ವಂಚನೆ ಆರೋಪದ ಬಗ್ಗೆ ಮೌನ ಮುರಿದ ಚಾಹಲ್….!+.

ಮುಂಬಯಿ:

     ಭಾರತ ಕ್ರಿಕೆಟ್‌ ತಂಡದ ಆಟಗಾರ ಯುಜುವೇಂದ್ರ ಚಾಹಲ್  ಮತ್ತು ನಟಿ ಧನಶ್ರೀ ವರ್ಮಾ  ಅವರು ಇದೇ ವರ್ಷದ ಮಾರ್ಚ್ 20 ರಂದು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದುಕೊಳ್ಳುವ ಮೂಲಕ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದರು. ಇದೀಗ ಹಲವು ತಿಂಗಳ ಬಳಿಕ ವಿಚ್ಛೇದನ ಬಗ್ಗೆ ಚಾಹಲ್ ಮೌನ ಮುರಿದ್ದಾರೆ.

    ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ ಸಂವಾದದಲ್ಲಿ, ಧನಶ್ರೀ ವರ್ಮಾ ಅವರೊಂದಿಗಿನ ವಿಚ್ಛೇದನದ ಬಗ್ಗೆ ಮುಕ್ತವಾಗಿ ಮಾತನಾಡಿದ ಚಾಹಲ್‌, “ಧನಶ್ರೀ ಬಗ್ಗೆ ಅನೇಕ ವದಂತಿಗಳಿದ್ದರೂ ತಾನು ಎಂದಿಗೂ ಅವರಿಗೆ ಮೋಸ ಮಾಡಿಲ್ಲ. ವಿಚ್ಛೇದನ ಅಂತಿಮಗೊಳ್ಳುವವರೆಗೂ ಅವರು ತಮ್ಮ ಪ್ರತ್ಯೇಕತೆಯನ್ನು ಪ್ರಪಂಚದಿಂದ ರಹಸ್ಯವಾಗಿಟ್ಟಿದ್ದರು” ಎಂದು ಚಾಹಲ್ ಸ್ಪಷ್ಟಪಡಿಸಿದರು.

   “ನಾನು ವಿಚ್ಛೇದನದ ವಿಷಯವನ್ನು ಎದುರಿಸುತ್ತಿರುವಾಗ, ಜನರು ನನ್ನನ್ನು ಮೋಸಗಾರ ಎಂದು ಹಣೆಪಟ್ಟಿ ಕಟ್ಟಿದರು. ನಾನು ಎಂದಿಗೂ ಮೋಸ ಮಾಡಿಲ್ಲ. ನನಗಿಂತ ಹೆಚ್ಚು ನಿಷ್ಠಾವಂತ ವ್ಯಕ್ತಿ ನಿಮಗೆ ಸಿಗುವುದಿಲ್ಲ. ನನ್ನ ಪ್ರೀತಿಪಾತ್ರರಿಗಾಗಿ, ನಾನು ನನ್ನ ಹೃದಯದಿಂದ ಯೋಚಿಸುತ್ತೇನೆ. ನಾನು ಎಂದಿಗೂ ವಿಚ್ಛೇದನ ಕೇಳಿಲ್ಲ, ಕೊಟ್ಟಿದ್ದೇನೆ. ನಿಮಗೆ ಗೊತ್ತಿಲ್ಲದಿದ್ದಾಗ, ನೀವು ಬರೆಯುತ್ತಿದ್ದೀರಿ. ನನಗೆ ಇಬ್ಬರು ಸಹೋದರಿಯರಿದ್ದಾರೆ, ಹುಡುಗಿಯರನ್ನು ಹೇಗೆ ಗೌರವಿಸಬೇಕೆಂದು ನನಗೆ ತಿಳಿದಿದೆ. ನೀವು ಯಾರೊಂದಿಗಾದರೂ ಕಾಣಿಸಿಕೊಂಡ ಮಾತ್ರಕ್ಕೆ, ನೀವು ಯಾರೊಂದಿಗಾದರೂ ಸಂಪರ್ಕ ಸಾಧಿಸುತ್ತೀರಿ ಮತ್ತು ಅಭಿಪ್ರಾಯಗಳಿಗಾಗಿ ಬರೆಯುತ್ತೀರಿ. ಸಮಸ್ಯೆ ಏನೆಂದರೆ ನೀವು ಒಮ್ಮೆ ಪ್ರತಿಕ್ರಿಯಿಸಿದರೆ, ನೀವು ಪ್ರತಿಕ್ರಿಯಿಸುತ್ತೀರಿ ಎಂದು ತಿಳಿದು ಬರುವ ಜನರು ಹೆಚ್ಚು,” ಎಂದು ಹೇಳುವ ಮೂಲಕ ವಿಚ್ಛೇದನದ ವಿಚಾರದಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಒಗಳನ್ನು ಮಾಡಿದ್ದ ನೆಟ್ಟಿಗರಿಗೆ ಚಹಲ್‌ ಸ್ಪಷ್ಟಿಕರಣ ನೀಡಿದರು.

