕನ್ನಡ ಪ್ರಾಧ್ಯಾಪಕರಾದ ದೊಡ್ಡನಾಗಪ್ಪ , ಉಪನ್ಯಾಸಕರಾದ ನವೀನ್, ದಯಾನಂದ್, ವಿವೇಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
