ಕೊರಟಗೆರೆ :-
ರಾಜ್ಯದಲ್ಲಿ ಹಲವು ನದಿಗಳು ಮೈದುಂಬಿ ಹರಿಯುತ್ತಿದ್ದು, ವಿದ್ಯುತ್ ಉತ್ಪಾದನೆಗೆ ಯಾವುದೇ ಸಮಸ್ಯೆ ಇಲ್ಲ ರಾಜ್ಯದಲ್ಲಿ ನಿರಂತರ ವಿದ್ಯುತ್ ಸರಬರಾಜು ಆಗುತ್ತಿದೆ ಎಂದು ರಾಜ್ಯ ಸರ್ಕಾರ ಹಲವು ಬಾರಿ ಉಚ್ಚರಿಸುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಗ್ರಾಮೀಣ ಪ್ರದೇಶದ ಜನರು ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಪರಿತಪಿಸುತ್ತಿದ್ದು, ಬೆಸ್ಕಾಂ ವಿರುದ್ಧ ಸಾರ್ವಜನಿಕರು ಇಡೀ ಶಾಪ ಹಾಕುತ್ತಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಸಬ್ ಸ್ಟೇಷನ್ ವ್ಯಾಪ್ತಿಯ F:10 ಫೀಡರ್ ಸುಮಾರು 20 ಗ್ರಾಮಗಳಲ್ಲಿ ಸಂಜೆ ವಿದ್ಯುತ್ ಹೋದ್ರೆ ಎನ್ನೂ ಬೆಳಗ್ಗೆ ತನಕ ಜಮ್ಮಯ್ಯ ಅಂದ್ರು ಬರೋದಿಲ್ಲ ಅಧಿಕಾರಿಗಳಾಗಲಿ ಅಥವಾ ಲೈನ್ ಮ್ಯಾನ್ ಗಳಾಗಲಿ ತಲೆ ಕೆಡಿಸಿಕೊಳ್ಳದೆ ಇರುವುದರಿಂದ ಸಾರ್ವಜನಿಕರು ಹಾಗೂ ಗ್ರಾಹಕರು ಇಲಾಖೆಯ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸಕ್ತವಾಗಿ ಮಳೆಗಾಲ ವಿದ್ಯುತ್ ಪ್ರತಿ ದಿನ ಕಣ್ಣು ಮುಚ್ಚಾಲೆ ಆಡುತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮರಗಳು ಲೈನ್ ಮೇಲೆ ಬಿದ್ದರೆ ದುರಸ್ತಿ ಮಾಡಲು ಸಿಬ್ಬಂದಿ ವರ್ಗ ಬಹಳಷ್ಟು ಸಮಯ ತೆಗೆದುಕೊಳ್ಳುವುದರಿಂದ ಇಡೀ ರಾತ್ರಿ ಕತ್ತಲಲ್ಲಿ ಮುಳುಗಿದಂತಾಗುತ್ತದೆ , ಹಲವು ಹಳ್ಳಿಗಳಿಗೆ ಪ್ರತ್ಯೇಕ ಕಂಟ್ರೋಲ್ ಜಿ ಓ ಎಸ್ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಒಂದು ಕಡೆ ಸಮಸ್ಯೆ ಆದರೆ ಇಡೀ F :10 ಫೀಡರ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಕರೆಂಟ್ ಕಣ್ಮುರೆಯಾಗುತ್ತದೆ , ಅದು ಒಂದೆರಡು ದಿನ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಬಹಳ ಸಮಸ್ಯೆ ಅನುಭವಿಸಿ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕರ ಅವಶ್ಯಕತೆ ಇರುವಂತ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿರುವುದು ಸಾರ್ವಜನಿಕರಿಗೆ ತಲೆ ನೋವಾಗಿ ಪರಿಣಮಿಸಿದ್ದು, ಇಡೀ ರಾತ್ರಿ ವಿದ್ಯುತ್ ವ್ಯತ್ಯಯ ಜೊತೆಗೆ ಬೆಳಿಗ್ಗೆ 6 ರಿಂದ 10 ಗಂಟೆ ಕೆಲಸ ಕಾರ್ಯಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ತಿಂಡಿ ತಿನಿಸು ಮಾಡುವ ಸಂದರ್ಭದಲ್ಲಿ ಕರೆಂಟ್ ವ್ಯತ್ಯಯಾಗುವುದರಿಂದ ಬಹಳಷ್ಟು ಜನರಿಗೆ ಸಮಸ್ಯೆಯಾಗುತ್ತಿದ್ದು ಕೂಡಲೇ ಸರಿಪಡಿಸಬೇಕು ಎಂದು ಮೇಲೆ ಅಧಿಕಾರಿಗಳಿಗೆ ಒತ್ತಾಯ ಮಾಡುತ್ತಿದ್ದಾರೆ.








