ಬೆಂಗಳೂರು:
ನಿರೂಪಕಿ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಆಗಸ್ಟ್ 28ಕ್ಕೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಅನುಶ್ರೀ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಇದೀಗ ಅನುಶ್ರೀ ಮದುವೆಯಾಗುವ ಹುಡುಗನ ಫೋಟೋ ವೈರಲ್ ಆಗಿದೆ. ಕೊಡಗು ಮೂಲದ ರೋಶನ್ ಜತೆ ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಎರಡು ಕುಟುಂಬಸ್ಥರು ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅನುಶ್ರೀ ಅವರು ಅರೇಂಜ್ ಮ್ಯಾರೇಜ್ ಆಗುತ್ತಿದ್ದಾರೆ. ಅನುಶ್ರೀ ಅವರ ಹೋಟೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ರೋಶನ್ ಭಾಗಿಯಾಗಿದ್ದರು ಎನ್ನಲಾಗಿದೆ. ದೇವರಿಗೆ ಆರತಿ ಮಾಡುವಾಗ ಅನುಶ್ರೀ ಪಕ್ಕದಲ್ಲಿದ್ದ ಹುಡುಗನೇ ರೋಶನ್ ಎನ್ನಲಾಗಿದೆ. ಅನುಶ್ರೀ ಮದುವೆಯಾಗುವ ರೋಶನ್ ಸೋಶಿಯಲ್ ಮೀಡಿಯಾ ಅಕೌಂಟ್ ಕೂಡ ಪ್ರೈವೇಟ್ ಅಲ್ಲಿದೆ. ಹೀಗಾಗಿ ಅವರು ಯಾರಿರಬಹುದು ಎಂದು ಅನೇಕರಿಗೆ ಪ್ರಶ್ನೆ ಕಾಡಿತ್ತು. ಆದರೆ ಈಗ ಅನುಶ್ರೀ, ರೋಶನ್ ಪೂಜೆ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ.
ಪುನೀತ್ ರಾಜಕುಮಾರ್ ಅವರ ʼಗಂಧದಗುಡಿʼ ಡಾಕ್ಯುಮೆಂಟರಿಯ ಇವೆಂಟ್‌ನಲ್ಲಿ ಅನುಶ್ರೀ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಅನುಶ್ರೀ ಹಾಗೂ ರೋಶನ್ ಪರಿಚಯ ಆಗಿತ್ತು. ಇವರಿಬ್ಬರು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು. ರೋಶನ್ ಅವರು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಕೂಡ ಹೇಳಲಾಗುತ್ತಿದೆ. ಕಳೆದು ಎರಡು ವರ್ಷಗಳಿಂದ ಈ ಜೋಡಿ ಪರಸ್ಪರ ಲವ್ ಮಾಡುತ್ತಿದ್ದರು. ಎರಡು ಕುಟುಂಬಗಳು ಈ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ರೆಡಿಯಾಗಿವೆ. ಅನುಶ್ರೀ ಅವರ ತಮ್ಮ ಹೊಸ ಹೋಟೆಲ್ ಆರಂಭಿಸಿದ್ದರು. ಆ ಪೂಜೆಯಲ್ಲಿ ಅನುಶ್ರೀ ಹಾಗೂ ರೋಷನ್ ಭಾಗಿಯಾಗಿದ್ದರು. ಈ ಫೋಟೊ ಕೂಡ ವೈರಲ್ ಆಗುತ್ತಿದೆ.
ಅನುಶ್ರೀ ಅವರು ಆ್ಯಂಕರ್ ಆಗಿ, ನಟಿಯಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಅವರು ಖ್ಯಾತಿ ಗಳಿಸಿದ್ದಾರೆ.
