ಶಿರಸಿ:
ಸಣ್ಣ ಹಾಗೂ ಅತೀ ಸಣ್ಣ ರೈತರ ಆರ್ಥಿಕ ಸಬಲತೆ ಮತ್ತು ಸುಸ್ಥಿರ ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆಗೆ 2025 ನೇ ಸಾಲಿನ “ಮೋಸ್ಟ್ ಇಂಪಾಕ್ಟ ಫುಲ್ ಸ್ವಯಂ ಸೇವಾ ಸಂಸ್ಥೆ” ಎಂಬ ಸಿ.ಎಸ್.ಆರ್. ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಬ್ರಾಂಡ್ ಹೊಂಚೊಸ್ ಸಂಸ್ಥೆ ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಕೃಷಿ ಭೂಮಿಯ ಫಲವತ್ತತೆ, ಸಣ್ಣ ರೈತರ ಆದಾಯ ಮೂಲದ ಹೆಚ್ಚಳ, ಸಂಪೂರ್ಣ ಸಾವಯವ ಕೃಷಿಯೊಂದಿಗೆ ಸುಸ್ಥಿರ ಕೃಷಿ ಅಳವಡಿಕೆಯಲ್ಲಿ ಮಾಡಿರುವ ಹೊಸ ರೀತಿಯ ಪ್ರಯತ್ನಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.ಇತ್ತೀಚೆಗೆ ದೆಹಲಿಯ ಹಯಾತ್ ಸೆಂಟ್ರಿಕ್‌ನಲ್ಲಿ ನಡೆದ ಇಂಡಿಯನ್ ಸಿ.ಎಸ್.ಆರ್.ಅವಾರ್ಡ್ಸ-2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಹಾಗೂ ತಂಡದವರು ಪ್ರಶಸ್ತಿ ಸ್ವೀಕರಿಸಿದ್ದಾರೆ.