   “ನನ್ನ ಜೀವನದಿಂದ ನನಗೆ ಬೇಸರವಾಗಿತ್ತು. ಪ್ರತಿದಿನ ನಾನು ಅದೇ ರೀತಿ ಬದುಕಲು ಸಾಧ್ಯವಿಲ್ಲ. ಅದೇ ವಿಷಯಗಳು. ಅದೇ ಆತಂಕ. ಎರಡು ಗಂಟೆಗಳ ಕಾಲ ಅಳುವುದು. 2-3 ಗಂಟೆಗಳ ಕಾಲ ನಿದ್ರೆ ಮಾಡಿದರೂ ಇನ್ನೂ ಅದೇ ಆಗುತ್ತಿದೆ. ಇದು ಕೊನೆಗೊಂಡರೆ ಉತ್ತಮ ಎಂದು ನಾನು ಭಾವಿಸಿದೆ. ಇದು ಒಂದು ತಿಂಗಳಲ್ಲಿ 1-2 ದಿನಗಳಂತೆ ಅಲ್ಪಾವಧಿಗೆ ಸಂಭವಿಸುತ್ತಿತ್ತು. ಹೀಗಾಗಿ ವಿಚ್ಛೇದನದ ಪಡೆದೆ” ಎಂದು ಚಾಹಲ್ ಹೇಳಿದರು.

   ಚಾಹಲ್ ಮತ್ತು ಧನಶ್ರೀ ಡಿಸೆಂಬರ್ 2020 ರಲ್ಲಿ ಮದುವೆಯಾಗಿದ್ದರು ಮತ್ತು ನಂತರ ಜೂನ್ 2022 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿತ್ತು. ವಿಚ್ಛೇದನಕ್ಕೆ ಕಾರಣಗಳ ಬಗ್ಗೆ ಕೆಲವು ವರದಿಗಳು ಬಂದಿತ್ತು. ಇವುಗಳಲ್ಲಿ ಮುಖ್ಯ ಕಾರಣವೆಂದರೆ ಹೊಂದಾಣಿಕೆಯ ಸಮಸ್ಯೆಗಳು ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುವ ಇಚ್ಛೆ. ಕೆಲವು ವರದಿಗಳ ಪ್ರಕಾರ, ಚಾಹಲ್ ತನ್ನ ಪತ್ನಿಗೆ ಶಾಶ್ವತ ಜೀವನಾಂಶವಾಗಿ 4.75 ಕೋಟಿ ರೂ.ಗಳನ್ನು ನೀಡಲು ಒಪ್ಪಿಕೊಂಡಿದ್ದಾರೆ, ಅದರಲ್ಲಿ 2.37 ಕೋಟಿಯನ್ನು ಈಗಾಗಲೇ ಪಾವತಿಸಲಾಗಿದೆ ಎನ್ನಲಾಗಿತ್ತು.

Recent Articles

spot_img

Related Stories

Share via
Copy link