ಶಿರಸಿ :
ನಗರದ ಕೋಟೆಗಲ್ಲಿಯ ಫಿರ್ಯಾಧಿದಾರರಾದ ಶ್ರೀಮತಿ ರಂಜೀತಾ ಗಂ/ವಿವೇಕ ಭೋವಿ ರವರು ದಿನಾಂಕ 12/07/2025 ರಂದು ತನ್ನ ಗಂಡನಾದ ವಿವೇಕ ತಂದೆ ಲೋಕೇಶ (35) ಸಾ//ಕೋಟೆಗಲ್ಲಿ ಶಿರಸಿ ಇತನು ಕಳೆದ 08 ತಿಂಗಳ ಹಿಂದೆ ಶಿರಸಿಯ ಕೋಟೆಗಲ್ಲಿಯಿಂದ ಕಾಣೆಯಾಗಿರುವ ಬಗ್ಗೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಂತೆ ಠಾಣಾ ಗುನ್ನೆ ನಂ 69/2025 ಮನುಷ್ಯ ಕಾಣೆ ನೆದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ದೀಪನ್ ಎಂ.ಎನ್,ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿಗಳಾದ ಜಿ ಕೃಷ್ಣಮೂರ್ತಿ, ಜಗದೀಶ್ ಎಂ ಹಾಗೂ ಶಿರಸಿ ಉಪ ವಿಭಾಗದ ಡಿಎಸ್ಪಿ ಶ್ರೀಮತಿ ಗೀತಾ ಪಾಟೀಲ್, ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ನೆಲ್ಸನ್ ಮೆಂಥಾರೋ, ಎಎಸ್ಐ,ಸದ್ದಾಂ ಹುಸೇನ್,ಚನ್ನಬಸಪ್ಪ ಕ್ಯಾರಕಟ್ಟಿ,ಸುನೀಲ್ ಹಡಲಗಿ,ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾಣೆಯಾದ ವ್ಯಕ್ತಿಯನ್ನು ಬೆಂಗಳೂರನ ಜೆ.ಬಿ ನಗರದಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ
