ಲಿಂಕ್ಡ್‌ ಇನ್‌ ನ 2025ರ ಟಾಪ್ ಎಂಬಿಎ ಕಾಲೇಜುಗಳ ಪಟ್ಟಿ ಬಿಡುಗಡೆ

ಬೆಂಗಳೂರು :

    ವೃತ್ತಿಪರರಿಗೆ ತಮ್ಮ ನೆಟ್ ವರ್ಕ್ ವಿಸ್ತರಿಸಲು ಮತ್ತು ಹೊಸ ಅವಕಾಶಗಳನ್ನು ಪಡೆಯಲು ಸಹಾಯ ಮಾಡುವ ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್ ವರ್ಕಿಂಗ್ ಜಾಲವಾದ ಲಿಂಕ್ಡ್‌ ಇನ್ ತನ್ನ ಮೂರನೇ ವಾರ್ಷಿಕ ಟಾಪ್ ಎಂಬಿಎ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವೃತ್ತಿ ಬೆಳವಣಿಗೆಗೆ ನೆರವಾಗುವ 100 ಜಾಗತಿಕ ಬಿಸಿನೆಸ್ ಸ್ಕೂಲ್‌ ಗಳನ್ನು ಹೆಸರಿಸಲಾಗಿದೆ.

   2010ರಿಂದ ಲಿಂಕ್ಡ್‌ ಇನ್‌ನಲ್ಲಿರುವ ಎಂಬಿಎ ಪದವಿ ಹೊಂದಿರುವ ಹಿರಿಯ ನಾಯಕರ ಸಂಖ್ಯೆ ಶೇ.32ರಷ್ಟು ಹೆಚ್ಚಾಗಿದೆ ಮತ್ತು ಉದ್ಯಮಿಗಳ ಸಂಖ್ಯೆ ಶೇ.87ಕ್ಕೆ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿರುವುದು ವಿಶೇಷವಾಗಿದೆ.

   ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‌ಬಿ) ಕಳೆದ ವರ್ಷ #6ನೇ ಸ್ಥಾನ ಇದ್ದಿದ್ದು, ಈ ವರ್ಷ 5ನೇ ಸ್ಥಾನ ಪಡೆದಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಅಹಮದಾಬಾದ್ #19ರಿಂದ #17ನೇ ಸ್ಥಾನಕ್ಕೆ ಏರಿದೆ. ಹೊಸದಾಗಿ ಪಟ್ಟಿಗೆ ಸೇರಿರುವ ಐಐಎಂ-ಕೋಲ್ಕತ್ತಾ #16 ಮತ್ತು ಐಐಎಂ-ಬೆಂಗಳೂರು #20 ಸ್ಥಾನಗಳನ್ನು ಪಡೆದಿವೆ. ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಜಾಗತಿಕ ಪಟ್ಟಿಯಲ್ಲಿ ಸತತ ಎರಡನೇ ವರ್ಷವೂ #1ನೇ ಸ್ಥಾನವನ್ನು ಉಳಿಸಿಕೊಂಡಿದೆ.

   ನಂತರ ಸ್ಥಾನಗಳ್ನು ಹಾರ್ವರ್ಡ್ ಯೂನಿವರ್ಸಿಟಿ (#2), ಇನ್‌ಸೀಡ್ (#3) ಮತ್ತು ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ (#4) ಪಡೆದುಕೊಂಡಿವೆ. ಈ ಪಟ್ಟಿಯನ್ನು ನೇಮಕಾತಿ ಮತ್ತು ಬೇಡಿಕೆ, ಅಭಿವೃದ್ಧಿಯ ಸಾಮರ್ಥ್ಯ, ನೆಟ್ ವರ್ಕಿಂಗ್ ಶಕ್ತಿ, ನಾಯಕತ್ವ ಸಾಮರ್ಥ್ಯ ಮತ್ತು ವೈವಿಧ್ಯತೆ ಎಂಬ ಐದು ಪ್ರಮುಖ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ:

