ಪಶ್ಚಿಮ ಬಂಗಾಳ
ನಾಡಿಯಾದ ಕಲ್ಯಾಣಿಯಲ್ಲಿರುವ ಸಂಶೋಧನಾ ಸಂಸ್ಥೆಯಲ್ಲಿ 25 ವರ್ಷದ ಪಿಎಚ್ಡಿ ವಿದ್ಯಾರ್ಥಿಯೊಬ್ಬರು ಗುರುವಾರ ಮೃತಪಟ್ಟಿದ್ದು, ವಿದ್ಯಾರ್ಥಿಯ ಪೋಷಕರು ತಮ್ಮ ಮಗ ರ್ಯಾಗಿಂಗ್ಗೆ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಮೃತರನ್ನು ಅನಮಿತ್ರ ರಾಯ್ ಎಂದು ಗುರುತಿಸಲಾಗಿದ್ದು, ಅವರು ಉತ್ತರ 24 ಪರಗಣದ ಶ್ಯಾಮ್ನಗರದವರಾಗಿದ್ದಾರೆ. ರಾಯ್ ಕೋಲ್ಕತ್ತಾದ ಭಾರತೀಯ ವಿಜ್ಞಾನ ಶಿಕ್ಷsdಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜೀವಶಾಸ್ತ್ರದಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ಸಂಜೆ ಪ್ರಯೋಗಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅವರನ್ನು ಕಲ್ಯಾಣಿಯ ಏಮ್ಸ್ಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು ಎಂದು ವೈದ್ಯರು ತಿಳಿಸಿದ್ದಾರೆ.
ವಿದ್ಯಾರ್ಥಿ ಸಾವಿಗೂ ಮುನ್ನ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದ. ಅದರಲ್ಲಿ ಸಂಸ್ಥೆಯು ತನ್ನ ರ್ಯಾಗಿಂಗ್ ದೂರುಗಳನ್ನು ಹೇಗೆ ನಿರ್ಲಕ್ಷಿಸಿತು. ತಾನು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದೇನೆ. ನನ್ನ ಬಳಿ ಬೇರೆ ದಾರಿ ಇಲ್ಲ ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೆ ತನ್ನ ಬಾಲ್ಯದಲ್ಲಿ ತನಗಾದ ನಿಂದನೆ, ಖಿನ್ನತೆ ಸೇರಿ ಹಲವು ವಿಷಯಗಳ ಹುರಿತು ಅದರಲ್ಲಿ ಉಲ್ಲೇಖಿಸಲಾಗಿದೆ. ಅವರು ಮತ್ತು ಅವರ ಹಲವಾರು ಸಹೋದ್ಯೋಗಿಗಳು ಪಿಎಚ್ಡಿ ವಿದ್ಯಾರ್ಥಿ ಸೌರಭ್ ಬಿಸ್ವಾಸ್ ಅವರಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ವಿದ್ಯಾರ್ಥಿ ನೇರವಾಗಿ ಆರೋಪಿಸಿದ್ದಾರೆ. ಮೇಲ್ವಿಚಾರಕಿ ಅನಿಂದಿತಾ ಭದ್ರ ಮತ್ತು ಸಂಸ್ಥೆಯ ರ್ಯಾಗಿಂಗ್ ವಿರೋಧಿ ಘಟಕಕ್ಕೆ ಪದೇ ಪದೇ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ವರ್ಷ ಏಪ್ರಿಲ್ 12 ರಂದು ಪ್ರಯೋಗಾಲಯದ ಘಟನೆ ನಡೆದಿದ್ದು, ಅಲ್ಲಿ ಬಿಸ್ವಾಸ್ ತಮ್ಮ ಮೇಲೆ ದೀರ್ಘಕಾಲದವರೆಗೆ ದ್ವೇಷ ಸಾಧಿಸುತ್ತಿದ್ದರು ಎಂದು ಬರೆದುಕೊಳ್ಳಲಾಗಿದೆ.
ತಮ್ಮ ಮೇಲ್ವಿಚಾರಕರು ರ್ಯಾಗಿಂಗ್ ಆರೋಪಿಯ ಕೆಲಸವನ್ನು ಬಹಿರಂಗವಾಗಿ ಹೊಗಳಿದ್ದಾರೆ ಎಂದು ಕೂಡ ರಾಯ್ ಆರೋಪಿಸಿದ್ದಾರೆ. ತಮ್ಮ ಅಂತಿಮ ಟಿಪ್ಪಣಿಯಲ್ಲಿ, ರಾಯ್ ಸಂಸ್ಥೆಯ ಆಡಳಿತಕ್ಕೆ ಆರೋಪಿತ ವಿದ್ಯಾರ್ಥಿ ಸೌರಭ್ ಬಿಸ್ವಾಸ್ಗೆ ಪಿಎಚ್ಡಿ ಪದವಿಯನ್ನು ನಿರಾಕರಿಸಬೇಕು ಮತ್ತು ರ್ಯಾಗಿಂಗ್ ವಿರೋಧಿ ನಿಯಮಗಳ ಅಡಿಯಲ್ಲಿ ಜವಾಬ್ದಾರರನ್ನಾಗಿಸಬೇಕು ಎಂದು ಒತ್ತಾಯಿಸಿದ್ದಾರಂತೆ, ಆದರೆ ಕ್ರಮಕೈಗೊಂಡಿಲ್ಲ ಎಂದು ಮನನೊಂದು ದೀರ್ಘ ಟಿಪ್ಪಣಿ ಬರೆದಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.








