ಸತತ ೨೦ ಬಾರಿಗೆ ವೀರಾಗ್ರಣಿ ಪಡೆದ ಕಾನಸೂರು ಪ್ರೌಡಶಾಲೆ

ಶಿರಸಿ:

    ಸೆಪ್ಟೆಂಬರ್ 1 ಹಾಗೂ 2 ರಂದು ನಡೆದ ಸಿದ್ದಾಪುರ ತಾಲೂಕು 17 ವರ್ಷದೊಳಗಿನ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಶ್ರೀ ಕಾಳಿಕಾ ಭವಾನಿ ಪ್ರೌಢಶಾಲೆ ಕಾನಸೂರು ಇಪ್ಪತ್ತನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ದಾಖಲೆ‌ ನಿರ್ಮಿಸಿದೆ.

    ಭವ್ಯ  ಭಟ್ಟ 800 ಮೀಟರ್ ಓಟದಲ್ಲಿ ಪ್ರಥಮ 1500 ಮೀಟರ್ ಓಟ ಪ್ರಥಮ 3000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಬಾಲಕಿಯರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅದೇ ರೀತಿ ಬಾಲಕರ ವಿಭಾಗದಲ್ಲಿ ವಿ ನಿತಿನ್ 400 ಮೀಟರ್ ಓಟ ಪ್ರಥಮ, 400 ಮೀಟರ್ ಹರ್ಡಲ್ಸ್ ಪ್ರಥಮ ಹಾಗೂ 800 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ಪ್ರೇರಣಾ ಟಿ ಪೂಜಾರಿ ಚಕ್ರ ಎಸೆತದಲ್ಲಿ ಪ್ರಥಮ ಸರಪಳಿ ಗುಂಡು ಎಸೆತದಲ್ಲಿ ಪ್ರಥಮ, ಅಂಕಿತ ನಾಯ್ಕ್ 400 ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ, ಪೂರ್ವಿ ನಾಯ್ಕ್ 400 ಮೀಟರ್ ಓಟ ಪ್ರಥಮ, 400 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ, ಗಗನ 1500 ಮೀಟರ್ ಓಟ ದ್ವಿತೀಯ, 3000 ಮೀಟರ್ ಓಟದಲ್ಲಿ ತೃತೀಯ, ಶ್ರಾವ್ಯ ಉಪ್ಪಾರ್ ಸರಪಳಿ ಗುಂಡು ಎಸೆತಲ್ಲಿ ದ್ವಿತೀಯ, ಛಾಯಾ ಗೌಡ ಪೋಲ ವಾಟ್ ನಲ್ಲಿ ಪ್ರಥಮ, ಜವಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದ 4 x 100 ಮೀಟರ್ ರೀಲೇ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ದ್ವಿತೀಯ ಬಾಲಕರ 4×400 ಮೀಟರ್ ರೀಲೇ ಸ್ಪರ್ಧೆಯಲ್ಲಿ ಪ್ರಥಮ, ವಾಲಿಬಾಲ್ ನಲ್ಲಿ ಪ್ರಥಮ, ಬಾಲ್ ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಬಾಲಕರ ವಿಭಾಗದಲ್ಲಿ ಸಂಜಯ್ ನಾಯಕ್ 400 ಮೀಟರ್ ಓಟ ತೃತೀಯ ಪ್ರೀತಂ ನಾಯಕ್ 3000 ಓಟ ದಲ್ಲಿ ತೃತೀಯ, 4×400 ಮೀಟರ್ ರಿಲೀಸ್ ಸ್ಪರ್ಧೆಯಲ್ಲಿ ಪ್ರಥಮ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ ತ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಈವರಿಗೆ ಸರಿಯಾದ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕ ಪ್ರವೀಣ ಕುರುಬರ ಅವರನ್ನು ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಮುಖ್ಯಾಧ್ಯಾಪಕರು ಶಿಕ್ಷಕರು ಅಭಿನಂದಿಸಿದ್ದಾರೆ.

Recent Articles

spot_img

Related Stories

Share via
Copy link