ಶ್ರೀನಗರ್ :
ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದ್ದು, ಎನ್ ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ 24ಗಂಟೆಯಲ್ಲಿ ನಡೆದ ಎರಡನೇ ಎನ್ ಕೌಂಟರ್ ಇದಾಗಿದ್ದು, ಒಟ್ಟು ಒಂಬತ್ತು ಉಗ್ರರು ಬಲಿಯಾದಂತಾಗಿದೆ.
ಭಾನುವಾರ ಮತ್ತು ಸೋಮವಾರ ಜಮ್ಮು ಮತ್ತು ಕಾಶ್ಮೀರ ಭಾಗದ ಶೋಪಿಯಾನ ಭಾಗದಲ್ಲಿ ನಡೆದಿರುವ ಚಕಮಕಿಯಲ್ಲಿ ಭಾರತೀಯ ಸೇನೆಯ ಗುಂಡಿಗೆ ಈ ಉಗ್ರರು ಹತರಾಗಿದ್ದಾರೆ.
ಎರಡು ದಿನಗಳಲ್ಲಿ ಎರಡೆರಡು ಬಾರಿ ಎನ್ಕೌಂಟರ್ ನಡೆದಿದೆ. ದಕ್ಷಿಣ ಕಾಶ್ಮೀರದ ಪಿನ್ಜೋರಾ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಮಾಹಿತಿ ಪಡೆದ ಭದ್ರತಾ ಪಡೆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಗೆ ಇಳಿದಿತ್ತು .
ಸೋಮವಾರ ಬೆಳಗ್ಗೆ ಮಾಹಿತಿ ಆಧರಿಸಿ ಉಗ್ರರ ನೆಲೆ ಸುತ್ತುವರೆದು ಶರಣಾಗಲು ಸೂಚಿಸಿದ್ದು, ಉಗ್ರರು ಗುಂಡಿನ ದಾಳಿ ನಡೆಸಿದಾಗ, ಎನ್ ಕೌಂಟರ್ ನಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ನಡೆದ ಕಾರ್ಯಾಚರಣೆಯನ್ನು 9 ಮಂದಿ ಭಯೋತ್ಪಾದಕರು ಹತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