   ಈ ಕುರಿತು ಮಾತನಾಡಿರುವ ಲಿಂಕ್ಡ್‌ ಇನ್ ನ್ಯೂಸ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ಸಂಪಾದಕಿ ಮತ್ತು ಕರಿಯರ್ ಎಕ್ಸ್ ಪರ್ಟ್ ನಿರಾಜಿತಾ ಬ್ಯಾನರ್ಜಿ ಅವರು , “ಎಂಬಿಎ ಆಯ್ಕೆ ಮಾಡುವುದು ನೀವು ನಿಮ್ಮ ಬದುಕಲ್ಲಿ ಮಾಡುವ ಅತ್ಯಂತ ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ಪಠ್ಯಕ್ರಮವು ಒಂದು ಭಾಗವಷ್ಟೇ, ಆದರೆ ಎಂಬಿಎ ಸಂದರ್ಭದಲ್ಲಿ ದೊರೆಯುವ ನೆಟ್ ವರ್ಕ್, ಹೆಚ್ಚು ಆತ್ಮವಿಶ್ವಾಸ ಮತ್ತು ಅನಂತ ಸಾಧ್ಯತೆಗಳು ನಿಮ್ಮ ವೃತ್ತಿಯನ್ನು ದಶಕಗಳವರೆಗೆ ರೂಪಿಸ ಬಹುದಾಗಿದೆ.

   ನಮ್ಮ ಡೇಟಾ ಪ್ರಕಾರ, ಸರಿಯಾದ ಕೋರ್ಸ್ ವ್ಯಕ್ತಿಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ಪದವಿ ಪಡೆದ ಬಳಿಕವೂ ನಿಮಗೆ ಸಹಾಯ ಮಾಡುವ ಒಂದು ಉತ್ತಮ ಸಮುದಾಯವನ್ನು ನಿರ್ಮಿಸುತ್ತದೆ. ಈ ಪಟ್ಟಿಯ ಮೂಲಕ ಎಂಬಿಎ ಆಕಾಂಕ್ಷಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಅತ್ಯುತ್ತಮ ಕೌಶಲ್ಯ ಮತ್ತು ನೆರವನ್ನು ಎಲ್ಲಿ ಪಡೆಯಬಹುದು ಎಂಬುದರ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ನೀಡುತ್ತಿದ್ದೇವೆ ಮತ್ತು ಇದರಿಂದ ಅವರು ಬೆಳೆಯಲು, ನಾಯಕತ್ವ ವಹಿಸಲು ಮತ್ತು ಯಶಸ್ವಿಯಾಗಲು ಸಹಾಯಕವಾದ ನಿರ್ಧಾರ ಗಳನ್ನು ತೆಗೆದುಕೊಳ್ಳಬಹುದು” ಎಂದು ಹೇಳಿದರು.

  ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ ನ ಡೀನ್ ಮತ್ತು ಪ್ರೊಫೆಸರ್ ಮದನ್ ಪಿಲ್ಲುಟ್ಲಾ ಮಾತನಾ ಡಿ, “ಎಂಬಿಎ ಎನ್ನುವುದು ತಮ್ಮ ವೃತ್ತಿ ಬೆಳವಣಿಗೆಯನ್ನು ವೇಗಗೊಳಿಸಲು, ದೃಷ್ಟಿಕೋನವನ್ನು ವಿಸ್ತಾರಗೊಳಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವದ ಅವಕಾಶಗಳನ್ನು ಪಡೆಯಲು ಬಯಸುವವರಿಗೆ ಉತ್ತಮ ಪದವಿಯಾಗಿದೆ. ಐಎಸ್‌ಬಿಯಲ್ಲಿನ ನಮ್ಮ ಒಂದು ವರ್ಷದ ಪಿಜಿಪಿ ಕೋರ್ಸ್ ಕೌಶಲ್ಯಗಳನ್ನು ಕಲಿಸುವುದಷ್ಟೇ ಅಲ್ಲ, ಬದಲಾಗುತ್ತಿರುವ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಾದ ಕಲಿಕಾ ಸಾಮರ್ಥ್ಯವನ್ನು ಬೆಳೆಸುತ್ತದೆ. ನಾವು ನಮ್ಮ ವಿದ್ಯಾರ್ಥಿಗಳಿಗೆ ನಾಯಕತ್ವದ ಆತ್ಮವಿಶ್ವಾಸವನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. ವಿಶ್ವಾದ್ಯಂತ 20,000ಕ್ಕೂ ಹೆಚ್ಚು ಐಎಸ್‌ಬಿ ಹಳೆಯ ವಿದ್ಯಾರ್ಥಿಗಳ ಸಮುದಾಯವು ಪಿಜಿಪಿ ಕೋರ್ಸ್ ನ ತರಗತಿಯಾಚೆಗೂ ವಿದ್ಯಾರ್ಥಿಗಳ ಪಯಣವನ್ನು ಸಮೃದ್ಧಗೊಳಿಸುತ್ತಿದೆ” ಎಂದು ಹೇಳಿದರು.

Recent Articles

spot_img

Related Stories

Share via
Copy link