ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವಕ್ಕೆ ಚಾಲನೆ ನೀಡಿದ ಬಸವರಾಜ ಹೊರಟ್ಟಿ

ಶಿರಸಿ:

    ಆ.29ರಂದು ಮಾಜಿ ಮುಖ್ಯಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ನಿಮಿತ್ತ ನಗರದ ಯಲ್ಲಾಪುರ ವೃತ್ತದಲ್ಲಿರುವ ರಾಮಕೃಷ್ಣ ಹೆಗಡೆ ಅವರ ಪ್ರತಿಮೆ ಬಳಿ ಶುಕ್ರವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಗಮಸಿ ದಿ.ರಾಮಕೃಷ್ಣ ಹೆಗಡೆ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಜನ್ಮ ಶತಮಾನೋತ್ಸವಕ್ಕೆ ಚಾಲನೆ ನೀಡಿದರು.

   ನಂತರ ಮಾತನಾಡಿದ ಅವರು ರಾಮಕೃಷ್ಣ ಹೆಗಡೆ ಅವರು ಒಬ್ಬ ರಾಷ್ಟ್ರ ನಾಯಕ ಮತ್ತು ಮೌಲ್ಯಯುತ ರಾಜಕಾರಣಿ ಅಲ್ಲದೇ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನೈತಿಕತೆ, ಪಾರದರ್ಶಕತೆ ಮತ್ತು ವಿಕೇಂದ್ರೀಕರಣದ ಪರ್ಯಾಯವಾಗಿ ಹೆಸರು ಮಾಡಿದ
ಮಹಾನ ವ್ಯಕ್ತಿ ಎಂದು‌ ಹೇಳಿದರು.

   ಅಲ್ಲದೇ ‌ಮುಂದೆ ಬರುವಂತ ಬೆಳಗಾವಿ ಅಧಿವೇಶನದಲ್ಲಿ ರಾಮಕೃಷ್ಣ ಹೆಗಡೆ ವೃತ್ತ ಎಂದು ನಾಮಕರಣ ಮಾಡಲು ಸರಿಯಾಗಿ ಮನವಿ ಸಲ್ಲಿಸಿದರೆ ಅದನ್ನು ಪರಿಗಣಿಸಿ ಮಾಡಿ ಕೊಡುವುದಾಗಿ ಬರವಸೆ ನೀಡಿ ಮತ್ತು ಮುಂದಿನ ಯುವ ಪೀಳಿಗೆಗೆ ರಾಮಕೃಷ್ಣ ಹೆಗಡೆಯವರಂತ ರಾಷ್ಟ್ರ ನಾಯಕ ಇದ್ದರು ಎಂಬುದು ಗೊತ್ತಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ದೀಪಕ್ ಹೆಗಡೆ ದೊಡ್ಡೂರು, ಜಿಲ್ಲಾ ಗ್ಯಾರಂಟಿ ಅಧ್ಯಕ್ಷೆ ಸತೀಶ ನಾಯ್ಕ, ಜೋತಿ ಪಾಟೀಲ, ಗೀತಾ ಶೆಟ್ಟಿ, ಗಣೇಶ ದಾವಣಗೆರೆ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link