ಶಿರಸಿ:
ಶ್ರೀ ಬಸವ ಮಾಚಿದೇವ ಮಹಾ ಸಂಸ್ಥಾನ ಮಠ ಚಿತ್ರದುರ್ಗ. ಇವರ ದಿವ್ಯ ಸಾನಿಧ್ಯದಲ್ಲಿ ಅಗಸ್ಟ್ 18 ರಂದು ಮುಂಜಾನೆ 10.30 ಕ್ಕೆ ಶಿರಸಿಯ ಟಿಎಸ್ಎಸ್ ರಸ್ತೆಯಲ್ಲಿರುವ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ “ಮನ-ಮನೆಗೆ ಶ್ರೀ ಮಾಚಿದೇವ” ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಕಾರ್ಯಕ್ರಮದ ರೂಪುರೇಷೆ ತಯಾರಿಸಲು ಇಂದು ಉತ್ತರ ಕನ್ನಡ ಜಿಲ್ಲಾ ಮಡಿವಾಳ ಸಮಾಜ ಸಂಘವು ಶಿರಸಿಯಲ್ಲಿ ಸಭೆಯನ್ನು ನಡೆಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಾಜದ ಎಲ್ಲ ಬಾಂಧವರು ತನು ಮನ ಧನ ಸಹಾಯ ನೀಡಬೇಕೆಂದು ಮನವಿ ಮಾಡಿತು.
