ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ಗೆ ಕೊರೊನಾ ಸೋಂಕು ದೃಢ!!

ಮುಂಬೈ:

     ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ ಮಾಹಾಮಾರಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.

     ಈ ಬಗ್ಗೆ ಸ್ವತಃ ಸಚಿನ್​ ಅವರೇ ತನ್ನ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದು, ‘ನಾನು ಕರೊನಾ ಟೆಸ್ಟ್​ ಮಾಡಿಸಿಕೊಂಡಿದ್ದೆ. ಶನಿವಾರ ವರದಿ ಬಂದಿದ್ದು, ಪಾಸಿಟಿವ್​ ಎಂದಿದೆ. ಹಾಗಾಗಿ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದೇನೆ. ಮನೆಯಲ್ಲಿ ಇರುವವರ ವರದಿ ನೆಗೆಟಿವ್​ ಬಂದಿದೆ. ವೈದ್ಯರ ಸಲಹೆಯಂತೆ ಮನೆಯಲ್ಲೇ ಪ್ರತ್ಯೇಕವಾಗಿದ್ದು, ಕರೊನಾ ನಿಯಮ ಪಾಲಿಸುತ್ತಿದ್ದೇನೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುತ್ತಿದ್ದೇನೆ’ ಎಂದು​ ತಿಳಿಸಿದ್ದಾರೆ.

      ಕೊರೋನಾ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಎಲ್ಲ ವೈದ್ಯ ಸಮುದಾಯಕ್ಕೂ, ದೇಶದ ನನ್ನೆಲ್ಲ ಅಭಿಮಾನಿಗಳಿಗೂ ನಾವು ಕೃತಜ್ಞನಾಗಿದ್ದೇನೆ’ ಎಂದು ತಿಳಿಸಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap