ಸುಬ್ರಹ್ಮಣ್ಯ :
ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತಕ್ಕೆ ಚಾರಣ ಹೋಗಿ ನಾಪತ್ತೆಯಾಗಿದ್ದ ಬೆಂಗಳೂರಿನ ಯುವಕ ಸಂತೋಷ್ ಪತ್ತೆಯಾಗಿದ್ದಾನೆ.
ಸಂತೋಷ್ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕಲ್ಲಗುಡ್ಡೆಯಲ್ಲಿ ಪತ್ತೆಯಾಗಿದ್ದಾನೆ. ಕುಮಾರ ಪರ್ವತದಿಂದ ಮರಳುವ ಹಾದಿಯಲ್ಲಿ ಮಾರ್ಗ ಮಧ್ಯೆ ಸಂತೋಷ್ ಸೋಮವಾರ ಕಾಣೆಯಾಗಿದ್ದರು.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ನಗರ ಮೂಲದ 12 ಯುವಕರ ತಂಡ ಚಾರಣ ನಿಮಿತ್ತ ಸೆ.14ರಂದು ಬೆಳಗ್ಗೆ 7 ಗಂಟೆಗೆ ಸುಬ್ರಹ್ಮಣ್ಯಕ್ಕೆ ತೆರಳಿದ್ದರು. 12 ಜನರ ತಂಡ ಎರಡು ವಿಭಾಗಗಳಾಗಿ ಸಾಗಿದ್ದರೂ, ಒಂದು ತಂಡ ಚಾರಣ ಮುಗಿಸಿ ಮರಳಿತ್ತು. ಸ್ವಲ್ಪ ಹೊತ್ತಿನ ನಂತರ ಗಿರಿಗದ್ದೆಯಿಂದ 6 ಜನರ ತಂಡ ಸುಬ್ರಹ್ಮಣ್ಯ ಕಡೆಗೆ ಬರುವ ವೇಳೆ ಜೋರಾಗಿ ಮಳೆ ಸುರಿಯಲಾರಂಭಿಸಿದೆ. ಸ್ವಲ್ಪ ಹೊತ್ತಿನಲ್ಲೆ ಸಂತೋಷ್ ಕಣ್ಮರೆಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








