ಬನವಾಸಿ:
ಶಿರಸಿ ತಾಲೂಕಿನ ಹಾಡಲಗಿ ಬಳಿ ನಿಯಂತ್ರಣ ತಪ್ಪಿ ಟಾಟಾ ಗೂಡ್ಸ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಚಾಲಕ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದ ಬಗ್ಗೆ ವರದಿಯಾಗಿದೆ
ಸೊರಬ ತಾಲೂಕಿನ ಆನವಟ್ಟಿ, ಸಮಿನಳ್ಳಿ ಗ್ರಾಮದ ಪರಶುರಾಮ ನಾಗಪ್ಪ ಮುಳಾರಮನೆ (30) ಮೃತಪಟ್ಟ ಚಾಲಕ. ಘಟನೆಯಲ್ಲಿ ವಾಹನದಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಿಯಿಂದ ಜಡೆಗೆ ಕೋರ್ಲಕಟ್ಟಾ ಮಾರ್ಗವಾಗಿ ತೆರಳುವಾಗ, ಚಾಲಕನ ನಿಯಂತ್ರಣ ತಪ್ಪಿ ಹಾಡಲಗಿ ಬಳಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ.ಚಾಲಕನ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಶಿರಸಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ದಾರಿ ಮಧ್ಯೆಯೇ ಅವರು ಸಾವನ್ನಪ್ಪಿದ್ದರೆಂದು ತಿಳಿದು ಬಂದಿದೆ.ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








