ನಿನ್ನೆ ಸಂಜೆ ಶ್ರೀನಗರ ಸರ್ಕಲ್ನಿಂದ ಚೆನ್ನಮ್ಮ ಸೊಸೈಟಿ ಕಡೆಗೆ ನೋಟನ್ನು ಸಾಗಿಸುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಬಳಿಕವಷ್ಟೇ ಖೋಟಾನೋಟು ಯಾವುದಕ್ಕೆ ಬಳಸಲಾಗುತ್ತಿತ್ತು ಎಂಬುವುದರ ಬಗ್ಗೆ ತಿಳಿಯಲಿದೆ.
ಫೋಟೋ ಶಾಪ್ನಲ್ಲಿ ಎರಡು ಸಾವಿರ ಹಾಗೂ ಐದುನೂರು ಮುಖಬೆಲೆಯ ನೋಟನ್ನು ಸಿದ್ಧಪಡಿಸಿದ್ದಾರೆ , ಬಳಿಕ ಕಲರ್ ಪ್ರಿಂಟರ್ನಲ್ಲಿ ಖೋಟಾನೋಟು ಪ್ರಿಂಟ್ ತೆಗೆದಿದ್ದಾರೆ. ಪ್ರಕರಣ ಸಂಬಂಧ ಲ್ಯಾಪ್ಟಾಪ್, ಕಲರ್ ಪ್ರಿಂಟರ್, ಎರಡು ಸ್ಕೂಟರ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ಡಿ.ಸಿ.ರಾಜಪ್ಪ ಮಾಹಿತಿ ನೀಡಿದ್ದಾರೆ .