7 ವರ್ಷದ ಮಗಳನ್ನು 3ನೇ ಮಹಡಿಯಿಂದ ನೂಕಿ ಕೊಂದ ತಾಯಿ….!

ಬೀದರ್ :

   ರಾಜ್ಯದಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದ್ದು, 7 ವರ್ಷದ ಮಗುವನ್ನು ಆಕೆಯ ಮಲತಾಯಿ 3ನೇ ಮಹಡಿಯಿಂದ ಕೆಳಗೆ ನೂಕಿ ಕೊಲೆ ಮಾಡಿದ್ದಾಳೆ. ಈ ಬರ್ಬರ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದೆ. ಆಗಸ್ಟ್ ​27ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾನವಿ ಮೃತ ಬಾಲಕಿ. ಆಗಸ್ಟ್ 27ರಂದು ಶಾನವಿ ಮೃತಪಟ್ಟಾಗ ಮಹಡಿಯಿಂದ ಆಯತಪ್ಪಿ ಬಿದ್ದು ಮಗಳು ಜೀವ ಬಿಟ್ಟಿದ್ದಾಳೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು.

   ಆದರೆ ಪಕ್ಕದ ಮನೆಯವರು ತಮ್ಮ ಮನೆಯ ಎದುರಿನ ಸಿಸಿಟಿವಿ ದೃಶ್ಯ ನೋಡಿ ಅದನ್ನು ಕಳುಹಿಸಿದ ಬಳಿಕ ಮಲತಾಯಿಯ ಹೀನ ಕೃತ್ಯ ಬೆಳಕಿಗೆ ಬಂದಿದೆ. ಈ ಸಿಸಿಟಿವಿ ದೃಶ್ಯವನ್ನು ಸೆಪ್ಟೆಂಬರ್ 12ರಂದು ಬಾಲಕಿಯ ತಂದೆ ಸಿದ್ಧಾಂತ ಅವರ ವಾಟ್ಸಾಪ್‌ಗೆ ಪಕ್ಕದ ಮನೆ ಮಾಲೀಕ ಕಳುಹಿಸಿದ್ದಾರೆ. ಮೇಲ್ಮಹಡಿಯಲ್ಲಿ ಕುರ್ಚಿ ಇಟ್ಟು ಅದರ ಮೇಲೆ ಬುಟ್ಟಿ ಉಲ್ಟಾ ಇಟ್ಟು ಶಾನವಿಯನ್ನ ಕೂರಿಸಿರುವುದು ಪತ್ತೆಯಾಗಿದೆ.

   ಸಿಸಿಟಿವಿ ದೃಶ್ಯ ಆಧರಿಸಿ ಮಲತಾಯಿ ರಾಧಾ ವಿರುದ್ಧ ಮೃತ ಬಾಲಕಿಯ ಅಜ್ಜಿ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿದ್ದಾರೆ. ಮೃತ ಶಾನವಿ ತಾಯಿ ಕಾಯಿಲೆಗೆ ತುತ್ತಾಗಿ ಕಳೆದ 6 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಮೃತ ಶಾನವಿ ತಂದೆ ಸಿದ್ಧಾಂತ 2023ರಲ್ಲಿ ರಾಧಾ ಜೊತೆ 2ನೇ ವಿವಾಹವಾಗಿದ್ದರು.

Recent Articles

spot_img

Related Stories

Share via
Copy link